ಕರ್ನಾಟಕ

karnataka

ETV Bharat / state

ಸಾಧಕ ಕ್ರೀಡಾ ಪಟುಗಳಿಗೆ ವಿವಿಧ ಇಲಾಖೆ ನೇಮಕಾತಿಗೆ ಆಫರ್ ಲೆಟರ್ ವಿತರಿಸಿದ ಸಿಎಂ - offer letter to sports achievers - OFFER LETTER TO SPORTS ACHIEVERS

ಸಿಎಂ ಸಿದ್ದರಾಮಯ್ಯ ಸಾಧಕ ಕ್ರೀಡಾ ಪಟುಗಳಿಗೆ ವಿವಿಧ ಇಲಾಖೆ ನೇಮಕಾತಿಗೆ ಆಫರ್ ಲೆಟರ್ ವಿತರಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಪದಕ ಪಡೆದಿರುವವರಿಗೆ ಸರ್ಕಾರ ನೆರವಾಗಲಿದೆ ಎಂದಿದ್ದಾರೆ.

cm-siddaramaiah-distribute-offer-letter-for-various-departments-recruitment-to-sports-achievers
ಸಾಧಕ ಕ್ರೀಡಾ ಪಟುಗಳಿಗೆ ವಿವಿಧ ಇಲಾಖೆ ನೇಮಕಾತಿಗೆ ಆಫರ್ ಲೆಟರ್ ವಿತರಿಸಿದ ಸಿಎಂ (ETV Bharat)

By ETV Bharat Karnataka Team

Published : Aug 4, 2024, 5:55 PM IST

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಏಷಿಯನ್ ಗೇಮ್ಸ್, ಪ್ಯಾರಾ ಏಷಿಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್​ಗಳಲ್ಲಿ ಪದಕ ವಿಜೇತ ಸಾಧಕ ಕ್ರೀಡಾಪಟುಗಳಿಗೆ ವಿವಿಧ ಇಲಾಖೆಗಳಲ್ಲಿ ಗ್ರೂಪ್ ಎ, ಬಿ ಮತ್ತು ಇತರ ಹುದ್ದೆಗಳಿಗೆ ನೇಮಕಾತಿಗೆ ಆಫರ್ ಲೆಟರ್ ವಿತರಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ 12 ಮಂದಿ ಕ್ರೀಡಾ ಪಟುಗಳಿಗೆ ಅವಕಾಶ ಪತ್ರ (ಆಫರ್ ಲೆಟರ್) ವಿತರಿಸಿದರು. ಈ ವೇಳೆ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದ ರಾಜು, ಯುವ ಸಬಲೀಕರಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪದಕ‌ ಪಡೆದವರಿಗೆ ರಾಜ್ಯ ಸರ್ಕಾರ ನೆರವಾಗಲಿದೆ. ಕ್ರೀಡಾಪಟುಗಳಿಗೆ ಸರ್ಕಾರಿ‌ ಉದ್ಯೋಗ ನೀಡಲು‌ ತೀರ್ಮಾನಿಸಿದ್ದೇವೆ. ಸುಮಾರು‌ 12 ಜನರಿಗೆ ನೇರ ನೇಮಕಾತಿಗೆ ಅವಕಾಶ ಪತ್ರ ನೀಡುತ್ತಿದ್ದೇವೆ. 2016-17 ಒಲಿಂಪಿಕ್ಸ್ ಅಸೋಸಿಯೇಷನ್ ಏರ್ಪಾಡು ಮಾಡಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದೆ. ಆಗ ಸಾಧನೆ, ಪದಕ ಪಡೆದವರಿಗೆ ಸರ್ಕಾರದಲ್ಲಿ‌ ಆದ್ಯತೆ ಮೇಲೆ ಕೆಲಸ ನೀಡುವ ಬಗ್ಗೆ ಘೋಷಣೆ ಮಾಡಿದ್ದೆ ಎಂದರು.

ನಂತರ ಬಂದ ಸರ್ಕಾರ ಕ್ರೀಡಾ ಪಟುಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಜಾರಿ ಮಾಡುವ ಪ್ರಯತ್ನ ಮಾಡಲಿಲ್ಲ. ನಾನು ಮತ್ತೆ ಅಧಿಕಾರಕ್ಕೆ ಬಂದ್ಮೇಲೆ ಮಾಡಿದ್ದೇನೆ. ಪೊಲೀಸ್ ಇಲಾಖೆಯಲ್ಲಿ 2% ಮೀಸಲಾತಿ ಮಾತ್ರ ಬೊಮ್ಮಾಯಿ‌ ಸರ್ಕಾರ ಮಾಡಿತ್ತು. ನಾನು ಬಂದ್ಮೇಲೆ ಪೊಲೀಸ್ ಹಾಗೂ ಅರಣ್ಯ ಇಲಾಖೆಯಲ್ಲಿ 3% ನೀಡಿದೆ. ಪದವಿ ಪಡೆದವರಿಗೆ ಗ್ರೂಪ್-ಸಿ ನೀಡಲು‌ ತೀರ್ಮಾನ ಮಾಡಿದ್ದೇವೆ. 12 ಸಾಧಕರಿಗೆ ಸರ್ಕಾರಿ ಉದ್ಯೋಗ ನೀಡುತ್ತಿದ್ದೇವೆ. ಒಬ್ಬರಿಗೆ ಮಾತ್ರ ಗ್ರೂಪ್ A, ಬಾಕಿ ಉಳಿದವರಿಗೆ ಗ್ರೂಪ್- B ಹುದ್ದೆ ನೀಡುತ್ತಿದ್ದೇವೆ ಎಂದರು.

ಉದ್ಯೋಗ ಪತ್ರ ಪಡೆದ, ಪದಕ‌ ವಿಜೇತರಿಗೆ ತುಂಬು ಹೃದಯದ ಅಭಿನಂದನೆಗಳು. 35-40 ವರ್ಷದ ವಯೋಮಿತಿಯನ್ನ ಮಾಡಿದ್ದೇವೆ. ಉದ್ಯೋಗಕ್ಕೆ ಸೇರಿಕೊಳ್ಳಲು 45 ವರ್ಷಗಳ ವಯೋಮಿತಿಯನ್ನು ನೀಡಿದ್ದೇವೆ ಎಂದರು.

ಗಿರೀಶ್ ಹೆಚ್. ಎನ್ - ಕ್ಲಾಸ್ ಒನ್ ಆಫೀಸರ್ ಹುದ್ದೆ, ದಿವ್ಯಾ. ಟಿ. ಎಸ್- ಗ್ರೂಪ್ ಬಿ ಹುದ್ದೆ, ಉಷಾರಾಣಿ ಎನ್- ಗ್ರೂಪ್ ಬಿ ಹುದ್ದೆ, ಸುಷ್ಮಿತ ಪವಾರ್ ಓ- ಗ್ರೂಪ್ ಬಿ ಹುದ್ದೆ, ನಿಕ್ಕಿನ್ ತಿಮ್ಮಯ್ಯ ಸಿ. ಎ- ಗ್ರೂಪ್ ಬಿ, ಎಸ್. ವಿ ಸುನೀಲ್ -ಗ್ರೂಪ್ ಬಿ ಹುದ್ದೆ, ಕಿಶನ್ ಗಂಗೊಳ್ಳಿ- ಗ್ರೂಪ್ ಬಿ ಹುದ್ದೆ, ರಾಘವೇಂದ್ರ- ಗ್ರೂಪ್ ಬಿ ಹುದ್ದೆ, ರಾಧಾ ವಿ- ಗ್ರೂಪ್ ಬಿ ಹುದ್ದೆ, ಶರತ್ ಎಂ. ಎಸ್- ಗ್ರೂಪ್ ಬಿ ಹುದ್ದೆ, ಗುರುರಾಜ - ಗ್ರೂಪ್ ಬಿ ಹುದ್ದೆ, ಮಲಪ್ರಭಾ ಯಲ್ಲಪ್ಪ ಜಾಧವ- ಗ್ರೂಪ್ ಬಿ ಹುದ್ದೆ ಸೇರಿ ಒಟ್ಟು 12 ಕ್ರೀಡಾ ಸಾಧಕರಿಗೆ ಆಫರ್ ಲೆಟರ್ ಕೊಟ್ಟಿದ್ದೇವೆ ಎಂದರು.

ಇದನ್ನೂ ಓದಿ :1940 ಗ್ರಾಮೀಣ ಡಾಕ್​ ಸೇವಕ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎರಡೇ ದಿನ ಬಾಕಿ - Karnataka Postal Circle Recruitment

ABOUT THE AUTHOR

...view details