ಬೆಂಗಳೂರು:ಇಂದು ನಡೆಯಲಿರುವ ಕಾಮೆಡ್-ಕೆ ಯುಜಿಇಟಿಗೆ ಸುಮಾರು 1.18 ಲಕ್ಷ ಅಭ್ಯರ್ಥಿಗಳು ಹಾಜರಾಗುವ ನಿರೀಕ್ಷೆ ಇದೆ. ರಾಜ್ಯದ ಖಾಸಗಿ ಕಾಲೇಜುಗಳು ಮತ್ತು ಆಯ್ದ ದೇಶಾದ್ಯಂತದ ವಿಶ್ವವಿದ್ಯಾನಿಲಯಗಳ ಎಂಜಿನಿಯರಿಂಗ್ ಸೀಟುಗಳಿಗೆ ಈ ಪರೀಕ್ಷೆ ನಡೆಯುತ್ತದೆ.
ಇದು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದೆ. 28 ರಾಜ್ಯಗಳ, 189 ನಗರಗಳಲ್ಲಿರುವ 264 ಪರೀಕ್ಷಾ ಕೇಂದ್ರಗಳಲ್ಲಿ ಮೂರು ಅವಧಿಗಳಲ್ಲಿ ಪರೀಕ್ಷೆ ನಡೆಯುತ್ತದೆ.
ಬೆಳಿಗ್ಗೆ 8:30ರಿಂದ 11:30ರವರೆಗೆ, ಮಧ್ಯಾಹ್ನ 1ರಿಂದ 4ರವರೆಗೆ ಮತ್ತು ಸಂಜೆ 5.30ರಿಂದ 8.30ರವರೆಗೆ ಪರೀಕ್ಷೆಗಳು ನಿಗದಿಯಾಗಿವೆ.