ಬೆಂಗಳೂರು:ಎಟಿಎಂ ದರೋಡೆ ಪ್ರಕರಣಗಳು ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಪ್ರಕರಣಗಳ ನಡುವೆ ಹಾಡಹಗಲೇ ಮನೆಗೆ ನುಗ್ಗಿದ ದುಷ್ಕರ್ಮಿಗಳ ಗುಂಪೊಂದು ಗನ್ ಪಾಯಿಂಟ್‌ನಲ್ಲಿ ಮನೆಯವರನ್ನು ಬೆದರಿಸಿ ದರೋಡೆಗೈದ ಘಟನೆ ಶುಕ್ರವಾರ ಮಧ್ಯಾಹ್ನ ಸಿಟಿ ಮಾರ್ಕೆಟ್ ಬಳಿಯ ಆರ್. ಟಿ. ಸ್ಟ್ರೀಟ್‌ನಲ್ಲಿ ನಡೆದಿದೆ.
ಮನೆ ಮಾಲೀಕ ನಾಗರಾಜ್ ಹಾಗೂ ಅವರ ತಾಯಿ ಮನೆಯಲ್ಲಿದ್ದಾಗ ನಾಲ್ಕೈದು ಜನರಿದ್ದ ದುಷ್ಕರ್ಮಿಗಳ ಗುಂಪು ಮನೆಗೆ ನುಗ್ಗಿ ಬೆದರಿಸಿ, ಗನ್ ತೋರಿಸಿ ತಾಯಿ ಮಗನ ಕೈಕಾಲು ಕಟ್ಟಿ ಹಾಕಿದ್ದಾರೆ. ಬಳಿಕ ಆರೋಪಿಗಳು 25 ಗ್ರಾಂ. ಚಿನ್ನಾಭರಣ ಹಾಗೂ 30 ಸಾವಿರ ರೂ. ನಗದು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.