ಕರ್ನಾಟಕ

karnataka

ETV Bharat / state

ಧಾರವಾಡದಲ್ಲಿ ಇಂಡಿಯಾ ಗೇಟ್ ಮಾದರಿಯ ಮಿನಿ ಇಂಡಿಯಾ ಗೇಟ್ ನಿರ್ಮಾಣ - Mini India Gate in Dharwada - MINI INDIA GATE IN DHARWADA

ಪಾಲಿಕೆಯಿಂದ ಸುಮಾರು 17 ಲಕ್ಷ ರೂಪಾಯಿ ವೆಚ್ಚದಲ್ಲಿ ಮಿನಿ ಇಂಡಿಯಾ ಗೇಟ್​ ನಿರ್ಮಾಣವಾಗಿದ್ದು, ಇದರಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮೂರ್ತಿಯನ್ನು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ.

Construction of Mini India Gate like India Gate in Dharwad
ಧಾರವಾಡದಲ್ಲಿ ಇಂಡಿಯಾ ಗೇಟ್ ಮಾದರಿಯ ಮಿನಿ ಇಂಡಿಯಾ ಗೇಟ್ ನಿರ್ಮಾಣ (ETV Bharat)

By ETV Bharat Karnataka Team

Published : Jul 6, 2024, 5:31 PM IST

Updated : Jul 6, 2024, 6:46 PM IST

ಧಾರವಾಡ: ದೆಹಲಿಯಲ್ಲಿರುವ ಇಂಡಿಯಾ ಗೇಟ್ ಮಾದರಿಯಲ್ಲಿ ಧಾರವಾಡದಲ್ಲೊಂದು ಮಿನಿ ಇಂಡಿಯಾ ಗೇಟ್ ನಿರ್ಮಾಣಗೊಳಿಸಲಾಗಿದೆ. ಧಾರವಾಡದ ಕೊಪ್ಪದಕೇರಿಯ ಶಿವಾಲಯದ ಎದುರಿಗೆ ಸಿದ್ಧಗೊಳ್ಳುತ್ತಿದೆ. ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಮಾಜಿ ಮೇಯರ್ ಹಾಗೂ ಹಾಲಿ ಸದಸ್ಯ ಈರೇಶ ಅಂಚಟಗೇರಿ ಮುತುವರ್ಜಿ ವಹಿಸಿ ನಿರ್ಮಾಣ ಮಾಡಿದ್ದಾರೆ.

ಧಾರವಾಡದಲ್ಲಿ ಇಂಡಿಯಾ ಗೇಟ್ ಮಾದರಿಯ ಮಿನಿ ಇಂಡಿಯಾ ಗೇಟ್ ನಿರ್ಮಾಣ (ETV Bharat)

ದೆಹಲಿಯ ಇಂಡಿಯಾ ಗೇಟ್ ಮಾದರಿಯಲ್ಲಿ ಮಿನಿ ಇಂಡಿಯಾ ಗೇಟ್ ನಿರ್ಮಾಣವಾಗಿದ್ದು, ದೆಹಲಿ ಇಂಡಿಯಾ ಗೇಟ್‌ ಒಳಗಡೆ ಅಮರ್ ಜವಾನ್ ಜ್ಯೋತಿಯನ್ನು ಇಡಲಾಗಿದೆ. ಇಲ್ಲಿನ ಮಿನಿ ಇಂಡಿಯಾ ಗೇಟ್ ಒಳಗಡೆ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮೂರ್ತಿಯನ್ನು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ಯುದ್ಧ ಸ್ಮಾರಕವಾಗಿರುವ ಇಂಡಿಯಾ ಗೇಟ್‌ನಲ್ಲಿ ಅಮರ್ ಜವಾನ್ ಜ್ಯೋತಿ ಸದಾ ಬೆಳಗುತ್ತಿರುತ್ತದೆ.

ಪಾಲಿಕೆಯ ಒಟ್ಟು 17 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಮಿನಿ ಇಂಡಿಯಾ ಗೇಟ್ ನಿರ್ಮಾಣವಾಗಿದೆ. ಸದ್ಯ ಅಂತಿಮ ಹಂತದ ಕೆಲಸಗಳು ಇಲ್ಲಿ ನಡೆಯುತ್ತಿದೆ. ಬಸವಣ್ಣನವರ ಮೂರ್ತಿಯನ್ನು ಹಾಗೇ ಪ್ರತಿಷ್ಠಾಪನೆ ಮಾಡುವುದು ಬೇಡ. ವಿಭಿನ್ನವಾಗಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎನ್ನುವ ದೃಷ್ಟಿಯಿಂದ ದೆಹಲಿ ಮಾದರಿಯಲ್ಲಿ ಇಂಡಿಯಾ ಗೇಟ್ ನಿರ್ಮಿಸಿ ಅಲ್ಲಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪಿಸುವ ಕೆಲಸ ಮಾಡಲಾಗುತ್ತಿದೆ.

ಇದನ್ನೂ ಓದಿ:ಬೆಣ್ಣೆನಗರಿಯಲ್ಲಿ ಹಂದಿಗಳ ಹಾವಳಿಗೆ ಬ್ರೇಕ್ ಹಾಕಲು ವರಾಹ ಶಾಲೆ ನಿರ್ಮಿಸಿದ ಪಾಲಿಕೆ: ಗ್ರಾಮಸ್ಥರಿಂದ ವಿರೋಧ - Davanagere Pig Center

Last Updated : Jul 6, 2024, 6:46 PM IST

ABOUT THE AUTHOR

...view details