ಮಂಗಳೂರು(ದಕ್ಷಿಣ ಕನ್ನಡ): ಕೋಸ್ಟಲ್ ಫ್ರೆಂಡ್ಸ್ ಸಂಘಟನೆ ಅನಾಥ ಮಕ್ಕಳಿಗೆ ಸಾಂತ್ವನ ಸಂಚಾರ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಪಾಲಕರ ಅನುಮತಿ ಪಡೆದು ಮಕ್ಕಳನ್ನು ಅವರಿದ್ದ ಸ್ಥಳದಿಂದಲೇ ಕರೆದುಕೊಂಡು ಬಂದು ಮಂಗಳೂರಿನ ಖ್ಯಾತ ಹೋಟೆಲ್ನಲ್ಲಿ ಉಪಹಾರ, ಪಿಲಿಕುಳ ಮೃಗಾಲಯ, 3ಡಿ ಪ್ಲಾನಿಟೋರಿಯಂ, ಮಧ್ಯಾಹ್ನ ನಂತರ ರೆಸಾರ್ಟ್ನಲ್ಲಿ ಆಟೋಟ, ಮನೋರಂಜನೆ ಕಾರ್ಯಕ್ರಮ ನಡೆಸಿ ನಂತರ ಅವರನ್ನು ಸುರಕ್ಷಿತವಾಗಿ ಮನೆಗೆ ಬಿಟ್ಟು ಬರಲಾಗುತ್ತದೆ. ಬಾಲಕಿಯರ ನಿಗಾಕ್ಕೆ ಮಹಿಳಾ ಸದಸ್ಯರು, ಬಾಲಕರ ನಿಗಾಕ್ಕೆ ಪುರುಷ ಸದಸ್ಯರನ್ನು ನಿಯೋಜಿಸಲಾಗಿದೆ. ಇಷ್ಟೇ ಅಲ್ಲದೇ ಪ್ರತಿ ಮಕ್ಕಳಿಗೂ ಸುಮಾರು 10 ಸಾವಿರ ಮೌಲ್ಯದ ಗಿಫ್ಟ್ ಅನ್ನು ಸಹ ನೀಡಲಾಗುತ್ತಿದೆ.
ಅನಾಥ ಮಕ್ಕಳಿಗೆ 'ಸಾಂತ್ವನ ಸಂಚಾರ' ಕಾರ್ಯಕ್ರಮ (ETV Bharat) ಈ ಬಗ್ಗೆ ಕಾರ್ಯಕ್ರಮದ ಸಂಯೋಜಕ ನಝೀರ್ ಬೆದ್ರೋಡಿ ಮಾತನಾಡಿ, "ನಾವು ಮಕ್ಕಳನ್ನು 'ಅನಾಥರು' ಎಂದು ಕರೆಯುವುದಿಲ್ಲ. ಅವರು ನಮ್ಮ ಕುಟುಂಬದ ಸದಸ್ಯರೆಂದು ನೋಡಿದ್ದೇವೆ. ಬೇರೆ ಮಕ್ಕಳಂತೆ ಈ ಮಕ್ಕಳು ಖುಷಿ ಅನುಭವಿಸಬೇಕು ಎಂದು ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಸುಮಾರು 87 ಅನಾಥ ಮಕ್ಕಳನ್ನು ಆಯ್ದುಕೊಂಡಿದ್ದೇವೆ" ಎಂದರು.
ಸಾಂತ್ವನ ಸಂಚಾರ (ETV Bharat) "ಅನೇಕರು ಈ ಕಾರ್ಯಕ್ರಮಕ್ಕೆ ತಮ್ಮ ಬೆಂಬಲ ನೀಡಿ ಆರ್ಥಿಕ ಸಹಾಯ ಮಾಡಿದ್ದಾರೆ. ಈ ವಿಶೇಷ ಪ್ರಯತ್ನವು ಸಮಾಜದಲ್ಲಿ ಪ್ರೀತಿ ಮತ್ತು ಸಮಾನತೆಯ ಸಂದೇಶವನ್ನು ಹಂಚಲಿದೆ. ಕಲಾ ಕಾರ್ಯಕ್ರಮಗಳು, ಮನರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮೂಲಕ ಮಕ್ಕಳನ್ನು ಮನರಂಜಿಸಲು ವ್ಯವಸ್ಥೆ ಮಾಡಲಾಗಿದೆ. ಈ ಪ್ರಯತ್ನವು ಮಕ್ಕಳ ಮನಸ್ಸಿನಲ್ಲಿ ಸಂತೋಷ ಮೂಡಿಸಲಿದೆ" ಎಂದು ಹೇಳಿದರು.
ಸಾಂತ್ವನ ಸಂಚಾರ (ETV Bharat) ಇದನ್ನೂ ಓದಿ:ಕೋಮು ಸಾಮರಸ್ಯ ಸಾರುವ ಶಿಶುನಾಳ: ಇಲ್ಲಿ ಹಿಂದೂ - ಮುಸ್ಲಿಮರಿಂದ ನಡೆಯುತ್ತೆ ಷರೀಫ್ - ಗೋವಿಂದ ಭಟ್ಟರ ಮೂರ್ತಿಗಳಿಗೆ ಪೂಜೆ