ಚಾಮರಾಜನಗರ:ಫೆಂಗಲ್ ಚಂಡಮಾರುತ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಮಳೆರಾಯನ ಆರ್ಭಟ ಮುಂದುವರೆದಿದೆ. ಹಾಗೆಯೇ, ಕಳೆದೆರಡು ದಿನಗಳಿಂದ ಸತತವಾಗಿ ಜೋರು ಮಳೆಯಾಗುತ್ತಿದ್ದು ಹನೂರು ತಾಲೂಕು ವ್ಯಾಪ್ತಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಮಳೆಯಿಂದ ಮಲೆ ಮಹದೇಶ್ವರ ಬೆಟ್ಟದ ತಂಬಡಗೇರಿ ಸಮೀಪದ ಪುಟ್ಟಸ್ವಾಮಿ ಹಾಗೂ ರಾಜೇಶ್ವರಿ ಎಂಬ ದಂಪತಿಗೆ ಸೇರಿದ ಮನೆಯ ಗೋಡೆ ಕುಸಿದು ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ಇದಲ್ಲದೆ, ಒಂದು ಭಾಗದ ಗೋಡೆ ಕುಸಿದು ಬೀಳುವ ಆತಂಕವಿದೆ.
ಭಾರೀ ಮಳೆಗೆ ಕುಸಿದ ಗೋಡೆ (ETV Bharat) ದಂಪತಿ ಸದ್ಯಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕೊಡಬೇಕು ಎಂದು ಮನವಿ ಮಾಡಿದ್ದಾರೆ.
ನೆಲಕಚ್ಚಿದ ರಾಗಿ (ETV Bharat) ರಾಗಿ, ತೊಗರಿ ಬೆಳೆಗೆ ಹಾನಿ: ಕಳೆದ ಎರಡು ವರ್ಷಗಳಿಂದ ಬರಗಾಲದಿಂದ ತತ್ತರಿಸಿದ್ದ ರೈತರಿಗೆ ಈ ಬಾರಿ ಸಮರ್ಪಕ ಮಳೆಯಾಗಿದ್ದು ಉತ್ತಮ ಬೆಳೆ ಕೈಸೇರುವ ನಿರೀಕ್ಷೆಯಲ್ಲಿದ್ದರು. ಆದರೆ ಫೆಂಗಲ್ ಚಂಡಮಾರುತದ ಮಳೆಗೆ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡಸಲನತ್ತ ಗ್ರಾಮದ ರೈತ ನಾಗರಾಜು ಎಂಬವರು ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ರಾಗಿ ಹಾಗೂ ತೊಗರಿ ಬೆಳೆ ನೆಲಕಚ್ಚಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ಒದಗಿಸಿ ಕೊಡಬೇಕು ಎಂದು ರೈತ ನಾಗರಾಜು ಮನವಿ ಮಾಡಿದ್ದಾರೆ.
ಮಳೆಯಿಂದ ತೊಗರಿ ಬೆಳೆಗೆ ಹಾನಿ (ETV Bharat) ಇದನ್ನೂ ಓದಿ:ಫೆಂಗಲ್ ಅಬ್ಬರ: ಕೊಡಗಿಗೆ ರೆಡ್, ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್; ಕೆಲವೆಡೆ ನಾಳೆಯೂ ಶಾಲೆಗೆ ರಜೆ