ಕರ್ನಾಟಕ

karnataka

ETV Bharat / state

ಚಿಕ್ಕೋಡಿ: ಕೊಳೆತ ಸ್ಥಿತಿಯಲ್ಲಿ ದಂಪತಿಯ ಶವ ಪತ್ತೆ - COUPLE FOUND DEAD

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲ್ಲಿ ಕೊಳೆತ ಸ್ಥಿತಿಯಲ್ಲಿ ದಂಪತಿಯ ಶವಗಳು ಪತ್ತೆಯಾಗಿವೆ.

TRAGIC SUICIDE OF COUPLE
ದಂಪತಿಯ ಶವ ಪತ್ತೆಯಾದ ತೋಟದ ಮನೆ (ETV Bharat)

By ETV Bharat Karnataka Team

Published : Nov 6, 2024, 2:18 PM IST

ಚಿಕ್ಕೋಡಿ: ಅಥಣಿ ಹೊರವಲಯದ ಮದಭಾವಿ ರಸ್ತೆಗೆ ಹೊಂದಿಕೊಂಡಿರುವ ಚೌವ್ಹಾಣ್ ಎಂಬ ತೋಟದ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ದಂಪತಿಯ ಶವಗಳು ದೊರೆತಿವೆ.

ನಾನಾ ಸಾಹೇಬ್ ಬಾಬು ಚೌವ್ಹಾಣ್ (58) ಮತ್ತು ಜಯಶ್ರೀ ನಾನಾ ಸಾಹೇಬ್ ಚೌವ್ಹಾಣ್ (50) ಮೃತಪಟ್ಟ ದಂಪತಿ.

ಸುಮಾರು ಐದಾರು ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮನೆಯ ಸುತ್ತಲೂ ದುರ್ವಾಸನೆ ಬರುತ್ತಿದ್ದಂತೆ ಪಕ್ಕದ ಮನೆಯವರು ಅಥಣಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಅಥಣಿ ಡಿವೈಎಸ್ಪಿ ಪ್ರಶಾಂತ್ ಮುನ್ನೋಳ್ಳಿ, ಅಥಣಿ ಸಿಪಿಐ ಸಂತೋಷ ಹಳ್ಳೂರ ತಮ್ಮ ಸಿಬ್ಬಂದಿ, ಆರೋಗ್ಯ ಅಧಿಕಾರಿ ಬಸನಗೌಡ ಕಾಗೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಂಪತಿಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಇದನ್ನೂ ಓದಿ:ಮಹಾರಾಷ್ಟ್ರದ ಮನೆಯಲ್ಲಿ ಮೂವರ ಕೊಳೆತ ಶವ ಪತ್ತೆ; ತ್ರಿವಳಿ ಕೊಲೆ ಶಂಕೆ - Suspect triple Murder

ABOUT THE AUTHOR

...view details