ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಏನೇನಾಗುತ್ತಿದೆ ಎಂಬ ಬಗ್ಗೆ ಹೈಕಮಾಂಡ್ ವರದಿ ತರಿಸಿಕೊಳ್ಳುತ್ತದೆ : ಡಿ ಕೆ ಶಿವಕುಮಾರ್ - DCM D K Shivakumar - DCM D K SHIVAKUMAR

ಡಿಸಿಎಂ ಡಿ. ಕೆ ಶಿವಕುಮಾರ್ ಅವರು ಹೈಕಮಾಂಡ್ ಆಗಿಂದಾಗ್ಗೆ ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ವರದಿಯನ್ನ ತರಿಸಿಕೊಳ್ಳುತ್ತದೆ ಎಂದು ಹೇಳಿದರು.

DCM D K Shivakumar
ಡಿಸಿಎಂ ಡಿ ಕೆ ಶಿವಕುಮಾರ್ (ETV Bharat)

By ETV Bharat Karnataka Team

Published : Oct 5, 2024, 5:14 PM IST

ಬೆಂಗಳೂರು : ರಾಜ್ಯದಲ್ಲಿ ಏನೇನಾಗುತ್ತಿದೆ ಎಂಬುದರ ಬಗ್ಗೆ ಹೈಕಮಾಂಡ್ ವರದಿಯನ್ನು ತರಿಸಿಕೊಳ್ಳುತ್ತದೆ. ಎಲ್ಲವನ್ನೂ ನೋಡಿ ಸುಮ್ಮನೆ ಕೂರುವುದಿಲ್ಲ ಎಂದು ಡಿಸಿಎಂ ಡಿ. ಕೆ ಶಿವಕುಮಾರ್ ತಿಳಿಸಿದರು.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಆಗಿಂದಾಗ ವರದಿಯನ್ನು ತರಿಸಿಕೊಳ್ಳುತ್ತೆ. ಅದಕ್ಕಾಗಿಯೇ ಒಂದು ರಿಸರ್ಚ್ ತಂಡವೇ ಇದೆ. ನಾವೂ ವರದಿಯನ್ನು ಕಳಿಸುತ್ತೇವೆ‌. ವರದಿ ತಯಾರಿಸಲು ರಿಸರ್ಚ್ ತಂಡವೇ ಇದೆ. ಏನೆಲ್ಲಾ ಆಗುತ್ತೆ ಎಂಬುದರ ವರದಿಯನ್ನು ರಿಸರ್ಚ್ ತಂಡ ತಲುಪಿಸುತ್ತೆ ಎಂದರು.

ಡಿಸಿಎಂ ಡಿ ಕೆ ಶಿವಕುಮಾರ್ (ETV Bharat)

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಸತೀಶ್ ಜಾರಕಿಹೊಳಿ ಭೇಟಿ‌ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ಪಾರ್ಟಿ ಲೀಡರ್ ಭೇಟಿ ಮಾಡಿದ್ದಾರೆ. ಇನ್ಯಾವ ಅಧ್ಯಕ್ಷರನ್ನ ಭೇಟಿ ಮಾಡ್ತಾರೆ?. ನಾನು ದೆಹಲಿಗೆ ಹೋದಾಗೆಲ್ಲಾ ಭೇಟಿ ಮಾಡ್ತೇನೆ. ಇಲ್ಲಿನ ವರದಿ ದೆಹಲಿಗೆ ಹೋಗಲಿದೆ. ಅದಕ್ಕಾಗಿ ಪ್ರತ್ಯೇಕ ಸಂಶೋಧನಾ ತಂಡವಿದೆ. ಮಾಧ್ಯಮಗಳಲ್ಲಿ ಏನೇನು ಬರುತ್ತದೆಯೋ ಅದನ್ನ ಕಳಿಸ್ತಾರೆ. ಶಾಸಕರು, ಸಚಿವರ ಭೇಟಿ ಮಾಡೋದು ಸಹಜ. ಪೊಲಿಟಿಕಲ್ ಪ್ರಾಬ್ಲಂ, ಆಡಳಿತ ಸಮಸ್ಯೆ ಇರುತ್ತವೆ. ಅಭಿವೃದ್ಧಿ ಸಮಸ್ಯೆಗಳು ಇರುತ್ತವೆ. ಖರ್ಗೆ- ಜಾರಕಿಹೊಳಿ‌ ಭೇಟಿ ಸಹಜ ಎಂದು ಹೇಳಿದರು.

ವೈಯಕ್ತಿಕ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ: ನಾನು ಯಾರಿಗೂ ಭಯ ಪಡಲ್ಲ ಎಂಬ ಹೆಚ್​ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರ ವೈಯಕ್ತಿಕ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. FIR ಬಗ್ಗೆ ಗೊತ್ತಿಲ್ಲ, ನಾನು ಹೋಂ ಮಿನಿಸ್ಟರ್ ಅಲ್ಲ. ಯಾವ ವಿಚಾರಗಳು ನನಗೆ ಗೊತ್ತಿಲ್ಲ. ಚನ್ನಪಟ್ಟಣದಲ್ಲಿ ಕೆಲಸ ಮಾಡ್ತಿದ್ದೇನೆ. ಸಿಎಸ್ಆರ್​ನಲ್ಲಿ ಶಾಲೆಗಳ ಕೆಲಸ ಮಾಡಿಸಿದ್ದೇನೆ. ಭೂಮಿ ಪೂಜೆ ಮಾಡಿಸಿದ್ದೇನೆ. ಅದು ಬಿಟ್ರೆ ನನಗೆ ಏನೂ ಗೊತ್ತಿಲ್ಲ ಎಂದು ಡಿಕೆಶಿ ಹೇಳಿದರು.

ಪಕ್ಷ ಎಲ್ಲವನ್ನು ಪರಿಶೀಲಿಸುತ್ತದೆ : ಜಾತಿ ಗಣತಿ ವರದಿ ಜಾರಿ ವಿಚಾರವಾಗಿ ಪ್ರತಿಕ್ರಿಯಿಸಿ, ವೈಯಕ್ತಿಕ ವಿಚಾರಗಳ ಅಭಿಪ್ರಾಯ ಬೇರೆ. ಪಕ್ಷದ ಅಭಿಪ್ರಾಯಗಳೇ ಬೇರೆ. ನಾನು ಪಾರ್ಟಿ ಹೇಳಿದಂತೆ ಕೇಳುವವನು. ಪಕ್ಷದ ವರಿಷ್ಠರು ಎಲ್ಲವನ್ನೂ ನೋಡ್ತಾರೆ‌. ರಾಹುಲ್ ಗಾಂಧಿ ಕೂಡ ಹೇಳಿದ್ದಾರೆ. ಹಾಗಾಗಿ ಪಕ್ಷ ಎಲ್ಲವನ್ನು ಪರಿಶೀಲಿಸುತ್ತದೆ. ಕ್ಯಾಬಿನೆಟ್​ಗೆ ಅದನ್ನು ತರಲಿ, ನೋಡೋಣ. ರಾಹುಲ್ ಗಾಂಧಿಯವರು ಹೇಳಿದ್ದು ಪ್ರಣಾಳಿಕೆಯಲ್ಲಿದೆ ಎಂದು ತಿಳಿಸಿದರು.

ಸಿಎಂ ಬದಲಾವಣೆಯ ಯಾವ ಚರ್ಚೆಯೂ ಇಲ್ಲ: ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಿಎಂ ಬದಲಾವಣೆಯ ಯಾವ ಚರ್ಚೆಯೂ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಇದನ್ನೂ ಓದಿ :ಸರ್ಕಾರದ ಪತನಕ್ಕೆ 1,200 ಕೋಟಿ ರೆಡಿ ಮಾಡಿರುವ ಆರೋಪದ ಬಗ್ಗೆ ಇಡಿಗೆ ದೂರು ನೀಡಲು ಚರ್ಚೆ: ಡಿಕೆಶಿ - D K Shivakumar

ABOUT THE AUTHOR

...view details