ದಾವಣಗೆರೆ:ಜಿಲ್ಲೆಯ ನ್ಯಾಮತಿ ತಾಲೂಕಿನ ಚಿನ್ನಕಟ್ಟಿ ಗ್ರಾಮದ ಬಳಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಓಮ್ನಿ ಕಾರ್ ನಡುವೆ ಇಂದು ನಡೆದ ಅಪಘಾತದಲ್ಲಿ ಮೂವರು ಸಾವಿಗೀಡಾಗಿದ್ದು, ಆರು ಜನರು ಗಾಯಗೊಂಡಿದ್ದಾರೆ. ಮೃತರನ್ನು ನಂಜುಂಡಪ್ಪ (83), ದೇವರಾಜ್ (27) ಮತ್ತು ರಾಕೇಶ್ (30) ಎಂದು ಗುರುತಿಸಲಾಗಿದೆ.
ರಾಕೇಶ್ ಮತ್ತು ದೇವರಾಜ್ ಇಬ್ಬರೂ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದ ಗ್ರಾಮದ ನಿವಾಸಿಗಳು. ನಂಜುಂಡಪ್ಪ ಎಂಬವರು ಹರಮಘಟ್ಟ ಗ್ರಾಮದ ನಿವಾಸಿ. ಗಾಯಗೊಂಡ ಆರು ಜನರಲ್ಲಿ ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದವರು ನ್ಯಾಮತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.