ಕರ್ನಾಟಕ

karnataka

ETV Bharat / state

'ನೇಹಾ ಹತ್ಯೆಯನ್ನು ರಾಜಕೀಯಕ್ಕೆ ಬಳಸಬೇಡಿ': ನಿರಂಜನ ಹಿರೇಮಠ ಮನವಿ - Niranjan Hiremath

ನೇಹಾ ಹತ್ಯೆ ವಿಚಾರವೇ ಬೇರೆ, ಚುನಾವಣೆಯೇ ಬೇರೆ. ನಾನೊಬ್ಬ ಕಾಂಗ್ರೆಸ್​ ಪಕ್ಷದ ಪ್ರತಿನಿಧಿಯಾಗಿ ಕೆಲವು ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದೇನೆ ಎಂದು ನಿರಂಜನ ಹಿರೇಮಠ ತಿಳಿಸಿದ್ದಾರೆ.

ನಿರಂಜನ ಹಿರೇಮಠ
ನಿರಂಜನ ಹಿರೇಮಠ (Etv Bharat)

By ETV Bharat Karnataka Team

Published : May 3, 2024, 9:48 PM IST

Updated : May 3, 2024, 10:54 PM IST

ನಿರಂಜನ ಹಿರೇಮಠ (Etv Bharat)

ಹುಬ್ಬಳ್ಳಿ:ನೇಹಾ ಹಿರೇಮಠ ಹತ್ಯೆಯನ್ನು ಯಾರೂ ರಾಜಕೀಯಕ್ಕೆ ಬಳಸಬಾರದು, ನಾನೂ ಬಳಸುವುದಿಲ್ಲ ಎಂದುನೇಹಾ ತಂದೆ ಹಾಗೂ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಮನವಿ ಮಾಡಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತಾಡಿದ ಅವರು, ಪಕ್ಷ ಮತ್ತು ಚುನಾವಣೆಗೆ ಸಂಬಂಧಿಸಿದಂತೆ ನನಗೆ ಕೆಲವು ಜವಾಬ್ದಾರಿಗಳಿರುತ್ತವೆ. ಪಕ್ಷದ ಕಾರ್ಯಕರ್ತನಾಗಿ ಅವುಗಳನ್ನು ನಿಭಾಯಿಸುತ್ತಿದ್ದೇನೆ. ಕಾಂಗ್ರೆಸ್​ ಅಭ್ಯರ್ಥಿಗಳಿಗೆ ಮತ ಹಾಕುವ ಮೂಲಕ ಪ್ರಚಂಡ ಗೆಲುವು ಕೊಡಿಸಬೇಕು ಎಂದು ಇದೇ ವೇಳೆ ಮತದಾರರಲ್ಲಿ ಮನವಿ ಮಾಡಿದರು.

ನೇಹಾ ಹತ್ಯೆ ನಡೆದ ಕೂಡಲೇ ನಿಮ್ಮ ನೆರವಿಗೆ ಧಾವಿಸಿದ್ದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು. ಈಗ ನೀವು ಅವರ ವಿರುದ್ಧವೇ ಕಾಂಗ್ರೆಸ್ ಅಭ್ಯರ್ಥಿಗಾಗಿ ಮತ ಕೇಳುತ್ತಿದ್ದೀರಲ್ಲ?, ಇದು ಎಷ್ಟರಮಟ್ಟಿಗೆ ಸರಿ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಜೋಶಿ ಅವರ ಉಪಕಾರ ಬಹಳ ದೊಡ್ಡದು. ಅವರೇ ನನ್ನ ನೆರವಿಗೆ ನಿಲ್ಲಬೇಕು ಅಂತ ಹೇಳಿದ್ದೂ ಇದೆ. ನಂತರ ತಮ್ಮ ಪಕ್ಷದ ಮುಖಂಡರೂ ಸಹ ನನ್ನನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಬೇರೆ ಬೇರೆ ಪಕ್ಷಗಳ ನಾಯಕರು ಸಹ ಭೇಟಿಯಾಗಿದ್ದಾರೆ. ಆದರೆ 5 ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ನನ್ನ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ ಎಂದು ಹೇಳಿದರು.

ನೇಹಾ ತಂದೆಯಾಗಿ ನನ್ನ ಹೋರಾಟ ಪಕ್ಷಾತೀತವಾಗಿದೆ. ಈ ಹೋರಾಟಕ್ಕೂ ಮತ್ತು ನನ್ನ ರಾಜಕೀಯ ಹೇಳಿಕೆಗಳಿಗೂ ಯಾವುದೇ ಸಂಬಂಧವಿಲ್ಲ. ನನ್ನ ಮಗಳ ಸಾವಿಗೆ ನ್ಯಾಯ ಸಿಗುವವರೆಗೂ ನನ್ನ ಹೋರಾಟ ಮುಂದುವರೆಯುತ್ತದೆ ಎಂದರು.

ಇದನ್ನೂ ಓದಿ:ಯುವತಿಯನ್ನು ಪ್ರೀತಿಸಿ ಕರೆದುಕೊಂಡು ಹೋದ ಆರೋಪ: ಯುವಕನ ತಾಯಿ‌ ಮೇಲೆ ಅಮಾನವೀಯ ಹಲ್ಲೆ, ದೂರು - ಪ್ರತಿದೂರು - Inhuman assault on woman

Last Updated : May 3, 2024, 10:54 PM IST

ABOUT THE AUTHOR

...view details