ಬೆಂಗಳೂರು:ರಾಜ್ಯದಲ್ಲಿ ಎರಡನೇ ಹಂತದ ಲೋಕಸಮರ ರಣಕಣದಲ್ಲಿ ಚುನಾವಣಾ ಕಾವು ಏರತೊಡಗಿದೆ. 14 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಎರಡನೇ ಹಂತದಲ್ಲಿ ನಡೆಯಲಿರುವ ರಾಜ್ಯದ ಪ್ರಮುಖ ಲೋಕಸಭೆ ಚುನಾವಣೆ ಸ್ಪರ್ಧಿಗಳ ವಿದ್ಯಾಭ್ಯಾಸದ ವಿವರ ಇಲ್ಲಿದೆ.
ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆಗೆ ಮೇ 7ಕ್ಕೆ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ (ಎಸ್‌ಸಿ), ಕಲಬುರಗಿ (ಎಸ್‌ಸಿ), ರಾಯಚೂರು (ಎಸ್‌ಟಿ), ಬೀದರ್, ಕೊಪ್ಪಳ, ಬಳ್ಳಾರಿ (ಎಸ್‌ಟಿ), ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಕ್ಷೇತ್ರದಲ್ಲಿ ಎರಡನೇ ಹಂತದ ಚುನಾವಣೆಗೆ ದಿನಗಣನೆ ಆರಂಭವಾಗಿದೆ.
ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಪ್ರಮುಖವಾಗಿ ಬಿಜೆಪಿ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನೇರ ಜಿದ್ದಾಜಿದ್ದಿ ಇದೆ. ನಮ್ಮನ್ನು ಪ್ರತಿನಿಧಿಸಲು ಮುಂದಾಗಿರುವವರ ವಿದ್ಯಾರ್ಹತೆ ಏನು ಎಂಬ ಬಗ್ಗೆ ಮತದಾರರಲ್ಲಿ ಕುತೂಹಲ ಇದ್ದೇ ಇರುತ್ತೆ. ಈ ಬಾರಿ ಚುನಾವಣಾ ಆಖಾಡಕ್ಕಿಳಿದಿರುವ ಪ್ರಮುಖ ಅಭ್ಯರ್ಥಿಗಳ ವಿದ್ಯಾರ್ಹತೆ ಏನು ಎಂಬ ವರದಿ ಇಲ್ಲಿದೆ.
ಕಣದಲ್ಲಿನ ಪ್ರಮುಖ ಅಭ್ಯರ್ಥಿಗಳ ವಿದ್ಯಾರ್ಹತೆ: ಚುನಾವಣಾ ಅಖಾಡಕ್ಕಿಳಿದಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಪ್ರಮುಖ ಪಕ್ಷೇತರ ಅಭ್ಯರ್ಥಿಗಳ ಪೈಕಿ 10 ಮಂದಿ ಪದವಿ ಶಿಕ್ಷಣದ ವಿದ್ಯಾರ್ಹತೆಯನ್ನು ಹೊಂದಿದ್ದಾರೆ. ಇನ್ನು ಕಣದಲ್ಲಿರುವ 5 ಅಭ್ಯರ್ಥಿಗಳು ಬಿಎ ಜೊತೆಗೆ ಕಾನೂನು (LLB) ಪದವಿ ಹೊಂದಿದ್ದಾರೆ.
ಇತ್ತ 14 ಕ್ಷೇತ್ರಗಳ ಪೈಕಿ ಮೂವರು ಅಭ್ಯರ್ಥಿಗಳು ಇಂಜಿನಿಯರಿಂಗ್ ಪದವಿಯ ವಿದ್ಯಾರ್ಹತೆ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ನೀಡಿದ ಅಫಿಡವಿಟ್ನಲ್ಲಿ ಮಾಹಿತಿ ನೀಡಿದ್ದಾರೆ. ಇತರ ಮೂವರು PUC ವರೆಗೆ ವಿದ್ಯಾರ್ಹತೆ ಹೊಂದಿದ್ದಾರೆ. ಇಬ್ಬರು ಎಂಬಿಬಿಎಸ್, ಎಂಡಿ ವಿದ್ಯಾರ್ಹತೆ ಹೊಂದಿದ್ದಾರೆ. ಒಬ್ಬ ಅಭ್ಯರ್ಥಿ 10ನೇ ಕ್ಲಾಸ್ವರೆಗೆ ಶಿಕ್ಷಣ ಪಡೆದಿದ್ದಾರೆ. 6 ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇನ್ನೂ ಮೂವರು ಅಭ್ಯರ್ಥಿಗಳು ಎಂಎಸ್ (surgery) ಸ್ನಾತಕೋತ್ತರ ಪಡೆದುಕೊಂಡಿದ್ದಾರೆ.
ಯಾರ ವಿದ್ಯಾರ್ಹತೆ ಏನು?:
ಬಾಗಲಕೋಟೆ ಕ್ಷೇತ್ರ:
ಬಿಜೆಪಿ ಅಭ್ಯರ್ಥಿ: ಗದ್ದಿಗೌಡರ್ ಚಂದನಗೌಡ - BA/LLB
ಕಾಂಗ್ರೆಸ್ ಅಭ್ಯರ್ಥಿ: ಸಂಯುಕ್ತಾ ಪಾಟೀಲ್ - BBA/LLB
ಬೆಳಗಾವಿ:
ಕಾಂಗ್ರೆಸ್ ಅಭ್ಯರ್ಥಿ: ಮೃಣಾಲ್ ಹೆಬ್ಬಾಳ್ಕರ್ - BE (Civil)
ಬಿಜೆಪಿ ಅಭ್ಯರ್ಥಿ: ಜಗದೀಶ್ ಶೆಟ್ಟರ್ - B.Com/LLB
ಬಳ್ಳಾರಿ:
ಬಿಜೆಪಿ ಅಭ್ಯರ್ಥಿ: ಶ್ರೀರಾಮುಲು - BA
ಕಾಂಗ್ರೆಸ್ ಅಭ್ಯರ್ಥಿ: ಇ.ತುಕಾರಾಂ - M.Com/PGDBA
ಬೀದರ್:
ಬಿಜೆಪಿ ಅಭ್ಯರ್ಥಿ: ಭಗವಂತ ಖೂಬಾ - BE (Mechanical)
ಕಾಂಗ್ರೆಸ್ ಅಭ್ಯರ್ಥಿ: ಸಾಗರ್ ಖಂಡ್ರೆ - BBA/LLB
ವಿಜಯಪುರ:
ಬಿಜೆಪಿ ಅಭ್ಯರ್ಥಿ: ರಮೇಶ್ ಜಿಗಜಿಣಗಿ - BA
ಕಾಂಗ್ರೆಸ್ ಅಭ್ಯರ್ಥಿ: ರಾಜು ಆಲಗೂರ - MA
ಚಿಕ್ಕೋಡಿ:
ಬಿಜೆಪಿ ಅಭ್ಯರ್ಥಿ: ಅಣ್ಣಾಸಾಹೆಬ್ ಜೊಲ್ಲೆ - PUC
ಕಾಂಗ್ರೆಸ್ ಅಭ್ಯರ್ಥಿ: ಪ್ರಿಯಾಂಕಾ ಜಾರಕಿಹೊಳಿ - MBA
ದಾವಣಗೆರೆ:
ಬಿಜೆಪಿ ಅಭ್ಯರ್ಥಿ: ಗಾಯಿತ್ರಿ ಸಿದ್ದೇಶ್ವರ್ - PUC