ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಯುವಕನಿಗೆ ಚಾಕು ಇರಿತ ವದಂತಿ: ಕಮಿಷನರ್ ಸ್ಪಷ್ಟನೆ ಹೀಗಿದೆ - RUMOUR OF STABBING - RUMOUR OF STABBING

ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ಗಣೇಶ ನಿಮಜ್ಜನ ಸಂದರ್ಭದಲ್ಲಿ ವ್ಯಕ್ತಿಯೋರ್ವನಿಗೆ ಚಾಕು ಇರಿಯಲಾಗಿದೆ ಎಂಬ ವದಂತಿ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಆದರೆ ವಾಸ್ತವನೇ ಬೇರೆ ಇದ್ದು, ಈ ಕುರಿತು ಹು-ಧಾ ಪೊಲೀಸ್ ‌ಕಮಿಷನರ್ ಸ್ಪಷ್ಟನೆ ನೀಡಿದ್ದಾರೆ.

STABBING ALLEGATION police commissioner
ಚಾಕು ಇರಿತ ವದಂತಿಗೆ ಪೊಲೀಸ್ ‌ಕಮಿಷನರ್​ ಸ್ಪಷ್ಟನೆ (ETV Bharat)

By ETV Bharat Karnataka Team

Published : Sep 14, 2024, 12:15 PM IST

Updated : Sep 14, 2024, 12:32 PM IST

ಹು-ಧಾ ಪೊಲೀಸ್ ‌ಕಮಿಷನರ್​ ಎನ್​. ಶಶಿಕುಮಾರ್​ ಸ್ಪಷ್ಟನೆ (ETV Bharat)

ಹುಬ್ಬಳ್ಳಿ:ಗಣೇಶ ನಿಮಜ್ಜನ ಸಂದರ್ಭದಲ್ಲಿ ಮಂಟೂರು ರಸ್ತೆಯಲ್ಲಿ ವ್ಯಕ್ತಿಯೋರ್ವನಿಗೆ ಚಾಕು ಇರಿದಿದೆ ಎಂದು ಹರಿದಾಡುತ್ತಿದ್ದ ಸುದ್ದಿಗೆ ಪೊಲೀಸ್​​ ಕಮಿಷನರ್ ಸ್ಪಷ್ಟನೆ ನೀಡಿದ್ದಾರೆ.

ಹು-ಧಾ ಪೊಲೀಸ್ ‌ಕಮಿಷನರ್ ಸ್ಪಷ್ಟನೆ ಹೀಗಿದೆ: "ನಗರದ ಮಂಟೂರು ರಸ್ತೆಯಲ್ಲಿ ಚೂರಿ ಇರಿತವಾಗಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಹಾಗಾಗಿ ನಾನು ಕೂಡ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಕಾರ್ಪೊರೇಟರ್​ ಸೇರಿದಂತೆ ಈ ಭಾಗದ ಸಾರ್ವಜನಿಕರನ್ನು ಮಾತನಾಡಿಸಿದ್ದೇನೆ. ಇಲ್ಲಿ ಅಬ್ರಹಾಂ ಅರಮಾಳ್ ಎಂಬ ಹುಡುಗ​ ಹಾಗೂ ವೆಂಕಟೇಶ್​ ರೆಡ್ಡಿ ಇಬ್ಬರು ಪರಿಚಯಸ್ಥರು. ಅವರು ಅವರ ಮನೆಯ ಸುತ್ತಮುತ್ತಲಿನ ಏರಿಯಾದಲ್ಲಿ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡಿದ್ದಾರೆ. ಇದರಲ್ಲಿ ಅಬ್ರಾಹಂಗೆ​ ಸ್ವಲ್ಪ ಪೆಟ್ಟು ಬಿದ್ದಿದೆ. ಹಾಗಾಗಿ ಅವನು ಮನೆಗೆ ಹೋಗಿದ್ದನು. ಮನೆಯಲ್ಲಿ ರೆಸ್ಟ್​ ಮಾಡಲು ಹೇಳಿದ್ದರು".

"ನಂತರ ಅವರ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ದೂರು ನೀಡಲು ಪೊಲೀಸ್​ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇಷ್ಟು ಬಿಟ್ಟರೆ ಗಣೇಶನ ನಿಮಜ್ಜನ, ಡಿಜೆ ಸಂಬಂಧ ಅಥವಾ ಮೆರವಣಿಗೆ ವೇಳೆ 2 ಕೋಮಿನ ನಡುವೆ ಏನು ಆಗಿಲ್ಲ. ಈ ಬಗ್ಗೆ ಬಹಳ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಶರೀಫ್​ ಈ ಭಾಗದ ಕಾರ್ಪೊರೇಟರ್​, ಸುನಿಲ್​, ಪ್ರದೀಪ್​ ಅಂತ ಇದ್ದಾರೆ. ಇವರೆಲ್ಲ ಸ್ವಯಂ ಸೇವಕರು, ಈ ಭಾಗದಲ್ಲಿದ್ದ ಎಲ್ಲಾ ಗಣೇಶಗಳನ್ನು ಎಲ್ಲಾ ಜಾತಿ ಧರ್ಮದ ಮುಖಂಡರು, ಎಲ್ಲ ಪಕ್ಷದ ಮುಖಂಡರು ಮೇಲುಸ್ತುವಾರಿ ತೆಗೆದುಕೊಂಡು ಅಚ್ಚುಕಟ್ಟಾಗಿ ನಿಮಜ್ಜನ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮವರಿಗೂ ಸ್ಪಷ್ಟನೆ ನೀಡಿದ್ದೇನೆ. ಹಾಗೂ ಸಾಮಾಜಿಕ ಜಾಲತಾಣದಲ್ಲಿ ಯಾರೂ ತಪ್ಪು ಮಾಹಿತಿ ಪಸರಿಸಬೇಡಿ" ಎಂದು ಹು-ಧಾ ಪೊಲೀಸ್ ‌ಕಮಿಷನರ್​ ಎನ್​. ಶಶಿಕುಮಾರ್​ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಕಲಬುರಗಿ: ಮಗನನ್ನು ಶಾಲೆಗೆ ಬಿಟ್ಟು ಬರುತ್ತಿದ್ದ ಗ್ರಾ.ಪಂ ಮಾಜಿ ಉಪಾಧ್ಯಕ್ಷನಿಗೆ ಗುಂಡಿಕ್ಕಿ ಕೊಲೆ - ALANDA MURDER

Last Updated : Sep 14, 2024, 12:32 PM IST

ABOUT THE AUTHOR

...view details