ಬೆಂಗಳೂರು:ರಾಜ್ಯದ ಎಲ್ಲಾ ಜಲಾಶಯಗಳ ಗೇಟ್‌ಗಳನ್ನು ಪರಿಶೀಲಿಸಲು ನಿವೃತ್ತ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಂದು ಆದೇಶಿಸಿದ್ದಾರೆ.
ತುಂಗಭದ್ರಾ ಜಲಾಶಯದ 19ನೇ ಸಂಖ್ಯೆಯ ಗೇಟ್‌ನಲ್ಲಾದ ಅವಘಡದಿಂದ ಸರ್ಕಾರ ಎಚ್ಚೆತ್ತುಕೊಂಡಿದೆ.
Published : Aug 15, 2024, 9:47 PM IST
ಬೆಂಗಳೂರು:ರಾಜ್ಯದ ಎಲ್ಲಾ ಜಲಾಶಯಗಳ ಗೇಟ್‌ಗಳನ್ನು ಪರಿಶೀಲಿಸಲು ನಿವೃತ್ತ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಂದು ಆದೇಶಿಸಿದ್ದಾರೆ.
ತುಂಗಭದ್ರಾ ಜಲಾಶಯದ 19ನೇ ಸಂಖ್ಯೆಯ ಗೇಟ್‌ನಲ್ಲಾದ ಅವಘಡದಿಂದ ಸರ್ಕಾರ ಎಚ್ಚೆತ್ತುಕೊಂಡಿದೆ.
ಗೇಟ್ ಸುರಕ್ಷತೆ, ದುರಸ್ತಿ ಕಾಮಗಾರಿ ಹಾಗೂ ಬದಲಾವಣೆಯ ಅಗತ್ಯತೆಯ ಬಗ್ಗೆ ಅಧ್ಯಯನ ನಡೆಸಿ, ಮುಂಜಾಗ್ರತಾ ಕೆಲಸವನ್ನು ಕೈಗೊಳ್ಳುವಂತೆ ಸಮಿತಿಗೆ ಸೂಚಿಸಲಾಗಿದೆ.
ಜಲಾಶಯಗಳ ಗೇಟ್‌ಗಳನ್ನು ಸೂಕ್ತ ತಾಂತ್ರಿಕ ನಿಪುಣರ ಸಮಿತಿ ರಚಿಸಿ ಪರಿಶೀಲಿಸುವುದು, ದುರಸ್ತಿ ಮತ್ತು ಬದಲಾವಣೆ ಮಾಡುವ ಕೆಲಸವನ್ನು ಈ ಸಮಿತಿ ಕೈಗೊಳ್ಳಬೇಕಿದೆ.