ಸಚಿವ ಎನ್.ಎಸ್. ಬೋಸರಾಜು ಮಾಧ್ಯಮದವರೊಂದಿಗೆ ಮಾತನಾಡಿದರು. ರಾಯಚೂರು:ಹೆಚ್ ಡಿ ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೂ, ಸ್ವಂತ ಬಲದಿಂದ ಎಂದಿಗೂ ಸಿಎಂ ಆಗಲಿಲ್ಲ. ಅವರ ಯಜಮಾನರು ಹೆಚ್.ಡಿ.ದೇವಗೌಡರು ಸಹ ಸ್ವತಃ ಬಲದಿಂದ ಪ್ರಧಾನಿ ಮಂತ್ರಿಯಾಗಲಿಲ್ಲ ಎಂದು ಸಚಿವ ಎನ್.ಎಸ್.ಬೋಸರಾಜು ಹೆಚ್‌ಡಿಕೆಗೆ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಡಿಸೆಂಬರ್ ನಂತರ ಸರ್ಕಾರ ಬಿದ್ದು ಹೋಗುತ್ತದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಅಂದು ಎಚ್ ಡಿ ದೇವೇಗೌಡರು ಪ್ರಧಾನ ಮಂತ್ರಿ ಆಗಿದ್ದವರು, ಸಹಜವಾಗಿ ಯಾವಾಗ ಹಿಟ್ ಅಂಡ್ ರನ್ ಮಾಡಬೇಕು ಮಾಡ್ತಾರೆ. ತಮ್ಮ ಬಳಿ ಇರೋ ಶಾಸಕರನ್ನ ಹಿಡಿದಿಟ್ಟುಕೊಳ್ಳಲು ಈ ತರಹ ಹೇಳ್ತಾರೆ. ಈ ಸರಕಾರಕ್ಕೆ ಯಾವುದೇ ತೊಂದರೆ ಇಲ್ಲ, ಮುಂದಿನ 5 ವರ್ಷವೂ ಈ ಸರ್ಕಾರ ಅಧಿಕಾರದಲ್ಲಿ ಇರುತ್ತದೆ. ಕುಮಾರಸ್ವಾಮಿ ಹೇಳಿದ ತಕ್ಷಣ ಈ ಸರಕಾರ ಹೋಗಲ್ಲ ಎಂದು ತಿಳಿಸಿದರು.
ಹಿಂದಿನ ಡೋರ್ನಿಂದ ಬಿಜೆಪಿ ಸರಕಾರ ಆಡಳಿತಕ್ಕೆ:ನರೇಂದ್ರ ಮೋದಿ ಪಿಎಂ ಆದ್ರೂ ಬಿಜೆಪಿ ಸರ್ಕಾರ ಸ್ವಂತ ಬಲದಿಂದ ಬಂದಿಲ್ಲ. ಹಿಂದಿನ ಡೋರ್ನಿಂದ ಬಿಜೆಪಿ ಸರಕಾರ ಆಡಳಿತಕ್ಕೆ ಬಂದಿದೆ. ಮೋದಿಯವರು ಓಣಿ ಓಣಿಯಲ್ಲೂ ರೋಡ್ ಶೋ ಮಾಡಿದ್ರು. ಮೋದಿಯವರು ಪ್ರಚಾರಕ್ಕೆ ಹೋದೆಲೆಲ್ಲ ಅಭ್ಯರ್ಥಿಗಳು ಸೋತರು. ಜನರ ದಾರಿ ತಪ್ಪಿಸುವುದಕ್ಕೆ ಹೆಚ್.ಡಿ.ಕುಮಾರಸ್ವಾಮಿಯವರು ಹೀಗೆ ಮಾಡುತ್ತಾರೆ ಎಂದು ತಿಳಿಸಿದರು.
ಕರಡಿ ಸಂಗಣ್ಣ ಒಳ್ಳೆಯ ರಾಜಕಾರಣಿ:ಕೊಪ್ಪಳದ ಸಂಸದ ಕರಡಿ ಸಂಗಣ್ಣ ಅವರ ಕ್ಷೇತ್ರದಲ್ಲಿ ಒಳ್ಳೆಯರ ರಾಜಕಾರಣಿ ಜೊತೆಗೆ ಸರಳ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಬಹಳ ಗ್ರೌಂಡ್ ಲೇವಲ್ ನಿಂದ ಬಂದವರು. ಪಕ್ಷದ ಸಂಘಟನೆ ಮಾಡಿಕೊಂಡು ಲೋಕಸಭಾ ಸದಸ್ಯರು ಆಗಿದ್ದವರು. ಅಭಿವೃದ್ಧಿ ವಿಚಾರವಿದ್ದಾಗ ಪ್ರತಿ ತಿಂಗಳು ಮಾತನಾಡುತ್ತಿದ್ದರು. ಈಗ ಅವರಿಗೆ ಬಹಳ ಮನಸ್ಸಿಗೆ ನೋವು ಆಗಿರುವುದು ನಮ್ಮ ಗಮನಕ್ಕೆ ಬಂದಿದೆ. ನಾವು ಅವರನ್ನು ಏನು ಒತ್ತಾಯ ಮಾಡಿಲ್ಲ, ಎರಡು ಸಲ ಲೋಕಸಭಾ ಸದಸ್ಯರಾಗಿದ್ದವರು. ಅವರು ತಾವೇ ಬಂದ್ರೆ ಪ್ರೀತಿಯಿಂದ ಪಕ್ಷಕ್ಕೆ ಸ್ವಾಗತಿಸುವುದಾಗಿ ತಿಳಿಸಿದರು.
ಮಾಜಿ ಸಂಸದ ಬಿ ವಿ ನಾಯಕ ಅವರ ತಂದೆ ಮೂಲತಃ ಕಾಂಗ್ರೆಸ್ ಪಕ್ಷದವರು, ಯಾವುದೋ ಗಳಿಗೆಯಲ್ಲಿ ಭಾವನಾತ್ಮಕ ನಿರ್ಧಾರ ಮಾಡಿ ಬಿಜೆಪಿಗೆ ಹೋಗಿದ್ರೂ ಅವರನ್ನು ನನ್ನ ಮಗನಿಗಿಂತ ಹೆಚ್ಚಾಗಿ ನೋಡಿಕೊಂಡಿದ್ದೇನೆ. ಈಗಿನ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಸಹ ನಮ್ಮ ಆತ್ಮೀಯರು, ವೈಯಕ್ತಿಕವಾಗಿ ನಾನು ಅವರ ಬಗ್ಗೆ ಎಂದಿಗೂ ಮಾತನಾಡಿಲ್ಲ, ಮಾತನಾಡಲ್ಲ, ಬಿ ವಿ ನಾಯಕರನ್ನ ಬಿಜೆಪಿ ಹೇಗೆ ನಡೆಸಿಕೊಂಡಿದೆ ನಮಗೆ ಗೊತ್ತಿಲ್ಲ. ಅವರ ನಿರ್ಧಾರ ಪ್ರಕಟಿಸಲಿ ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಯಾರೇ ಬಂದರೂ ಸ್ವಾಗತಿಸುವುದಾಗಿ ಹೇಳಿದರು.
ಇದನ್ನೂಓದಿ:ಮಠಾಧೀಶರ ಬಗ್ಗೆ ಹಗುರ ಹೇಳಿಕೆ ಆರೋಪ: ದೇವಾಲಯಕ್ಕೆ ಈಶ್ವರಪ್ಪ ಬಂದು ಘಂಟೆ ಹೊಡೆಯಲಿ - ಬಿ ವೈ ರಾಘವೇಂದ್ರ ಸವಾಲು - BJP candidate b y raghavendra