ದಾವಣಗೆರೆ:ನಾನು ಹಿಂದುನೇ, ವಿಪಕ್ಷ ನಾಯಕ ಆರ್ ಆಶೋಕ್ ಹಿಂದು ಆದ್ರೆ ನಾನು ಅವನಗಿಂತ ನಾನೂ ಒಳ್ಳೆಯ ಹಿಂದು ಎಂದು ಹೊನ್ನಾಳಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಿಪಕ್ಷ ನಾಯಕ ಆರ್ ಆಶೋಕ್ಗೆ ತಿರುಗೇಟು ನೀಡಿದರು.
ವೀರಪ್ಪನ್ ಹೆಸರಲ್ಲಿ ವೀರ ಇದೆ, ಅವನಿಗೆ ವೀರ ಅಂತಾ ಹೇಳೋಕೆ ಆಗುತ್ತಾ, ಹಾಗೆ ಸಿಎಂ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ರಾಮ ಎಂಬ ಪದ ಇದೆ, ಹಾಗಂತ ರಾಮ ಅನ್ನೋಕೆ ಆಗುತ್ತಾ ಎಂಬ ಆರ್ ಆಶೋಕ್ ಗೇಲಿ ಮಾಡಿದ್ದರು. ಅವರ ಈ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿ, ಶ್ರೀ ರಾಮಚಂದ್ರ ಎಲ್ಲ ಹಿಂದುಗಳಿಗೂ ಬೇಕು, ನಾನು ಹಿಂದುನೇ, ಅಶೋಕ್ ಕೂಡ ಹಿಂದು. ಆದ್ರೆ ಅವನಗಿಂತ ನಾನು ಒಳ್ಳೆ ಹಿಂದು ಎಂದರು.
ಕುವೆಂಪು ಹೇಳಿದಂತೆ ಎಲ್ಲರೂ ವಿಶ್ವಮಾನವರಾಗಿ ಹುಟ್ಟುತ್ತಾರೆ:ಹೊನ್ನಾಳಿಯಲ್ಲಿ ಕನಕದಾಸರ ಕಂಚಿನ ಪುತ್ಥಳಿ ಅನಾವರಣ ಮಾಡಿದ ಬಳಿಕ ಸಮಾರಂಭದಲ್ಲಿ ಮಾತನಾಡಿದ ಸಿಎಂ, ಕನಕದಾಸರು ಆಕಸ್ಮಿಕವಾಗಿ ಕುರುಬ ಜಾತಿಯಲ್ಲಿ ಹುಟ್ಟಿದ್ದರು.
ಆದರೆ ಅವರು ಕುರುಬರಾಗಿ ಉಳಿದಿರಲಿಲ್ಲ, ವಿಶ್ವಮಾನವರಾದರು. ಕುವೆಂಪು ಹೇಳಿದಂತೆ ಎಲ್ಲರೂ ಹುಟ್ಟುವಾಗ ವಿಶ್ವಮಾನವರಾಗಿ ಹುಟ್ಟುತ್ತಾರೆ. ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ, ಜಾತಿ ವ್ಯವಸ್ಥೆ ಪರಿಣಾಮ ಅಲ್ಪಮಾನವರಾಗಿ ಬಿಡುತ್ತೇವೆ ಎಂದು ತಿಳಿಸಿದರು.
ಬುದ್ಧ, ಅಂಬೇಡ್ಕರ್, ಗಾಂಧಿ ಬೋಧನೆ ಮಾಡಿದ್ದು ವಿಶ್ವಮಾನವ ಆಗಲು ಪ್ರಯತ್ನ ಮಾಡಿ ಎಂದಿದ್ದರು. ನಾವು ಮನುಷ್ಯರಾಗಿ ಇರಬೇಕೆ ಹೊರತು ಪರಸ್ಪರ ದ್ವೇಷ ಮಾಡಬಾರದು. ಕುಲ ಕುಲ ಎಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆ ಬಲ್ಲಿರ ಎಂಬುದು ಕನಕದಾಸರ ಕೀರ್ತನೆ, ಜಾತಿವಾದಿಗಳಿಗೆ ಕನಕರು ಈ ಪ್ರಶ್ನೆ ಕೇಳುತ್ತಾರೆ ಎಂದರು.
ಕನಕರು ದಾಸ ಶ್ರೇಷ್ಠ ಅಷ್ಟೇ ಅಲ್ಲ, ಸಮಾಜ ಸುಧಾರಕರು:ನನ್ನ ಶರೀರದಲ್ಲಿ ರಕ್ತ ಹರಿತಾ ಇದೆ. ನನಗೆ ಆಪರೇಷನ್ ಆದರೆ ರಕ್ತ ಬೇಕಾಗುತ್ತದೆ. ನಾನು ನನ್ನ ಕುರುಬ ಜಾತಿಯ ರಕ್ತವನ್ನೇ ಕೇಳ್ತಿನಾ ಎಂದು ಮಾಜಿ ಶಾಸಕ ರೇಣುಕಾಚಾರ್ಯ ಅವರ ಕಾಲೆಳೆದರು. ಇನ್ನು ಕುರುಬರೇ ರಕ್ತ ಕೊಡ್ರಿ ಅಂತೀರಾ, ರೇಣುಕಾಚಾರ್ಯ ನೀನು ಜಂಗಮ ರಕ್ತ ಕೊಡು ಅಂತಿಯಾ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯಗೆ ಪ್ರಶ್ನಿಸಿದರು. ಕನಕರು ದಾಸ ಶ್ರೇಷ್ಠ ಸಂತ ಅಷ್ಟೇ ಅಲ್ಲ, ಅವರೊಬ್ಬ ಸಮಾಜ ಸುಧಾರಕ ಕೂಡ. ಪಾಳೇಗಾರರಾಗಿದ್ರು ಬಳಿಕ ಎಲ್ಲ ತ್ಯಾಗ ಮಾಡಿ ದಾಸರಾದರು. ಕನಕ ನಾಯಕ ಕನಕ ದಾಸ ಆಗುತ್ತಾನೆ, ಕನಕದಾಸರು ಪಾಳೆಗಾರರ ವಂಶಕ್ಕೆ ಸೇರಿದವರು ಎಂದು ಹೇಳಿದರು.
ಅಕ್ಕಿ ಶ್ರೀಮಂತರ ಆಹಾರ ಎಂದ ಸಿಎಂ;ಅಕ್ಕಿ ಶ್ರೀಮಂತರ ಆಹಾರ ಎಂದ ಸಿಎಂ, ಕನಕದಾಸರ ರಾಮಧಾನ್ಯ ಚರಿತೆಯಲ್ಲಿ ರಾಗಿ ಶ್ರೇಷ್ಠ ಎಂದು ಹೇಳಲಾಗಿದೆ. ಅಕ್ಕಿ ಮೇಲೋ, ರಾಗಿ ಮೇಲೊ ಎಂಬ ಚರ್ಚೆ ನಡೆಯುತ್ತದೆ. ಆಗ ಅಕ್ಕಿ, ರಾಗಿಯನ್ನು ಪರೀಕ್ಷೆಗೆ ಒಳಪಡಿಸುತ್ತಾರೆ. ಅಕ್ಕಿ ಹಾಳಾಗಿ ಹೋಗಿರುತ್ತದೆ, ರಾಗಿ ಚೆನ್ನಾಗಿ ಇರುತ್ತದೆ. ಇದು ಶ್ರೀ ರಾಮಚಂದ್ರನ ಹೆಸರು ಹೇಳೋರಿಗೆ ಗೊತ್ತಿದೆಯಾ ಎಂದು ಬಿಜೆಪಿಯವರಿಗೆ ಸಿಎಂ ಪ್ರಶ್ನಿಸಿದರು. ದುಡಿಯುವವರು ರಾಗಿ ಊಟ ಮಾಡುತ್ತಾರೆ, ರಾಗಿ ಶಕ್ತಿಯುತವಾಗಿ ಇರುತ್ತದೆ. ಶ್ರೀಮಂತರು ಅಕ್ಕಿ ಊಟ ಮಾಡುತ್ತಾರೆ ಎಂದು ಪದೇ ಪದೆ ಅಕ್ಕಿ ಶ್ರೀಮಂತರ ಆಹಾರ ಎಂದು ತಿಳಿಸಿದರು.
ಇದನ್ನೂಓದಿ:ಶಿವಕುಮಾರ್ ಸ್ವಾಮೀಜಿಗೆ ಭಾರತ ರತ್ನ ಕೊಡಬೇಕು ಎಂದಿದ್ದೆ ಆದ್ರೆ ಕೊಡಲಿಲ್ಲ: ಸಿಎಂ ಸಿದ್ದರಾಮಯ್ಯ