ಚಿಕ್ಕಮಗಳೂರು: ಪ್ರಸಿದ್ಧ ಯಾತ್ರಾ ಸ್ಥಳವಾದ ಕಳಸ ತಾಲೂಕಿನ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ನಿರ್ದಿಷ್ಟ ಉಡುಪುಗಳನ್ನು ನಿಗದಿಗೊಳಿಸಿ ದೇವಸ್ಥಾನದ ಆಡಳಿತ ಮಂಡಳಿ ಸಾರ್ವಜನಿಕವಾಗಿ ಪ್ರಕಟಣೆ ನೀಡಿದೆ.
ಅದರಂತೆ, ಪುರುಷರು ಪ್ಯಾಂಟ್, ಪಂಚೆ, ಶಲ್ಯ, ಶರ್ಟ್ ಧರಿಸುವುದು ಇನ್ನು ಕಡ್ಡಾಯವಾಗಲಿದೆ. ಸ್ತ್ರೀಯರು ಸೀರಿ ಮತ್ತು ಚೂಡಿದಾರ್ ಮಾತ್ರ ಧರಿಸಬೇಕು. ಸಾಂಪ್ರದಾಯಿಕ ಉಡುಗೆ ತೊಟ್ಟು ಬರದಿದ್ದರೆ ದೇವಸ್ಥಾನಕ್ಕೆ ಪ್ರವೇಶವಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.