- ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ಗೆ ಗೆಲುವು- 6,33,059 ಮತ
- ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ಸೋಲು- 6,06,965 ಮತ
- ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಸೋಲು- 42,907
ದಾವಣಗೆರೆ: ಕ್ಷೇತ್ರದಲ್ಲಿ 6 ಲಕ್ಷಕ್ಕೂ ಅಧಿಕ ಮತಗಳನ್ನು ಗಳಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್, ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ಸೋಲನುಭವಿಸಿದ್ದಾರೆ.
ದಾವಣಗೆರೆಯಲ್ಲಿ ಪ್ರಭಾ ಮಲ್ಲಿಕಾರ್ಜುನ್ ಗೆಲುವು (ETV Bharat) ದಾವಣಗೆರೆ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಲೀಡ್ ಸಿಕ್ಕಿದೆ. ಇನ್ನುಳಿದ 2 ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಸಿಕ್ಕಿದೆ. ಎಸ್ಎಸ್ ಮಲ್ಲಿಕಾರ್ಜುನ್ ಅವರು ಪ್ರತಿನಿಧಿಸುವ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 24,988 ಸಾವಿರ ಮತಗಳು ಬಿಜೆಪಿಗೆ ಲೀಡ್ ಕೊಟ್ಟಿವೆ. ಆದರೂ ಕಾಂಗ್ರೆಸ್ ಗೆದ್ದು ಬೀಗಿದೆ.
ಪ್ರಭಾ ಮಲ್ಲಿಕಾರ್ಜುನ್ ಗೆಲುವು (ETV Bharat) ಯಾವ ಕ್ಷೇತ್ರದಲ್ಲಿ ಎಷ್ಟು ಮುನ್ನಡೆ:
ದಾವಣಗೆರೆ ದಕ್ಷಿಣ ಕ್ಷೇತ್ರ-ಕಾಂಗ್ರೆಸ್- 22,500 ಮತ
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ-ಬಿಜೆಪಿ-24,988 ಮತ
ಮಾಯಕೊಂಡ ಕ್ಷೇತ್ರ -ಕಾಂಗ್ರೆಸ್- 3,472 ಮತ
ಜಗಳೂರು ಕ್ಷೇತ್ರ -ಕಾಂಗ್ರೆಸ್-6,500 ಮತ
ಹರಿಹರ ಕ್ಷೇತ್ರ -ಕಾಂಗ್ರೆಸ್ - 4,599ಮತ
ಹರಪನಹಳ್ಳಿ ವಿಧಾನಸಭಾ ಕ್ಷೇತ್ರ-ಬಿಜೆಪಿ-2,500ಮತ
ಚನ್ನಗಿರಿ ಕ್ಷೇತ್ರ-ಕಾಂಗ್ರೆಸ್ - 9,511ಮತ
ಹೊನ್ನಾಳಿ ಕ್ಷೇತ್ರ-ಕಾಂಗ್ರೆಸ್ -7,378 ಮತ
ದಾವಣಗೆರೆ ಕ್ಷೇತ್ರದ ರಾಜಕೀಯ ಇತಿಹಾಸ :1998ರಲ್ಲಿ ಶಾಮನೂರು ಶಿವಶಂಕರಪ್ಪ ಗೆಲುವಿನ ನಂತರ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 26 ವರ್ಷಗಳಿಂದ ಜಯ ಸಾಧಿಸಿರಲಿಲ್ಲ. ಈ ಬಾರಿ ಶಾಮನೂರು ಶಿವಶಂಕರಪ್ಪ ಅವರ ಸೊಸೆ ಡಾ. ಪ್ರಭಾ ಮಲ್ಲಿಕಾರ್ಜುನ್ ಜಯ ಗಳಿಸುವ ಮೂಲಕ ಮತ್ತೆ ತಮ್ಮ ಕ್ಷೇತ್ರವನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಜಿಎಂ ಸಿದ್ದೇಶ್ವರ ಅವರು 1,69,702 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಜಿಎಂ ಸಿದ್ದೇಶ್ವರ ಅವರು ಒಟ್ಟು 6,52,996 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಹೆಚ್ಬಿ ಮಂಜಪ್ಪ ಅವರು 4,83,294 ಮತಗಳನ್ನು ಗಳಿಸಿದ್ದರು. ಸಂಸದ ಜಿಎಂ ಸಿದ್ದೇಶ್ವರ್ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದರಿಂದ ಕ್ಷೇತ್ರದ ಮೇಲೆ ಬಿಜೆಪಿ ಸಂಪೂರ್ಣ ಹಿಡಿತ ಸಾಧಿಸಿತ್ತು.
ಮತದಾರರ ಮಾಹಿತಿ:ಪುರುಷರು- 8,51,990, ಮಹಿಳೆಯರು - 8,57,117, ಇತರೆ-137, ಸೇವಾ- 565 ಸೇರಿ ಒಟ್ಟು ಮತದಾರರು- 17,09,244 ಇದ್ದಾರೆ. 2024ರ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಶೇಕಡಾ 76.99 ರಷ್ಟು ಮತದಾನವಾಗಿತ್ತು. 2019ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಶೇಕಡಾ 73.03 ರಷ್ಟು ಮತದಾನವಾಗಿತ್ತು.
ಇದನ್ನೂ ಓದಿ:ಲೋಕಸಭೆ ಫಲಿತಾಂಶ: ವಿಧಾನಸಭೆ ಚುನಾವಣೆಯಲ್ಲಿ ಫೇಲಾದ " ಈ 10 ರಾಜಕಾರಣಿ " ಗಳಿಗೆ ಸಂಸತ್ ಎಲೆಕ್ಷನ್ನಲ್ಲಿ ಪಾಸಾಗುವ ಆಸೆ! - EX MLA WINNNING EXPECTATIONS