ಕರ್ನಾಟಕ

karnataka

ETV Bharat / state

'ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಹೆಸರಲ್ಲಿ ಗೂಗಲ್ ಪೇ ಮೂಲಕ ಹಣ ಪಡೆದ ಪೊಲೀಸರು': ಗಂಭೀರ ಆರೋಪ - ಗೂಗಲ್ ಪೇ ಮೂಲಕ‌ ಹಣ

ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಹೆಸರಲ್ಲಿ ಸಂಚಾರಿ ಪೊಲೀಸರು ಗೂಗಲ್ ಪೇ ಮೂಲಕ‌ ಹಣ ಪಡೆದಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಎಕ್ಸ್ ಆ್ಯಪ್‌ನಲ್ಲಿ ತಿಳಿಸಿದ್ದಾರೆ.

Drink and drive  Google Pay  ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ  ಗೂಗಲ್ ಪೇ ಮೂಲಕ‌ ಹಣ
ಎಕ್ಸ್ ಆ್ಯಪ್ ಮೂಲಕ‌ ದೂರು

By ETV Bharat Karnataka Team

Published : Feb 25, 2024, 1:25 PM IST

ಬೆಂಗಳೂರು:ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆಯ ಹೆಸರಲ್ಲಿ ಮಹಿಳೆಯೊಬ್ಬರನ್ನು ತಡೆದು ಆನ್‌ಲೈನ್‌ ಮೂಲಕ ಹಣ ಸ್ವೀಕರಿಸಿದ ಆರೋಪ ಜೀವನ್ ಭೀಮಾನಗರ ಸಂಚಾರಿ ಪೊಲೀಸರ ವಿರುದ್ಧ ಕೇಳಿ‌ ಬಂದಿದೆ. ತಪಾಸಣೆ ಮಾಡದೇ ಸಂಚಾರಿ ನಿಯಮ ಉಲ್ಲಂಘನೆ ಎಂದು ಹೇಳಿ ಗೂಗಲ್ ಪೇ ಮೂಲಕ 5 ಸಾವಿರ ರೂಪಾಯಿ ಪಡೆದಿದ್ದಾರೆ ಎಂದು ಕೋಶಿ ವರ್ಗೀಸ್ ಎಂಬವರು ಎಕ್ಸ್ ಆ್ಯಪ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ತಮ್ಮ ಮಗಳನ್ನು ಹಳೆ ಏರ್‌ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆ ಬಳಿ ಪೊಲೀಸರು ತಡೆದಿದ್ದರು. ಈ ಸಂದರ್ಭದಲ್ಲಿ ತಪಾಸಣೆ ಮಾಡದೇ ಡ್ರಿಂಕ್ ಆ್ಯಂಡ್ ಡ್ರೈವ್ ಆರೋಪ ಮಾಡಿ ಮೊದಲಿಗೆ 15 ಸಾವಿರ ರೂ.ಗೆ ಬೇಡಿಕೆ ಇಟ್ಟರು. ನಂತರ ಗೂಗಲ್ ಪೇ ಮೂಲಕ ತಮ್ಮ ಫೋನ್‌ ನಂಬರ್​ಗೆ 5 ಸಾವಿರ ರೂ ಹಾಕಿಸಿಕೊಂಡರು. ಈ ವೇಳೆ ಪೊಲೀಸ್​ ಸಿಬ್ಬಂದಿ ಬಾಡಿ‌ ಕ್ಯಾಮ್ ಕಣ್ತಪ್ಪಿಸಿ ಹಣ ಪಡೆದುಕೊಂಡಿದ್ದಾಗಿ ಅವರು ತಿಳಿಸಿದ್ದಾರೆ.

ಇದಕ್ಕೆ ಎಕ್ಸ್ ಆ್ಯಪ್ ಮೂಲಕವೇ ಪ್ರತಿಕ್ರಿಯಿಸಿರುವ ಜೀವನ್ ಭೀಮಾ ನಗರ ಸಂಚಾರಿ ಠಾಣಾ ಪೊಲೀಸರು, ಹಣ ಸ್ವೀಕರಿಸಿರುವ ಗೂಗಲ್ ಪೇ ನಂಬರ್ ಹಂಚಿಕೊಳ್ಳುವಂತೆ‌ ಕೋರಿದ್ದಾರೆ.

ಇದನ್ನೂ ಓದಿ:ಪದೇ ಪದೆ ನಿಯಮ‌ ಉಲ್ಲಂಘಿಸುವ ವಾಹನ ಸವಾರರೇ ಎಚ್ಚರ: ವಾಹನ ನಾಶಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ

ABOUT THE AUTHOR

...view details