ಕರ್ನಾಟಕ

karnataka

ETV Bharat / state

ಅ.31ರಿಂದ ಬೆಂಗಳೂರು-ಕೊಲಂಬೊ ನಡುವೆ ಹಗಲು ವಿಮಾನಯಾನ ಆರಂಭ - SRILANKAN AIRLINES

ಶ್ರೀಲಂಕಾ ಏರ್​ಲೈನ್ಸ್​ ಬೆಂಗಳೂರು ಮತ್ತು ಕೊಲಂಬೊ ಮಧ್ಯೆ ಹಗಲು ಹೊತ್ತಿನ ವಿಮಾನ ಸಂಚಾರ ಆರಂಭಿಸಲಿದೆ.

ಶ್ರೀಲಂಕಾ ಏರ್ ಲೈನ್ಸ್ ವಿಮಾನ
ಶ್ರೀಲಂಕಾ ಏರ್ ಲೈನ್ಸ್ ವಿಮಾನ (IANS)

By PTI

Published : Oct 25, 2024, 4:30 PM IST

ಬೆಂಗಳೂರು: ಶ್ರೀಲಂಕಾ ಏರ್‌ಲೈನ್ಸ್ ಅಕ್ಟೋಬರ್ 31ರಿಂದ ಬೆಂಗಳೂರು ಮತ್ತು ಕೊಲಂಬೊ ನಡುವೆ ಹಗಲು ಹೊತ್ತಿನಲ್ಲಿ ಹೊರಡುವ ಹೊಸ ವಿಮಾನಯಾನವನ್ನು ಪ್ರಾರಂಭಿಸಲಿದೆ. ಈ ಮೂಲಕ ಉಭಯ ನಗರಗಳ ನಡುವಿನ ವಾರದಲ್ಲಿ ಸಂಚರಿಸುವ ಒಟ್ಟು ವಿಮಾನಯಾನ ಸಂಖ್ಯೆ 10ಕ್ಕೇರಲಿದೆ.

ಹೊಸ ವಿಮಾನಸಂಚಾರದ ಹೊರಡುವ ಸಮಯವು ಭಾರತೀಯ ರಜಾದಿನಗಳು ಮತ್ತು ವ್ಯಾಪಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿಗೆ, ವಾರಾಂತ್ಯದಲ್ಲಿ ಸಣ್ಣದೊಂದು ಟ್ರಿಪ್ ಮಾಡಲು ಶ್ರೀಲಂಕಾಕ್ಕೆ ಪ್ರಯಾಣಿಸಲು ಸೂಕ್ತವಾಗಿದೆ ಎಂದು ಅದು ಹೇಳಿದೆ.

ಯುಎಲ್ 1174 ವಿಮಾನವು ಪ್ರತಿ ಗುರುವಾರ, ಶುಕ್ರವಾರ ಮತ್ತು ಶನಿವಾರ ಬೆಳಗ್ಗೆ 09:40ಕ್ಕೆ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ 11:10ಕ್ಕೆ ಕೊಲಂಬೊಗೆ ತಲುಪಲಿದೆ. ಯುಎಲ್ 1173 ವಿಮಾನವು ಪ್ರತಿ ಗುರುವಾರದಿಂದ ಶನಿವಾರದವರೆಗೆ ಕೊಲಂಬೋದಿಂದ ಬೆಳಗ್ಗೆ 7.20ಕ್ಕೆ ಹೊರಟು ಬೆಳಗ್ಗೆ 8.40ಕ್ಕೆ ಬೆಂಗಳೂರು ತಲುಪಲಿದೆ.

ಶ್ರೀಲಂಕಾ ಏರ್​ಲೈನ್ಸ್​ ಈ ಮಾರ್ಗದಲ್ಲಿ ಸೇವೆ ಸಲ್ಲಿಸಲು ಏರ್ ಬಸ್ ಎ 320 ವಿಮಾನವನ್ನು ನಿಯೋಜಿಸಲಿದೆ. ಎಲ್ಲಾ ಎ 320ಗಳು ಎರಡು-ವರ್ಗದ ಕಾನ್ಫಿಗರೇಶನ್ ಹೊಂದಿವೆ. ಅಂದರೆ ಇದು ಬಿಸಿನೆಸ್ ಮತ್ತು ಎಕಾನಮಿ ಕ್ಲಾಸ್ ಸೀಟುಗಳು ಇರಲಿವೆ.

ಹೊಸ ವಿಮಾನಯಾನಗಳ ಹೊರತಾಗಿ, ಬೆಂಗಳೂರು ಮತ್ತು ಕೊಲಂಬೊ ನಡುವೆ ಈಗ ಚಾಲನೆಯಲ್ಲಿರುವ ದೈನಂದಿನ ಸೇವೆಯನ್ನು ಮುಂದುವರಿಸುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ. ದೆಹಲಿ, ಮುಂಬೈ, ಹೈದರಾಬಾದ್, ಕೊಚ್ಚಿ, ತಿರುವನಂತಪುರಂ, ಚೆನ್ನೈ, ತಿರುಚ್ಚಿ, ಮಧುರೈ ಮತ್ತು ಬೆಂಗಳೂರು ಹೀಗೆ ಒಂಬತ್ತು ನಗರಗಳೊಂದಿಗೆ ಶ್ರೀಲಂಕಾ ಏರ್​ಲೈನ್ಸ್​ನ ನೆಟ್​ವರ್ಕ್​ನಲ್ಲಿ ಭಾರತವು ಅತ್ಯಧಿಕ ನಗರಗಳನ್ನು ಹೊಂದಿದೆ. ಎರಡೂ ದೇಶಗಳ ನಡುವೆ ವಾರಕ್ಕೆ ಸರಿಸುಮಾರು 90 ವಿಮಾನಯಾನಗಳು ನಡೆಯುತ್ತಿವೆ.

ಶ್ರೀಲಂಕಾದ ರಾಷ್ಟ್ರೀಯ ವಾಹಕ ಮತ್ತು ಒನ್ ವರ್ಲ್ಡ್ ಅಲೈಯನ್ಸ್ ಸದಸ್ಯನಾಗಿರುವ ಶ್ರೀಲಂಕನ್ ಏರ್ ಲೈನ್ಸ್ ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತದೆ. ಇದು 62 ದೇಶಗಳ 114 ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ಸಾಂಸ್ಕೃತಿಕ ಹೋಲಿಕೆಗಳು ಮತ್ತು ಭೌಗೋಳಿಕ ಸಾಮೀಪ್ಯದ ಕಾರಣಗಳಿಂದಾಗಿ ಶ್ರೀಲಂಕಾವು ಭಾರತದಿಂದ ವಿದೇಶ ಪ್ರವಾಸ ಕೈಗೊಳ್ಳುವವರ ಆಕರ್ಕ ತಾಣವಾಗಿದೆ. ದಕ್ಷಿಣದ ಕಡಲತೀರಗಳು, ಉತ್ತರದ ದೇವಾಲಯಗಳು ಮತ್ತು ಮಧ್ಯ ಭಾಗದ ಎತ್ತರದ ಪ್ರದೇಶಗಳು ಹೀಗೆ ಶ್ರೀಲಂಕಾ ಹಲವಾರು ಆಕರ್ಷಕ ಪ್ರವಾಸಿ ತಾಣಗಳನ್ನು ಹೊಂದಿದೆ.

ಅಕ್ಟೋಬರ್ 1, 2024ರಿಂದ ಭಾರತ, ಯುಕೆ ಮತ್ತು ಯುಎಸ್ ಸೇರಿದಂತೆ 35 ದೇಶಗಳ ನಾಗರಿಕರಿಗೆ ವೀಸಾಮುಕ್ತ ಪ್ರವೇಶವನ್ನು ಶ್ರೀಲಂಕಾ ಸರ್ಕಾರ ಘೋಷಿಸಿದೆ.

ಇದನ್ನೂ ಓದಿ: ನ್ಯಾಯಾಂಗ ಕಲಾಪ ನಡೆಸಿದ ಹೈದರಾಬಾದ್​ ಪೊಲೀಸ್ ಆಯುಕ್ತ: ಗಲಭೆಕೋರರಿಗೆ ಖಡಕ್ ವಾರ್ನಿಂಗ್

ABOUT THE AUTHOR

...view details