ಕರ್ನಾಟಕ

karnataka

ETV Bharat / state

'ನಿಷ್ಪ್ರಯೋಜಕ ಸಂಸದ ಪಾರ್ಲಿಮೆಂಟ್​ಗೆ ಹೋಗಬಾರದು': ತೇಜಸ್ವಿ ಸೂರ್ಯ ವಿರುದ್ದ ಸಿಎಂ ವಾಗ್ದಾಳಿ - CM Siddaramaiah - CM SIDDARAMAIAH

ಸಂಸದ ತೇಜಸ್ವಿ ಸೂರ್ಯ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಒಮ್ಮೆಯೂ ಧ್ವನಿ ಎತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Etv Bharat
Etv Bharat

By ETV Bharat Karnataka Team

Published : Apr 7, 2024, 10:57 PM IST

ನಿಷ್ಪ್ರಯೋಜಕ ಸಂಸದ ಪಾರ್ಲಿಮೆಂಟ್​ಗೆ ಹೋಗಬಾರದು

ಬೆಂಗಳೂರು:5 ವರ್ಷಗಳ ಕಾಲತೇಜಸ್ವಿ ಸೂರ್ಯ ಸಂಸದರಾಗಿ ಕರ್ನಾಟಕಕ್ಕೆ ಅನ್ಯಾಯ ಆದಾಗ ಯಾವತ್ತೂ ಪಾರ್ಲಿಮೆಂಟ್​ನಲ್ಲಿ ಧ್ವನಿ ಎತ್ತಿಲ್ಲ. ಇಂತಹ ನಿಷ್ಪ್ರಯೋಜಕ ಸಂಸದ ಪಾರ್ಲಿಮೆಂಟ್​ಗೆ ಹೋಗಬಾರದು. ಹೀಗಾಗಿ ರಾಜ್ಯದ ಪರ ಪಾರ್ಲಿಮೆಂಟ್​ನಲ್ಲಿ ಮಾತನಾಡುವವರಿಗೆ ಮತ ಹಾಕಿ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.

ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿಂದು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಸೌಮ್ಯರೆಡ್ಡಿ ಪರವಾಗಿ ಬಿರುಸಿನ ಪ್ರಚಾರ ಕೈಗೊಂಡು, ಆರು ಕಿಲೋಮೀಟರ್ ರೋಡ್ ಶೋ ನಡೆಸಿ ಮತಯಾಚಿಸಿ ಸಿಎಂ ಮಾತನಾಡಿದರು.

ಸೌಮ್ಯರೆಡ್ಡಿ ಅವರಿಗೆ ಜಯನಗರ ಶಾಸಕರಾಗಿ ಅನುಭವ ಇದೆ. ನಿಮ್ಮ ಪ್ರತಿನಿಧಿಯಾಗಿ ಪಾರ್ಲಿಮೆಂಟ್​ಗೆ ಹೋಗಲು ಸಮರ್ಥರಿದ್ದಾರೆ. ಕಳೆದ ಬಾರಿ ಜಯ‌ನಗರದ ವಿಧಾನಸಭಾ ಚುನಾವಣೆಯಲ್ಲಿ ಇದೇ ತೇಜಸ್ವಿ ಸೂರ್ಯ, ಸೌಮ್ಯರೆಡ್ಡಿ ಸೋಲಿಗೆ ಕಾರಣನಾಗಿದ್ದರು. ಹೀಗಾಗಿ ನೀವೆಲ್ಲಾ ತೇಜಸ್ವಿ ಸೂರ್ಯನನ್ನು ಸೋಲಿಸಿ ಎಂದು ಸಿಎಂ ಕರೆ ನೀಡಿದರು.

ನಾವು ಬರೀ ಭಾವನಾತ್ಮಕವಾಗಿ ನಿಮ್ಮನ್ನು ಕೆರಳಿಸಿ ವಂಚಿಸಲ್ಲ. ನಿಮ್ಮ ಭಾವನೆಗಳನ್ನು ಗೌರವಿಸುತ್ತಲೇ ನಿಮ್ಮ ಬದುಕಿಗೆ ಸ್ಪಂದಿಸುತ್ತೇವೆ. ಆದ್ದರಿಂದ ಕಾಂಗ್ರೆಸ್ ಗೆಲ್ಲಿಸಿ ದೇಶ ಉಳಿಸಿ. ಸೌಮ್ಯರೆಡ್ಡಿ ಗೆದ್ದರೆ ನಾನು ಗೆದ್ದಂತೆ. ನಿಮ್ಮ ಹೃದಯದ ಮಾತು ಕೇಳಿ ಮತ ಹಾಕಿ. ಬರೀ ಭಾವನಾತ್ಮಕವಾಗಿ ಕೆರಳಿ ಮತ ಹಾಕಿದ್ದಕ್ಕೆ ಹತ್ತು ವರ್ಷದಲ್ಲಿ ದೇಶಕ್ಕೆ, ನಿಮಗೆ ಸಿಕ್ಕಿದ್ದೇನು? ಎಂದು ಪ್ರಶ್ನಿಸಿ ಸೌಮ್ಯರೆಡ್ಡಿಯವರನ್ನು ಗೆಲ್ಲಿಸಿ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸಹಕರಿಸಿ ಎಂದು ಸಿಎಂ ಕೋರಿದರು.

ಗ್ಯಾರಂಟಿಯಿಂದ ರಾಜ್ಯ ದೀವಾಳಿ ಆಗುತ್ತದೆ ಎಂದು ಬಿಜೆಪಿಯವರು ಆರೋಪಿಸಿದ್ದರು. ಆದರೆ 23-24 ಸಾಲಿನಲ್ಲಿ 36 ಸಾವಿರ ಕೋಟಿ ವಿನಿಯೋಗವಾಗಿದೆ. ಈಗ ಚುನಾವಣೆ ಬಳಿಕ ಗ್ಯಾರಂಟಿಗಳು‌ ಮುಂದುವರಿಯುದಿಲ್ಲ ಅಂತಿದ್ದಾರೆ. ನಮ್ಮ ಅವಧಿ ಇರುವವರೆಗೂ ಗ್ಯಾರಂಟಿ ಕಾರ್ಯಕ್ರಮ ಮುಂದುವರಿಯುತ್ತದೆ. ಬಿಜೆಪಿಯವರು ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷಗಳಲ್ಲಿ ಭಾರತೀಯರಿಗೆ ಕೊಟ್ಟ ಒಂದು ಮಾತನ್ನೂ ಉಳಿಸಿಕೊಂಡಿಲ್ಲ. ಕಪ್ಪು ಹಣ ವಾಪಾಸ್ ತರಲಿಲ್ಲ. ಭಾರತೀಯರ ಖಾತೆಗೆ 15 ಲಕ್ಷ ಹಾಕಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಅಂದ ಮೋದಿ ರೈತರ ಖರ್ಚು ಹೆಚ್ಚಾಗುವಂತೆ ಮಾಡಿದ್ದಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ, ಬೇಳೆ ಕಾಳುಗಳ ಬೆಲೆ ಇಳಿಸಲಿಲ್ಲ. ಮತ್ತೆ ಅದೇ ಮುಖ ನೋಡಿ ಮತ ಹಾಕಿದರೆ ಆ ಮತಕ್ಕೆ ಘನತೆ ಬರುತ್ತದಾ ಎಂದು ಸಿಎಂ ಪ್ರಶ್ನಿಸಿದರು.‌

ಇದನ್ನೂ ಓದಿ:'ರಾಜಕಾರಣಕ್ಕೆ ಮೋದಿ ದೇವರಿದ್ದಂತೆ, ಕಾಂಗ್ರೆಸ್​ನವರು ಬೇಕಾದ್ರೆ ಮೋದಿ ಫೋಟೋ ಬಳಸಲಿ' - Radha Mohan Das

ABOUT THE AUTHOR

...view details