ಕರ್ನಾಟಕ

karnataka

ETV Bharat / state

ಮಾಜಿ ಪತ್ನಿ, ಆಕೆಯ ಪ್ರಿಯಕರನ ಕೊಲೆ ಮಾಡಿ ವ್ಯಕ್ತಿ ಎಸ್ಕೇಪ್: ಅಥಣಿಯಲ್ಲಿ ಡಬಲ್ ಮರ್ಡರ್ - ಪತ್ನಿ ಪ್ರಿಯಕರನ ಕೊಲೆ

ಅಥಣಿ ತಾಲೂಕಿನಲ್ಲಿ ಡಬಲ್ ಮರ್ಡರ್ ನಡೆದಿದೆ. ಮಾಜಿ ಪತ್ನಿ ಮತ್ತು ಆಕೆಯ ಪತಿಯನ್ನು ಕೊಲೆ ಮಾಡಿ ವ್ಯಕ್ತಿ ಪರಾರಿಯಾಗಿದ್ದಾನೆ.

Etv Bharat
Etv Bharat

By ETV Bharat Karnataka Team

Published : Jan 30, 2024, 10:50 PM IST

ಅಥಣಿ (ಬೆಳಗಾವಿ): ಮದುವೆಯಾಗಿ ಕೈ ಕೊಟ್ಟ ಹೆಂಡತಿ ಹಾಗೂ ಆಕೆಯ ಪ್ರಿಯತಮನನ್ನು ಮಾಜಿ ಪತಿ ಕೊಚ್ಚಿ ಕೊಲೆ ಮಾಡಿದ ದಾರುಣ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಕಟನೂರ ಗ್ರಾಮದ ಹೊರವಲಯದಲ್ಲಿ ಡಬಲ್ ಮರ್ಡರ್​ಗೆ ಗ್ರಾಮವೇ ಬೆಚ್ಚಿ ಬಿದ್ದಿದೆ.

ಯಾಸಿನ ಬಾಗೊಡೆ (21) ಮತ್ತು ಹೀನಾ (ಹೆಸರು ಬದಲಿಸಲಾಗಿದೆ) (19) ಕೊಲೆಯಾದವರು. ತೌಫಿಕ್ ಕ್ಯಾಡಿ ಹತೈ ಮಾಡಿದ ಆರೋಪಿ. ದಾಳಿ ವೇಳೆ ಮಧ್ಯೆ ಪ್ರವೇಶಿಸಿದ ಅಮಿನಾಬಾಯಿ ಬಾಗೊಡೆ ಹಾಗೂ ಮುಸ್ತಫಾ ಮುಲ್ಲಾ ಮೇಲೂ ಆರೋಪಿ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಪರಿಣಾಮ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದು, ಮಹಾರಾಷ್ಟ್ರದ ಮೀರಜ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಲೆಯಾದ ಹೀನಾ ಹಾಗೂ ಆರೋಪಿ ತೌಫಿಕ್ ನಡುವೆ 4 ತಿಂಗಳ ಹಿಂದೆ ಮದುವೆಯಾಗಿತ್ತು. ಮದುವೆಯಾಗಿ ಒಂದೇ ತಿಂಗಳಿಗೆ ಯಾಸೀನ್ ಜೊತೆ ಹೀನಾ ಓಡಿ ಹೋಗಿದ್ದಳು. ಒಂದೂವರೆ ತಿಂಗಳ ಬಳಿಕ ಸಮಾಜದ ಮುಖ್ಯಸ್ಥರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಮಾಡಿದ್ದ ಗ್ರಾಮಸ್ಥರು, ಪತಿ ತೌಫಿಕ್ ಜೊತೆ ವಿವಾಹ ಮುರಿದು ಯಾಸೀನ್ ಜೊತೆ ಮದುವೆ ಮಾಡಿಸಿದ್ದರು.

ಇದರಿಂದ ಕೋಪಗೊಂಡಿದ್ದ ತೌಫಿಕ್ ಕೆಲ ದಿನ ಸುಮ್ಮನಿದ್ದು, ಇಂದು ಸಂಜೆ ಸಂಚು ರೂಪಿಸಿ ಯಾಸೀನ್ ಮನೆಗೆ ತೆರಳಿ ಇಬ್ಬರನ್ನೂ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಬರ್ತಡೇ ಪಾರ್ಟಿ ವೇಳೆ ಗಲಾಟೆ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

ABOUT THE AUTHOR

...view details