ಕರ್ನಾಟಕ

karnataka

ETV Bharat / state

ಕಾರವಾರ: ಅಕ್ರಮ ಮದ್ಯ ಪತ್ತೆಗೆ ಅಬಕಾರಿ ಇಲಾಖೆಯಿಂದ ಡ್ರೋನ್ ಕಾರ್ಯಾಚರಣೆ - ಅಬಕಾರಿ ಡಿಸಿ ರೂಪಾ

ಗೋವಾ ಗಡಿ ಹಂಚಿಕೊಂಡಿರುವ ಉತ್ತರ ಕನ್ನಡದಲ್ಲಿ ಸಮುದ್ರ ಹಾಗೂ ಅರಣ್ಯ ಮಾರ್ಗದ ಮೂಲಕ ಅಕ್ರಮ ಮದ್ಯ ಸಾಗಾಟವನ್ನು ತಡೆಯಲು ಅಬಕಾರಿ ಇಲಾಖೆ ಡ್ರೋನ್ ಬಳಕೆಗೆ ಮುಂದಾಗಿದೆ.

drone-operation-by-excise-department-to-detect-illegal-liquor-in-kawar
ಕಾರವಾರ: ಗೋವಾದ ಅಕ್ರಮ ಮದ್ಯ ಪತ್ತೆಗೆ ಅಬಕಾರಿ ಇಲಾಖೆಯಿಂದ ಡ್ರೋನ್ ಕಾರ್ಯಾಚರಣೆ

By ETV Bharat Karnataka Team

Published : Jan 21, 2024, 4:15 PM IST

ಕಾರವಾರ:ರಾಜ್ಯ ಸರ್ಕಾರ ಅಬಕಾರಿ ಸುಂಕ ಹೆಚ್ಚಳ ಮಾಡುತ್ತಿದ್ದಂತೆ ಗೋವಾ ಮದ್ಯಕ್ಕೆ ಎಲ್ಲಿಲ್ಲದ ಡಿಮ್ಯಾಂಡ್ ಹೆಚ್ಚಾಗಿದೆ. ಹೀಗಾಗಿ ಗೋವಾ ಗಡಿ ಹಂಚಿಕೊಂಡಿರುವ ಉತ್ತರ ಕನ್ನಡದಲ್ಲಿ ಸಮುದ್ರ ಹಾಗೂ ಅರಣ್ಯ ಮಾರ್ಗದ ಮೂಲಕ ಕೋಟ್ಯಂತರ ರೂಪಾಯಿ ಮೌಲ್ಯದ ಮದ್ಯ ಅಕ್ರಮವಾಗಿ ಸಾಗಣೆಯಾಗುತ್ತಿದೆ. ಇದನ್ನು ತಡೆಯಲು ಅಬಕಾರಿ ಇಲಾಖೆ ಡ್ರೋನ್​ ಮೊರೆಹೋಗಿದೆ.

ಉತ್ತರ ಕನ್ನಡ ವಿಭಾಗದ ಅಬಕಾರಿ ಡಿಸಿ ರೂಪಾ ಮಾತನಾಡಿ, "ಅಬಕಾರಿ ಇಲಾಖೆಯಿಂದ ವಿಶೇಷ ತಂಡವನ್ನು ರಚಿಸಿ, ಗೋವಾದಿಂದ ಕರ್ನಾಟಕದ ಕಡೆ ಬರುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವುದು ಕಂಡುಬಂದರೆ ಪ್ರಕರಣ ದಾಖಲಿಸಲಾಗುತ್ತಿದೆ. ಸಮುದ್ರ ಮತ್ತು ಅರಣ್ಯ ಮಾರ್ಗವಾಗಿ ಅಕ್ರಮ ಮದ್ಯ ಸಾಗಾಟ ಮಾಡುತ್ತಿರುವುದು ಅರಣ್ಯ ಇಲಾಖೆಗೆ ಸವಾಲಾಗಿದೆ. ಅರಣ್ಯ ಮಾರ್ಗದಲ್ಲಿ ಮುಡಗೇರಿ ಡ್ಯಾಮ್ ಬಳಿ ಗೋವಾದಿಂದ ಮದ್ಯವನ್ನು ತಲೆ ಮೇಲೆ ಹೊತ್ತುಕೊಂಡು ಬಂದು ಅಲ್ಲಿ ಸಂಗ್ರಹಿಸಿಡಲಾಗುತ್ತಿತ್ತು. ಅಲ್ಲಿಗೆ ತೆರಳಲು ರಸ್ತೆ ವ್ಯವಸ್ಥೆ ಇಲ್ಲ. ನಮಗೆ ಸಿಕ್ಕ ಮಾಹಿತಿ ಆಧರಿಸಿ ಅಧಿಕಾರಿಗಳು ತಂಡ ಅಲ್ಲಿಗೆ ತೆರಳಿ ಸುಮಾರು 700 ಲೀಟರ್​ ನಷ್ಟು ಗೋವಾ ಮದ್ಯ ಮತ್ತು ಒಂದು ಬೈಕ್ ಅನ್ನು​ ವಶಕ್ಕೆ ಪಡೆದಿದ್ದೇವೆ" ಎಂದರು.

ಅಬಕಾರಿ ಇಲಾಖೆಯಿಂದ ಡ್ರೋನ್ ಕಾರ್ಯಾಚರಣೆ

"ಗೋವಾ ಗಡಿಯನ್ನು ಹಂಚಿಕೊಂಡಿರುವ ಕಾರವಾರ ಮತ್ತು ಜೋಯಿಡಾದ ಅನಮೋಡ್ ಭಾಗದಲ್ಲಿ ಅರಣ್ಯದ ಮೂಲಕ ಕೋಟ್ಯಂತರ ಮದ್ಯವನ್ನು ಅಬಕಾರಿ ಅಧಿಕಾರಿಗಳ ಕಣ್ತಪ್ಪಿಸಿ ಕರ್ನಾಟಕ್ಕೆ ಸಾಗಾಟ ಮಾಡಲಾಗುತ್ತದೆ. ಗಡಿಯಲ್ಲಿ ಬಿಗಿ ಭದ್ರತೆ ಇರವುದರಿಂದ ಮದ್ಯ ಸಾಗಾಟದಾರರು ಇದೀಗ ಜಲ ಮತ್ತು ಅರಣ್ಯ ಮಾರ್ಗವನ್ನು ಬಳಸಿಕೊಂಡು ಇಲಾಖೆ ಕಣ್ತಪ್ಪಿಸಿ ವ್ಯವಹಾರ ನಡೆಸುತಿದ್ದಾರೆ. ಸಿಬ್ಬಂದಿ ಕೊರತೆ ಸೇರಿದಂತೆ ನಾನಾ ಕಾರಣದಿಂದ ಅರಣ್ಯ ಮತ್ತು ಜಲಮಾರ್ಗದಲ್ಲಿ ಪತ್ತೆ ಹಚ್ಚಲು ಇಲಾಖೆಗೆ ಕಷ್ಟವಾಗಿತ್ತು. ಅಕ್ರಮ ಮದ್ಯ ಸಾಗಾಟವನ್ನು ತಡೆಯಲು ಅಬಕಾರಿ ಇಲಾಖೆ ದಾನಿಗಳ ಸಹಾಯದೊಂದಿಗೆ ಡ್ರೋನ್ ಕ್ಯಾಮರಾ ಖರೀದಿಸಿದ್ದು, ಅರಣ್ಯ ಭಾಗದಲ್ಲಿ ಸಂಚರಿಸಲು ಕಷ್ಟದ ಹಾದಿಯಲ್ಲಿ ಇದನ್ನು ಬಳಸಿ ಗೋವಾದ ಮದ್ಯ ಪತ್ತೆ ಮಾಡಲಾಗುತ್ತಿದೆ. ಸದ್ಯ ಅರಣ್ಯದಲ್ಲಿ ಕಳೆದ ಮೂರು ತಿಂಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಮದ್ಯ ಹಾಗೂ 45ಕ್ಕೂ ಹೆಚ್ಚು ಪ್ರಕರಣ ದಾಖಲಿಸಿದೆ" ಎಂದು ತಿಳಿಸಿದರು.

ಅಬಕಾರಿ ಅಧಿಕಾರಿ ಬಸವರಾಜ್ ಮಾತನಾಡಿ, "ಈ ಹಿಂದೆ ಶಿವಮೊಗ್ಗದಲ್ಲಿ ಡ್ರೋನ್​ ಬಳಸಿ ಗಾಂಜಾ, ಮದ್ಯವನ್ನು ಪತ್ತೆ ಹಚ್ಚಲಾಗಿತ್ತು. ಅಬಕಾರಿ ಇಲಾಖೆ ಕಳೆದ ವರ್ಷ ಎರಡು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮದ್ಯ ವಶಪಡಿಸಿಕೊಂಡಿತ್ತು. ಆದರೆ ಇದೀಗ ದಾನಿಗಳ ಸಹಾಯದಿಂದ ಡ್ರೋನ್ ಕ್ಯಾಮರಾ ಬಳಸಿ ಅರಣ್ಯ ಹಾಗೂ ಜಲಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರಿಂದಾಗಿ ದಾಳಿಗೆ ತೆರಳುವ ಅಬಕಾರಿ ಅಧಿಕಾರಿಗಳಿಗೆ ತಾವು ತಲುಪಲಾಗದ ಸ್ಥಳಗಳನ್ನೂ ಕೂಡ ತಲುಪಬಹುದಾಗಿದ್ದು, ಎಲ್ಲಿ ಏನಿದೆ ಎಂಬುದು ಸಹ ತಿಳಿಯುತ್ತಿದೆ. ಹೀಗಾಗಿ ಈ ಬಾರಿ ಅರಣ್ಯದಲ್ಲಿ ಸಹ ಗೋವಾ ಮದ್ಯವನ್ನು ಅನಾಯಾಸವಾಗಿ ಪತ್ತೆ ಹಚ್ಚಲಾಗುತ್ತಿದೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಸೇಫ್ ಲಾಕರ್​ನಲ್ಲಿ ಇರಿಸಿದ್ದ ಹಣ ಕದ್ದ ಕಚೇರಿಯ ಮಾಜಿ ನೌಕರ: ಬಂಧನ

ABOUT THE AUTHOR

...view details