ಚಿಕ್ಕಮಗಳೂರು:ಶ್ರೀರಾಮಸೇನಾ ದತ್ತಮಾಲಾ ಅಭಿಯಾನದ ಅಂಗವಾಗಿ ಇಂದು ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ ನಡೆಯಲಿದ್ದು, ನಗರ ಹಾಗೂ ದತ್ತಪೀಠದ ಸುತ್ತಮುತ್ತಲು ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.
ಸಾವಿರಾರು ಭಕ್ತರು ಶಂಕರಮಠದ ಬಳಿ ಧರ್ಮಸಭೆ ನಡೆಸಿದ ನಂತರ ಶೋಭಾಯಾತ್ರೆ ಹಾಗೂ ದತ್ತಪೀಠದಲ್ಲಿ ದತ್ತ ಪಾದುಕೆ ದರ್ಶನ ಪಡೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ದತ್ತಪೀಠ ಹಾಗೂ ಚಿಕ್ಕಮಗಳೂರು ನಗರದಲ್ಲಿ 1,700ಕ್ಕೂ ಅಧಿಕ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.
ಶನಿವಾರ ಚಿಕ್ಕಮಗಳೂರು ಜಿಲ್ಲೆಯ ನಗರದಲ್ಲಿ ಗಸ್ತು ಹೊಡೆದ ಪೊಲೀಸರು. (ETV Bharat) ಓರ್ವ ಎಸ್ಪಿ, ಓರ್ವ ಹೆಚ್ಚುವರಿ ಎಸ್ಪಿ, 6 ಡಿವೈಎಸ್ಪಿ, 15 ಸಿಪಿಐ ಸೇರಿದಂತೆ 100 ಪಿಎಸ್ಐ, 1,500 ಸಿವಿಲ್ ಪೊಲೀಸರು ಹಾಗೂ 8 ಕೆ.ಎಸ್.ಆರ್.ಪಿ. ತುಕಡಿಗಳು, 11 ಡಿಎಆರ್ ತುಕಡಿ ಕ್ಯೂ.ಆರ್.ಟಿ. ಟೀಂಗಳು ಮತ್ತು 2 ಎಸಿ ಟೀಂಗಳನ್ನು ನಿಯೋಜಿಸಲಾಗಿದೆ. ದತ್ತಪೀಠ ಮಾರ್ಗದ ಸೂಕ್ಷ್ಮ ಪ್ರದೇಶದಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.
ದತ್ತಮಾಲಾ ಅಭಿಯಾನಕ್ಕೆ ಪೊಲೀಸ್ ಭದ್ರತೆ (ETV Bharat) ಪೆಟ್ರೋಲ್ ಬಂಕ್ ಮಾಲೀಕರಿಗೆ ಸೂಚನೆ: ಈ ಬಾರಿ ಹೆಚ್ಚು ಡ್ರೋನ್ ಕ್ಯಾಮರಾಗಳನ್ನು ಬಳಸಲಾಗಿದೆ. ಬಾಟಲಿಯಲ್ಲಿ ಪೆಟ್ರೋಲ್ ಕೊಡದಂತೆ ಬಂಕ್ ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ ತಿಳಿಸಿದರು.
ದತ್ತಮಾಲಾ ಅಭಿಯಾನಕ್ಕೆ ಪೊಲೀಸ್ ಭದ್ರತೆ (ETV Bharat) ಇದನ್ನೂ ಓದಿ:ದತ್ತಪೀಠದಲ್ಲಿ ದತ್ತಮಾಲಾ ಸಂಭ್ರಮ; ಮಾಲಾಧಾರಿಗಳಿಂದ ಪಡಿ ಸಂಗ್ರಹ