ಚಿಕ್ಕೋಡಿ(ಬೆಳಗಾವಿ): ಕಾಂಗ್ರೆಸ್ಗೆ ಒಳ್ಳೆಯ ಜನಸ್ಪಂದನೆ ಇದೆ. ಎಲ್ಲರೂ ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆ ಎಂದು ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು. 'ಈಟಿವಿ ಭಾರತ್' ಜತೆಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೊಟ್ಟ ಐದು ಗ್ಯಾರಂಟಿ ಯೋಜನೆಗಳು, ಐದು ನ್ಯಾಯಗಳನ್ನು ಕೊಡುವುದಾಗಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ್ ಖರ್ಗೆ ಭರವಸೆ ನೀಡಿದ್ದಾರೆ. ನನ್ನ ತಂದೆ ಲೋಕೋಪಯೋಗಿ ಸಚಿವರಾಗಿ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನಾನು ಯುವ ನಾಯಕಿಯಾಗಿದ್ದೇನೆ. ಇದೆಲ್ಲವನ್ನೂ ಜನರ ಮುಂದಿಟ್ಟು ಈ ಬಾರಿಗೆ ನನಗೆ ಅವಕಾಶ ಮಾಡಿಕೊಡಬೇಕೆಂದು ಕೇಳುತ್ತೇನೆ ಎಂದರು.
ಈ ಬಾರಿ ಜನ ಬದಲಾವಣೆ ಬಯಸಿದ್ದಾರೆ, ಕಾಂಗ್ರೆಸ್ಗೆ ಒಳ್ಳೆಯ ಜನಸ್ಪಂದನೆ ಇದೆ: ಪ್ರಿಯಾಂಕಾ ಜಾರಕಿಹೊಳಿ - Priyanka Jarakiholi - PRIYANKA JARAKIHOLI
ಐದು ಗ್ಯಾರಂಟಿ ಯೋಜನೆಗಳು, ನನ್ನ ತಂದೆ ಲೋಕೋಪಯೋಗಿ ಸಚಿವರಾಗಿ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟು ಮತಯಾಚನೆ ಮಾಡುತ್ತೇನೆಂದು ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
Published : Apr 7, 2024, 9:42 PM IST
|Updated : Apr 7, 2024, 9:57 PM IST
ನಮಗೆ ರಾಜಕೀಯ ಹೊಸತಲ್ಲ, ಕಳೆದ 40 ವರ್ಷದಿಂದ ನಮ್ಮ ಕುಟುಂಬ ರಾಜಕೀಯ ಮಾಡಿಕೊಂಡು ಬಂದಿದೆ. ನಾನು ಗೆದ್ದರೆ ಮುಂದಿನ ಐದು ವರ್ಷ ಜನರ ಜತೆ ಸಂಪರ್ಕದಲ್ಲಿದ್ದು ಅವರ ಕುಂದು-ಕೊರತೆಗಳನ್ನು ಬಗೆಹರಿಸಿ, ಅಭಿವೃದ್ಧಿ ಕೆಲಸ ಮಾಡುತ್ತೇನೆ. ಕೈಗಾರಿಕೆ ಮತ್ತು ಕಾಲೇಜುಗಳನ್ನು ಸ್ಥಾಪಿಸಲು ಪ್ರಯತ್ನ ಮಾಡುತ್ತೇನೆ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಪ್ರತಿ ತಿಂಗಳು ಗೃಹಲಕ್ಷ್ಮಿಯ ಎರಡು ಸಾವಿರ ಹಣ ಅವರ ಖಾತೆಗೆ ಜಮೆಯಾಗುತ್ತಿದೆ. ಸುಮಾರು 90 ರಿಂದ 95% ರಷ್ಟು ಮಹಿಳೆಯರಿಗೆ ಇದರಿಂದ ಅನುಕೂಲವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಹಾವೇರಿ: ಬಸವರಾಜ ಬೊಮ್ಮಾಯಿ ಪರ ಪುತ್ರನಿಂದ ಮತಯಾಚನೆ - Basavaraj Bommai