ಕರ್ನಾಟಕ

karnataka

ETV Bharat / state

'ಬಂಧಿಸಿದ್ದು ಯಾಕೆ ಅಂತಾನೇ ಗೊತ್ತಿಲ್ಲ': ನ್ಯಾಯಾಧೀಶರ ಮುಂದೆ ಸಿ.ಟಿ. ರವಿ ಹೇಳಿಕೆ; ಮಧ್ಯಾಹ್ನಕ್ಕೆ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ - CT RAVI IN COURT

ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಬೆಳಗಾವಿಯ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರಾಗಿದ್ದು, 'ನನ್ನನ್ನು ಯಾವ ಕಾರಣಕ್ಕೆ ಬಂಧಿಸಿದ್ದಾರೆ ಅಂತಾ ತಿಳಿಸಿಲ್ಲ' ಎಂದಿದ್ದಾರೆ. ನ್ಯಾಯಾಲಯ ಮಧ್ಯಾಹ್ನಕ್ಕೆ ತೀರ್ಪು ಕಾಯ್ದಿರಿಸಿದೆ.

BELAGAVI ಸಿಟಿ ರವಿ MINISTER LAKSHMI HEBBALKAR  CT RAVI ARREST
ಬೆಳಗಾವಿ ನ್ಯಾಯಾಲಯಕ್ಕೆ ಸಿ.ಟಿ. ರವಿ ಹಾಜರುಪಡಿಸಿದ ಪೊಲೀಸರು (ETV Bharat)

By ETV Bharat Karnataka Team

Published : 12 hours ago

ಬೆಳಗಾವಿ:ಬೆಳಗಾವಿಯ 5ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರಾದ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, "ನನ್ನನ್ನು ಯಾವ ಕಾರಣಕ್ಕೆ ಬಂಧಿಸಿದ್ದಾರೆ ಅಂತಾ ತಿಳಿಸಿಲ್ಲ. ಇದುವರೆಗೆ ನನ್ನ ಪ್ರಶ್ನೆಗೆ ಯಾರೂ ಉತ್ತರಿಸಿಲ್ಲ" ಎಂದು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದರು. ವಿಚಾರಣೆ ನಡೆಸಿರುವ ನ್ಯಾಯಾಲಯ ಮಧ್ಯಾಹ್ನಕ್ಕೆ ತೀರ್ಪು ಕಾಯ್ದಿರಿಸಿದೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಅವರಿಗೆ ಅವಾಚ್ಯ ಪದ ಬಳಸಿ ನಿಂದಿಸಿದ ಆರೋಪದ ಮೇಲೆ ಬಂಧಿತರಾದ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಅವರನ್ನು ಶುಕ್ರವಾರ ಬೆಳಿಗ್ಗೆ 11.10ಕ್ಕೆ ನಗರದ 5ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಧೀಶರಾದ ಸ್ಪರ್ಶಾ ಡಿಸೋಜಾ ಅವರ ಮುಂದೆ ಸಿ.ಟಿ. ರವಿ ಅವರನ್ನು ಹಾಜರುಪಡಿಸಲಾಯಿತು. ಬಿಜೆಪಿ ರಾಜ್ಯ ವಕ್ತಾರರೂ ಆಗಿರುವ ವಕೀಲ ಎಂ.ಬಿ.ಝಿರಲಿ ಅವರು ಸಿ.ಟಿ. ರವಿ ಪರ ವಕಾಲತ್ತು ವಹಿಸಿದ್ದಾರೆ.

"ನಿನ್ನೆ ರಾತ್ರಿಯಿಂದ ನನ್ನ ಮೇಲೆ‌ ಮೂರು ಬಾರಿ ಹಲ್ಲೆ ಮಾಡಲಾಗಿದೆ. ಸುತ್ತಲೂ‌ ಪೊಲೀಸರೇ ಇದ್ದರು. ಅವರೇ ಹಲ್ಲೆ ಮಾಡಿರಬಹುದು.‌ ಪ್ರತಿ 10 ನಿಮಿಷಕ್ಕೆ ಅವರಿಗೆ ಕಾಲ್ ಬರುತಿತ್ತು. ಅದರಲ್ಲಿ ಬಂದ ನಿರ್ದೇಶನದಂತೆ ಅವರು ವರ್ತಿಸುತ್ತಿದ್ದರು. ಯಾವ ಕಾರಣಕ್ಕೆ ಬಂಧನ ಮಾಡಲಾಗಿದೆ ಎನ್ನುವುದನ್ನೂ ತಿಳಿಸಿಲ್ಲ.‌ ನನ್ನ ಪ್ರಶ್ನೆಗೆ ಯಾರು ಉತ್ತರಿಸಿಲ್ಲ" ಎಂದು ಸಿ.ಟಿ.ರವಿ ನ್ಯಾಯಾಲಯದ ಮುಂದೆ ತಿಳಿಸಿದ್ದಾರೆ.

5ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರಾದ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ (ETV Bharat)

"ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಲಾಗಿದೆ. ನಾನು ದೂರು ಕೊಟ್ಟರೂ ಪೊಲೀಸರು ಸ್ವೀಕರಿಸಲಿಲ್ಲ ಎಂದು ಸಿ.ಟಿ.ರವಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದು, ಅವರ ಹೇಳಿಕೆಯನ್ನು ನ್ಯಾಯಾಧೀಶರು" ದಾಖಲಿಸಿಕೊಂಡಿದ್ದಾರೆ.

"ಪೊಲೀಸರು ಸಿ.ಟಿ. ರವಿ ಅವರ ಕೈಗಡಿಯಾರವನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಿದ್ದಾರೆ" ಎಂದು ವಕೀಲ ಎಂ.ಬಿ. ಜಿರಲಿ ಅವರು ಪೊಲೀಸ್ ಅಧಿಕಾರಿಗಳ ವರ್ತನೆ ಬಗ್ಗೆ ನ್ಯಾಯಾಧೀಶರ ಮುಂದೆ ವಾದ ಮಂಡಿಸಿದರು. ಸಿ.ಟಿ. ರವಿ ಅವರ ಅರ್ಜಿ ವಿಚಾರಣೆ ನಂತರ ನ್ಯಾಯಾಲಯವು ತೀರ್ಪನ್ನು ಮಧ್ಯಾಹ್ನ 3 ಗಂಟೆಗೆ ಕಾಯ್ದಿರಿಸಿದೆ. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು ತೀರ್ಪನ್ನು ಮಧ್ಯಾಹ್ನ 3 ಗಂಟೆಗೆ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಒಂದು ಗಂಟೆ ನ್ಯಾಯಾಲಯಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಗಮಿಸಿ, ಬಿಜೆಪಿ ಮುಖಂಡರು ಹಾಗೂ ವಕೀಲರೊಂದಿಗೆ ಚರ್ಚೆ ನಡೆಸಿದರು. ನ್ಯಾಯಾಲಯದ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇನ್ನು ಸಿ.ಟಿ.ರವಿ ಅವರ ಮೇಲಿನ ಹಲ್ಲೆ ಖಂಡಿಸಿ ವಿಜಯೇಂದ್ರ ನೇತೃತ್ವದಲ್ಲಿ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆಗೆ ಬಿಜೆಪಿ ಕಾರ್ಯಕರ್ತರು ಮುಂದಾಗಿದ್ದಾರೆ.

ಇದನ್ನೂ ಓದಿ:ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಸಿ.ಟಿ. ರವಿ 12 ಬಾರಿ‌ ಅಶ್ಲೀಲ ಪದ ಬಳಸಿದ್ದಾರೆ, ನನ್ನ ಬಳಿ ದಾಖಲೆ ಇದೆ: ಡಿಕೆಶಿ

ಇದನ್ನೂ ಓದಿ:'ಸಿ.ಟಿ ರವಿ ಹಲವು ಬಾರಿ ಆ ಶಬ್ದ ಬಳಸಿದರು': ಸುದ್ದಿಗೋಷ್ಠಿಯಲ್ಲಿ ಗದ್ಗದಿತರಾದ ಲಕ್ಷ್ಮಿ ಹೆಬ್ಬಾಳ್ಕರ್

ABOUT THE AUTHOR

...view details