ಕರ್ನಾಟಕ

karnataka

ETV Bharat / state

ಪಕ್ಷ ವಿರೋಧಿ ಚಟುವಟಿಕೆ ಆರೋಪ: ಹು-ಧಾ ಪಾಲಿಕೆ ಸದಸ್ಯತ್ವ ಕಳೆದುಕೊಂಡ ಬಿಜೆಪಿ ಸದಸ್ಯೆ - Dharwad

ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ಹು-ಧಾ ಮಹಾನಗರ ಪಾಲಿಕೆ ಸದಸ್ಯೆ ಸರಸ್ವತಿ ಧೋಂಗಡಿ ಅವರ ಸದಸ್ಯತ್ವವನ್ನು ಅನರ್ಹಗೊಳಿಸಲಾಗಿದೆ.

Saraswati Dhongadi  ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ  ಧಾರವಾಡ  Dharwad  ಸರಸ್ವತಿ ಧೋಂಗಡಿ ಸದಸ್ಯತ್ವ ಅನರ್ಹ
ಪಕ್ಷ ವಿರೋಧಿ ಚಟಿವಟಿಕೆ ಆರೋಪ: ಮಹಾನಗರ ಪಾಲಿಕೆ ಸದಸ್ಯೆ ಸರಸ್ವತಿ ಧೋಂಗಡಿ ಸದಸ್ಯತ್ವ ಅನರ್ಹ

By ETV Bharat Karnataka Team

Published : Feb 11, 2024, 1:22 PM IST

ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯತ್ವದಿಂದ ಬಿಜೆಪಿಯ ಸರಸ್ವತಿ ಧೋಂಗಡಿ ಅನರ್ಹಗೊಂಡಿದ್ದಾರೆ. ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟಣ್ಣವರ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.

2023ರ ಜೂನ್ 20ರಂದು ಏರ್ಪಡಿಸಲಾಗಿದ್ದ ಮೇಯರ್, ಉಪ ಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ ಧೋಂಗಡಿ ಅವರು ಭಾಗವಹಿಸದೇ ಪಕ್ಷ ಜಾರಿ ಮಾಡಿದ ವಿಪ್ ಉಲ್ಲಂಘಿಸಿ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಅಂದಿನ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ ಅವರು ಪ್ರಾದೇಶಿಕ ಆಯುಕ್ತರಿಗೆ ಲಿಖಿತ ದೂರು ಕೊಟ್ಟಿದ್ದರು. ಹೀಗಾಗಿ 54ನೇ ವಾರ್ಡ್‌ನ ಸದಸ್ಯೆ ಸರಸ್ವತಿ ವಿನಾಯಕ ಧೋಂಗಡಿ ವಿರುದ್ಧ ಕ್ರಮ ಜರುಗಿಸಲು ಆಗ್ರಹಿಸಿದ್ದರು.

ಪ್ರಕರಣದ ತನಿಖೆ ನಡೆಸಿದ ಪ್ರಾದೇಶಿಕ ಆಯುಕ್ತರು, ಕರ್ನಾಟಕ ಸ್ಥಳಿಯ ಪ್ರಾಧಿಕಾರದ ಪಕ್ಷಾಂತರ ಕಾಯ್ದೆಯಡಿ ಸರಸ್ವತಿ ವಿನಾಯಕ ಧೋಂಗಡಿ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದನ್ನು ಪತ್ತೆ ಹಚ್ಚಿದ್ದರು.

ಇದನ್ನೂ ಓದಿ:ಚುನಾವಣಾ ಬಾಂಡ್‌ಗಳ ಮೂಲಕ ₹1,300 ಕೋಟಿ ಪಡೆದ ಬಿಜೆಪಿ; ಕಾಂಗ್ರೆಸ್‌ಗಿಂತ 7 ಪಟ್ಟು ಹೆಚ್ಚು

ABOUT THE AUTHOR

...view details