ಕರ್ನಾಟಕ

karnataka

ETV Bharat / state

ತುಂಗಭದ್ರಾ ಡ್ಯಾಂಗೆ ಕ್ರಸ್ಟ್​ ಗೇಟ್ ಕೂರಿಸುವ ವಿಚಾರ: ನಾಳೆಯೊಳಗೆ ಗುಡ್​ ನ್ಯೂಸ್​​​ ಎಂದ ಕನ್ನಯ್ಯ ನಾಯ್ಡು - tungabhadra dam crest gate - TUNGABHADRA DAM CREST GATE

ಕ್ರಸ್ಟ್​ ಗೇಟ್​ ಕೆಲಸ ಯಶಸ್ವಿಯಾಗಿ ಮುಗಿದ ನಂತರ ಸೆಲೆಬ್ರೇಷನ್ ಮಾಡೋಣ. ನಾಳೆಯೊಳಗೆ ಗುಡ್​ ನ್ಯೂಸ್​​​ ಕೊಡುತ್ತೇನೆ ಎಂದು ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಹೇಳಿದ್ದಾರೆ.

ಡ್ಯಾಂ ತಜ್ಞ ಕನ್ನಯ್ಯ ನಾಯ್ಡು
ಡ್ಯಾಂ ತಜ್ಞ ಕನ್ನಯ್ಯ ನಾಯ್ಡು (ETV Bharat)

By ETV Bharat Karnataka Team

Published : Aug 15, 2024, 12:17 PM IST

ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಅವರ ಹೇಳಿಕೆ (ETV Bharat)

ಕೊಪ್ಪಳ: 'ಕ್ರಸ್ಟ್​ ಗೇಟ್​​​​ ಕೂರಿಸುವುದೇ ದೊಡ್ಡ ಚಾಲೆಂಜ್​​. ಗೇಟ್​ನ ಒಂದು ಭಾಗವನ್ನು ನೀರಿನಲ್ಲಿ ಇಳಿಸಿದ ನಂತರದಲ್ಲಿ ಅಷ್ಟೊಂದು ಕಷ್ಟ ಆಗಲ್ಲ. ನನ್ನ ಜೀವನದಲ್ಲಿ ಇದನ್ನು ದೊಡ್ಡ ಸವಾಲಾಗಿ​​ ತೆಗೆದುಕೊಂಡಿದ್ದೇನೆ. ಇದೇ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಎಲ್ಲಾ ಒಳ್ಳೆಯದಾಗುತ್ತದೆ, ನಾಳೆಯೊಳಗೆ ಗುಡ್​ ನ್ಯೂಸ್​​​ ಕೊಡುತ್ತೇನೆ' ಎಂದು ಡ್ಯಾಂನ ಬಳಿ ತಜ್ಞ ಕನ್ನಯ್ಯ ನಾಯ್ಡು ಹೇಳಿದರು.

ಕೊಪ್ಪಳ ತಾಲೂಕಿನ ಮುನಿರಾಬಾದ್​ನಲ್ಲಿ ಇಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, "ಇವತ್ತು ಮಧ್ಯಾಹ್ನದಿಂದ ನಾವು ಕ್ರಸ್ಟ್​​ ಗೇಟ್​ನ ಭಾಗಗಳನ್ನು ನೀರಿನಲ್ಲಿ ಇಳಿಸಲು ಸನ್ನದ್ಧರಾಗಿದ್ದೇವೆ. ಇದಕ್ಕೆ ಎಷ್ಟು ಜನ ಬೇಕು, ಸಮಯವೆಷ್ಟು ಬೇಕು ಎಂಬುದನ್ನು ಹೇಳಲು ಸಾಧ್ಯವಿಲ್ಲ. ಅಲ್ಲಿ ಗುಂಡಿಗೆ ಗಟ್ಟಿ ಇರುವವರೇ ಕೆಲಸಕ್ಕೆ ಸನ್ನದ್ಧರಾಗಿದ್ದಾರೆ. ಇನ್ನು ಎರಡು ಗೇಟ್​​​ ಭಾಗಗಳು ಇಂದು ಮಧ್ಯಾಹ್ನದ ಹೊತ್ತಿಗೆ ನಮಗೆ ಸಿಗಲಿವೆ. ಒಟ್ಟಾರೆ ನಾವು ಹೊಸ ಪ್ರಯತ್ನವೊಂದಕ್ಕೆ ಸಿದ್ಧರಾಗಿದ್ದೇವೆ. ಕೆಲಸ ಯಶಸ್ವಿಯಾಗಿ ಮುಗಿದ ನಂತರ ಸೆಲೆಬ್ರೇಷನ್ ಮಾಡೋಣ ಎಂದರು.

ಇದನ್ನೂ ಓದಿ:ಟಿಬಿ ಡ್ಯಾಂಗೆ ಸ್ಟಾಪ್ ಲಾಗ್ ಗೇಟ್ ನಿರ್ಮಾಣ; ಗುರುವಾರ ನೀರಿಗಿಳಿಸುವ ಕಾರ್ಯ - TB Dam Crest Gate

ABOUT THE AUTHOR

...view details