ಕರ್ನಾಟಕ

karnataka

ETV Bharat / state

ಮೈಸೂರು : ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ - JAMBOO SAVARI

ಸಿಎಂ ಸಿದ್ದರಾಮಯ್ಯ ಅವರಿಂದು ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದರು.

cm-siddaramaiah
ಸಿಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Oct 12, 2024, 3:18 PM IST

Updated : Oct 12, 2024, 3:53 PM IST

ಮೈಸೂರು :ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಮಧ್ಯಾಹ್ನ 1:55ರ ಸುಮಾರಿಗೆ ಸಿಎಂ ಸಿದ್ದರಾಮಯ್ಯ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಈ ಮೂಲಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದರು.

ಸಿಎಂ ಸಿದ್ದರಾಮಯ್ಯಗೆ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್, ಸಚಿವರಾದ ಹೆಚ್​. ಸಿ ಮಹದೇವಪ್ಪ, ಶಿವರಾಜ ತಂಗಡಗಿ, ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಕೆಲ ಶಾಸಕರು ಸಾಥ್​ ನೀಡಿದರು.

ಸಿಎಂ ಸಿದ್ದರಾಮಯ್ಯ (ETV Bharat)

ಪೂಜೆ ಸಲ್ಲಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ನಾಡಿನ ಎಲ್ಲ ಜನತೆಗೆ ವಿಜಯದಶಮಿಯ ಶುಭಾಶಯ ಕೋರಲು ಬಯಸುತ್ತೇನೆ. ಈ ಹಬ್ಬ ವಿಶೇಷವಾಗಿ ದುಷ್ಟ ಶಕ್ತಿಗಳ ಸಂಹಾರ, ಶಿಷ್ಟ ಶಕ್ತಿಗಳ ರಕ್ಷಣೆ ಮಾಡುವುದಾಗಿದೆ ಎಂದರು.

ಕಳೆದ ಬಾರಿ ಬರಗಾಲ ಇದ್ದಿದ್ದರಿಂದ ಈ ಬಾರಿ ಅದ್ದೂರಿಯಾಗಿ, ಅರ್ಥಪೂರ್ಣವಾಗಿ, ಜನರ ಹಬ್ಬವಾಗಿ, ನಾಡಹಬ್ಬವಾಗಿ ದಸರಾವನ್ನು ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್​ ಸಿ ಮಹದೇವಪ್ಪ ಅವರಿಗೆ ಹೇಳಿದ್ದೆ. ಅದರಂತೆ ಈ ಬಾರಿ ಚೆನ್ನಾಗಿ ನಾಡಹಬ್ಬವಾಗಿದೆ ಎಂದರು.

ರೈತರ ಮುಖದಲ್ಲಿ ಮಂದಹಾಸ: ಮಳೆ, ಬೆಳೆ ಈ ಬಾರಿ ಚೆನ್ನಾಗಿ ಆಗಿದೆ. ಎಲ್ಲ ಕಡೆ ಮಳೆಯಾಗಿದೆ. ಎಲ್ಲ ಜಿಲ್ಲೆಗಳಲ್ಲಿಯೂ ಮಳೆಯಾಗಿದೆ. ಎಲ್ಲ ಜಲಾಶಯಗಳು ಕೂಡಾ ತುಂಬಿವೆ. ನೀರಾವರಿ ಜಲಾಶಯಗಳು ತುಂಬಿವೆ. ಹೀಗಾಗಿ, ರೈತರ ಮುಖದಲ್ಲಿ ಮಂದಹಾಸ ಇದೆ ಎಂದು ಹೇಳಿದರು.

ಮಳೆ ನಡುವೆಯೂ ಜಂಬೂ ಸವಾರಿ:ಸಿಎಂ ಚಾಲನೆ ನೀಡಿದ ಬಳಿಕ ಮಳೆಯನ್ನು ಲೆಕ್ಕಿಸದೆ ಸ್ತಬ್ಧಚಿತ್ರಗಳ ಮೆರವಣಿಗೆ ಸಾಗಿದೆ.

ಇದನ್ನೂ ಓದಿ :Jamboo Savari 2024: ಬನ್ನಿ ಪೂಜೆ ನೆರವೇರಿಸಿದ ಯದುವೀರ್‌ ಒಡೆಯರ್‌: ದಸರಾ ಜಂಬೂ ಸವಾರಿಗೆ ಕ್ಷಣಗಣನೆ

Last Updated : Oct 12, 2024, 3:53 PM IST

ABOUT THE AUTHOR

...view details