ಕರ್ನಾಟಕ

karnataka

ETV Bharat / state

ರಾಹುಲ್ ದ್ರಾವಿಡ್ ಕಾರು - ಗೂಡ್ಸ್ ಆಟೋ ನಡುವೆ ಸಣ್ಣ ಡಿಕ್ಕಿ: ವಿಡಿಯೋ ವೈರಲ್​​ - RAHUL DRAVID CAR ACCIDENT

ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಕಾರು ಹಾಗೂ ಗೂಡ್ಸ್ ಆಟೋ ನಡುವೆ ಸಣ್ಣದೊಂದು ಡಿಕ್ಕಿ ಸಂಭವಿಸಿದ ಘಟನೆ ನಡೆದಿದೆ.

RAHUL DRAVID CAR ACCIDENT
ರಾಹುಲ್ ದ್ರಾವಿಡ್, ಗೂಡ್ಸ್ ಆಟೋ ಚಾಲಕ (Viral X Post)

By ETV Bharat Karnataka Team

Published : Feb 5, 2025, 7:33 AM IST

ಬೆಂಗಳೂರು:ನಗರದ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಮಂಗಳವಾರ ಸಂಜೆ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಕಾರು ಹಾಗೂ ಗೂಡ್ಸ್ ಆಟೋ ನಡುವೆ ಸಣ್ಣ ಪ್ರಮಾಣದ ಡಿಕ್ಕಿ ಸಂಭವಿಸಿದ್ದು, ಈ ಘಟನೆ ಸಂಬಂಧ ದ್ರಾವಿಡ್ ಮತ್ತು ಆಟೋ ಚಾಲಕನ ನಡುವೆ ಸಣ್ಣದೊಂದು ವಾಗ್ವಾದ ನಡೆದಿದೆ.

ಕನ್ನಿಂಗ್‌ಹ್ಯಾಮ್ ರಸ್ತೆ ಮಾರ್ಗವಾಗಿ ಹೋಗುತ್ತಿದ್ದ ದ್ರಾವಿಡ್ ಕಾರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿತ್ತು. ಆಗ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಸರಕು ಸಾಗಣೆ ಆಟೋ ಚಾಲಕನು ದ್ರಾವಿಡ್ ಕಾರಿಗೆ ಗೂಡ್ಸ್​ ವಾಹನ ಟಚ್​ ಆಗಿದೆ. ಇದರಿಂದ ಕೋಪಗೊಂಡ ದ್ರಾವಿಡ್ ಅವರು ಕಾರಿನಿಂದ ಕೆಳಗಿಳಿದು, ಕಾರು ಪರಿಶೀಲನೆ ಮಾಡಿದರು. ವಾಹನ ತುಸು ಡ್ಯಾಮೇಜ್​ ಆಗಿರುವುದನ್ನು ಕಂಡು ಚಾಲಕನೊಂದಿಗೆ ಸಣ್ಣದಾಗಿ ಮಾತಿನ ಚಕಮಕಿ ನಡೆಸಿದ್ದಾರೆ.

ವೈರಲ್​ ವಿಡಿಯೋ: ರಾಹುಲ್ ದ್ರಾವಿಡ್ ಕಾರು - ಗೂಡ್ಸ್ ಆಟೋ ನಡುವೆ ಡಿಕ್ಕಿ (Viral X Post)

ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಹೈಗ್ರೌಂಡ್ಸ್ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ತೆರಿಗೆ ಪಾವತಿಸದೆ ಸಂಚಾರ: 30 ದುಬಾರಿ ಕಾರುಗಳು ವಶಕ್ಕೆ; ಫೆರಾರಿ ಮಾಲೀಕನಿಗೆ ₹1.45 ಕೋಟಿ ದಂಡ

ABOUT THE AUTHOR

...view details