ಕರ್ನಾಟಕ

karnataka

ETV Bharat / state

ಸರ್ಕಾರಕ್ಕೆ ಹಣಕಾಸಿನ ಒತ್ತಡ ನಿಜ, ಆದರೆ ಗ್ಯಾರಂಟಿ ಬಗ್ಗೆ ನಾವು ವಾರಂಟಿ ಕೊಡುತ್ತೇವೆ: ರಾಯರೆಡ್ಡಿ - Karnataka Govt Financial Stress - KARNATAKA GOVT FINANCIAL STRESS

ರಾಜ್ಯ ಸರ್ಕಾರಕ್ಕೆ ಹಣಕಾಸಿನ ವಿಚಾರದಲ್ಲಿ ಒತ್ತಡವಿರುವುದು ನಿಜ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ತಿಳಿಸಿದರು.

ಬಸವರಾಜ್ ರಾಯರೆಡ್ಡಿ
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ (ETV Bharat)

By ETV Bharat Karnataka Team

Published : Aug 16, 2024, 5:58 PM IST

ಬಸವರಾಜ್ ರಾಯರೆಡ್ಡಿ (ETV Bharat)

ಬೆಂಗಳೂರು: ಪಂಚ ಗ್ಯಾರಂಟಿಗಳ ಪರಿಷ್ಕರಣೆ ವಿಚಾರ ಸರ್ಕಾರದ ಮುಂದಿಲ್ಲ. ಆದರೆ, ಹಣಕಾಸಿನ ವಿಚಾರವಾಗಿ ಸ್ವಲ್ಪ ಒತ್ತಡವಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿಂದು ಮಾತನಾಡಿದ ಅವರು, ಮುಂದಿನ ವರ್ಷದಿಂದ ನಮಗೆ ಸಮಸ್ಯೆ ಆಗುವುದಿಲ್ಲ ಎಂಬ ವಿಶ್ವಾಸವಿದೆ. ಮುಂದಿನ‌ ಬಜೆಟ್ 4 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗುತ್ತದೆ. ಸರ್ಕಾರಿ ನೌಕರರು ಗ್ಯಾರಂಟಿಯ ಲಾಭ ಪಡೆಯುತ್ತಿದ್ದಾರೆ. ಅದರ ಪರಿಷ್ಕರಣೆ ಬಗ್ಗೆ ಚರ್ಚೆಯಾಗಿದೆ. ಬದಲಾವಣೆ ಬಗ್ಗೆ ಚರ್ಚೆಯಾಗಿಲ್ಲ. ಗ್ಯಾರಂಟಿಗಳನ್ನು ಸರ್ಕಾರಿ ನೌಕರರು ಪಡೆಯುತ್ತಿರುವ ಬಗ್ಗೆ ಕೆಲವರು ಆಕ್ಷೇಪ ಎತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ, ಗ್ಯಾರಂಟಿ ಬಗ್ಗೆ ನಾವು ವಾರಂಟಿ ಕೊಡುತ್ತೇವೆ ಎಂದರು.

ಆಗಸ್ಟ್ 28, 29, 30ರಂದು 16ನೇ ಹಣಕಾಸು ಆಯೋಗ ರಾಜ್ಯಕ್ಕೆ ಭೇಟಿ ಕೊಡಲಿದೆ. ಅದಕ್ಕೆ ಏನೆಲ್ಲಾ ಮಾಹಿತಿ ನೀಡಬೇಕೆಂಬ ಬಗ್ಗೆ ಚರ್ಚೆಯಾಗಿದೆ. ನಮಗೆ 15ನೇ ಹಣಕಾಸು ಆಯೋಗದಲ್ಲಿ ಏನೆಲ್ಲಾ ತೊಂದರೆ, ಅನ್ಯಾಯವಾಗಿದೆ ಎಂದು ಚರ್ಚೆಯಾಗಿದೆ. ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ವಿವರಣೆ ನೀಡಲು ಚರ್ಚೆಯಾಗಿದೆ. ಮುಂದೆ ನಮ್ಮ ರಾಜ್ಯಕ್ಕೆ ನಿಗದಿಪಡಿಸಿದ ಹಣ ಬರಬೇಕು ಎಂದು ಹಣಕಾಸು ಆಯೋಗಕ್ಕೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.

15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕರ್ನಾಟಕಕ್ಕೆ 11,500 ಕೋಟಿ ಬರಬೇಕಿತ್ತು. ಆದರೆ, ನಿರ್ಮಲಾ ಸೀತಾರಾಮನ್ ಸಂಸತ್​ನಲ್ಲಿ ಹಣ ಕೊಟ್ಟಿದ್ದೇವೆ ಅಂತಾ ಹೇಳಿದ್ದಾರೆ. ಆದರೆ, ಅವರು ವಾಸ್ತವವಾಗಿ ಕೊಟ್ಟಿಲ್ಲ, ಡಬಲ್ ಸ್ಟ್ಯಾಂಡರ್ಡ್ಸ್‌ ಹೊಂದಿದ್ದಾರೆ. 16ನೇ ಹಣಕಾಸು ಆಯೋಗದ ಮುಂದೆ ನಾವು ಪ್ರಸ್ತಾಪ ಮಾಡುತ್ತೇವೆ ಎಂದು ಹೇಳಿದರು.

ಬೆಂಗಳೂರು ರಸ್ತೆಗಳು ಗುಂಡಿ ಬಿದ್ದಿರುವ ವಿಚಾರವಾಗಿ ಸಚಿವ ಕೃಷ್ಣ ಬೈರೇಗೌಡರ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬೆಂಗಳೂರಿನಲ್ಲಿ ರಸ್ತೆ ಹಾಳಾಗಿರೋದು ನಿಜ. ಬೆಂಗಳೂರು ನಗರಾಭಿವೃದ್ಧಿ ಸಚಿವರು ಬಿಬಿಎಂಪಿ ನೋಡಿಕೊಳ್ತಾರೆ ಎಂದರು.

ಇದನ್ನೂ ಓದಿ: ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಹಾಕುವುದಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ - Lakshmi Hebbalkar

ABOUT THE AUTHOR

...view details