ಕರ್ನಾಟಕ

karnataka

ETV Bharat / state

ದೇವರಾಜ ಅರಸ್​ ಟ್ರಕ್​ ಟರ್ಮಿನಲ್​ ಹಗರಣ; ವೀರಯ್ಯಗೆ ಷರತ್ತುಬದ್ಧ ಜಾಮೀನು - bail to D Veeraiah - BAIL TO D VEERAIAH

ದೇವರಾಜ್ ಅರಸ್ ಟ್ರಕ್ ಟರ್ಮಿನಲ್​ ನಿಗಮ ಹಗರಣ ಪ್ರಕರಣದ ಆರೋಪಿ ಡಿ. ವೀರಯ್ಯ ಅವರಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

court
ಸಿವಿಲ್ ನ್ಯಾಯಾಲಯಗಳ ಸಂಕೀರ್ಣ (ETV Bharat)

By ETV Bharat Karnataka Team

Published : Jul 24, 2024, 9:10 PM IST

ಬೆಂಗಳೂರು : ದೇವರಾಜ ಅರಸ್​ ಟ್ರಕ್​ ಟರ್ಮಿನಲ್​ ಹಗರಣ ಪ್ರಕರಣದ ಆರೋಪಿ ಆಗಿರುವ ಡಿ. ವೀರಯ್ಯ ಅವರಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಪ್ರಕರಣದ ವಿಚಾರಣೆ ನಡೆಸಿ ನಗರದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ವೀರಯ್ಯ ಅವರಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.

ಅಲ್ಲದೇ, 2 ಲಕ್ಷ ರೂ. ಗಳ ಶ್ಯೂರಿಟಿ, ಅಷ್ಟೇ ಮೌಲ್ಯದ ಖಾತರಿ, ಪಾಸ್​ಪೋರ್ಟ್​ನ ತನಿಖಾಧಿಕಾರಿಗಳಿಗೆ ಒಪ್ಪಿಸಬೇಕು. ತನಿಖೆಗೆ ಸಹಕರಿಸಬೇಕು ಮತ್ತು ಸಾಕ್ಷ್ಯಗಳ ನಾಶಕ್ಕೆ ಮುಂದಾಗಬಾರದು ಎಂದು ಷರತ್ತುಗಳನ್ನು ವಿಧಿಸಿದೆ.

ಪ್ರಕರಣ : ದೇವರಾಜ ಅರಸು ಟ್ರಕ್​ ಟರ್ಮಿನಲ್​ ನಿಗಮದಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಕಾಯಿದೆ ಉಲ್ಲಂಘನೆ ಮಾಡಿ 47 ಕೋಟಿ ಹಗರಣ ನಡೆಸಲಾಗಿದೆ ಎಂಬ ಆರೋಪ ಎದುರಾಗಿತ್ತು. ಯಾವುದೇ ಕಾಮಗಾರಿ ನಡೆಸದೇ ಬಿಲ್​ಗಳನ್ನು ಮಂಜೂರು ಮಾಡಲಾಗಿದೆ.

ಆ ಮೂಲಕ 47.50 ಕೋಟಿ ಹಗರಣ ನಡೆಸಿರುವ ಆರೋಪವಿತ್ತು. ಹಗರಣ ನಡೆದ ಸಂದರ್ಭದಲ್ಲಿ ನಿಗಮದ ಅಧ್ಯಕ್ಷರಾಗಿದ್ದ ವೀರಯ್ಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇದೇ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶಂಕರ್​ ಅವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ :ವಾಲ್ಮೀಕಿ ನಿಗಮದ ಹಗರಣ: ಆರೋಪಿ ನಾಗೇಂದ್ರಗೆ ಚಿಕಿತ್ಸೆ ಕೋರಿರುವ ಅರ್ಜಿ ಜುಲೈ 18ಕ್ಕೆ ವಿಚಾರಣೆ - Valmiki Corporation Scam

ABOUT THE AUTHOR

...view details