ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: 60 ಅಡಿ ಆಳದ ಬಾವಿಗೆ ಬಿದ್ದ 90ರ ವೃದ್ಧೆಯ ರಕ್ಷಣೆ - RESCUE OF AN OLD WOMAN

ಆಕಸ್ಮಿಕವಾಗಿ ಕಾಲು ಜಾರಿ 60 ಅಡಿ ಆಳದ ಬಾವಿಗೆ ಬಿದ್ದಿದ್ದ ವೃದ್ಧೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

RESCUE OF ON OLD WOMAN
90 ಅಡಿ ಆಳದ ಬಾವಿಗೆ ಬಿದ್ದ ವೃದ್ಧೆಯ ರಕ್ಷಣೆ (ETV Bharat)

By ETV Bharat Karnataka Team

Published : Dec 3, 2024, 3:24 PM IST

ಚಿಕ್ಕಮಗಳೂರು: 60 ಅಡಿ ಬಾವಿಗೆ ಬಿದ್ದ ವೃದ್ಧೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮರಕಟ್ಟೆ ಗ್ರಾಮದಲ್ಲಿ ನಡೆದಿದೆ.

90 ವರ್ಷದ ವೃದ್ಧೆ ಕಮಲ ಅವರು ಆಕಸ್ಮಿಕವಾಗಿ ಕಾಲು ಜಾರಿ 60 ಅಡಿ ಆಳದ ಬಾವಿಗೆ ಬಿದ್ದಿದ್ದರು. ಬಾವಿಯೊಳಗೆ ಪೈಪ್ ಹಿಡಿದು ಮುಳುಗದಂತೆ ಕಮಲ ಅವರು ಒಂದು ಗಂಟೆಗೂ ಹೆಚ್ಚು ಕಾಲ ಅಲ್ಲಿಯೇ ಕುಳಿತಿದ್ದರು. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅಗ್ನಿ ಶಾಮಕದಳ ಸಿಬ್ಬಂದಿ, ವೃದ್ಧೆಯನ್ನು ರಕ್ಷಣೆ ಮಾಡಿದ್ದಾರೆ.

ಅಗ್ನಿಶಾಮಕ ದಳದ ಕಾರ್ಯಕ್ಕೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ರಕ್ಷಣೆ ಮಾಡಿದ ವೃದ್ಧೆಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

60 ಅಡಿ ಆಳದ ಬಾವಿಗೆ ಬಿದ್ದ ವೃದ್ಧೆಯ ರಕ್ಷಣೆ (ETV Bharat)

ಇದನ್ನೂ ಓದಿ:ಸುಳ್ಯದ ಅರಣ್ಯದೊಳಗಿದೆ ಒಂದು ವಿಸ್ಮಯಕಾರಿ ಬಾವಿ: ಏನಿದರ ವಿಶೇಷತೆ? - An amazing well in Sulya

ABOUT THE AUTHOR

...view details