ಕರ್ನಾಟಕ

karnataka

ETV Bharat / state

ತಮಿಳು ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ವಂಚನೆ: ಬೆಂಗಳೂರಲ್ಲಿ ನಟಿಯಿಂದ ದೂರು - Actress lodges cheating case

ತಮಿಳಿನ ಹಂಟರ್ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಕನ್ನಡದ ನಟಿಗೆ ನಂಬಿಸಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

Cheating case
Cheating case (ETV Bharat)

By ETV Bharat Karnataka Team

Published : Aug 6, 2024, 10:44 AM IST

ಬೆಂಗಳೂರು: ತಮಿಳು ಭಾಷೆಯ ಹಂಟರ್ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಕನ್ನಡದ ನಟಿಯೊಬ್ಬರಿಗೆ ಲಕ್ಷಾಂತರ ರೂ ವಂಚಿಸಿದ ಆರೋಪ ಪ್ರಕರಣ ಬೆಳಕಿಗೆ ಬಂದಿದೆ. ವಂಚನೆ ಕುರಿತು ನಟಿ ನಂದಿತಾ.ಕೆ.ಶೆಟ್ಟಿ ಅವರು ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

'ಹಂಟರ್' ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ 1.71 ಲಕ್ಷ ರೂ ವಂಚಿಸಲಾಗಿದೆ ಎಂದು ನಟಿ ನಂದಿತಾ.ಕೆ.ಶೆಟ್ಟಿ ದೂರಿದ್ದಾರೆ. ತಮಿಳು ನಟ, ನಿರ್ದೇಶಕ ರಾಘವ ಲಾರೆನ್ಸ್ ಅವರ 25ನೇ ಸಿನಿಮಾ ಹಂಟರ್.

ಹಂಟರ್ ಸಿನಿಮಾಗಾಗಿ ನಟಿಯರ ಆಡಿಷನ್ ಇರುವುದಾಗಿ ಇನ್‌ಸ್ಟಾಗ್ರಾಂ ಪೋಸ್ಟ್​ ಬಂದಿತ್ತು. ಅದನ್ನು ಗಮನಿಸಿ, ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ತಮ್ಮ ವಿವರಗಳನ್ನ ನಮೂದಿಸಿದ್ದೆ. ನಂತರ ವಾಟ್ಸ್​​ಆ್ಯಪ್​ ಮೂಲಕ ಸಂಪರ್ಕಿಸಿದ್ದ ವ್ಯಕ್ತಿಯೋರ್ವ ತನ್ನನ್ನ ಹಂಟರ್ ಸಿನಿಮಾದ ಕಾಸ್ಟಿಂಗ್ ಡೈರೆಕ್ಟರ್ ಸುರೇಶ್ ಕುಮಾರ್ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಆನ್‌ಲೈನ್‌ನಲ್ಲಿ ಆಡಿಷನ್ ಮಾಡಿದ್ದ ಸುರೇಶ್ ಕುಮಾರ್ ಆರ್ಟಿಸ್ಟ್ ಕಾರ್ಡ್, ಅಗ್ರಿಮೆಂಟ್ ಸ್ಟ್ಯಾಂಪ್ ಡ್ಯೂಟಿ, ಚಿತ್ರೀಕರಣಕ್ಕಾಗಿ ಮಲೇಷಿಯಾಗೆ ತೆರಳಲು ಪಾಸ್‌ಪೋರ್ಟ್ ಹಾಗೂ ವಿಮಾನ ಟಿಕೆಟ್ ಶುಲ್ಕವೆಂದು ಹೇಳಿ ಹಂತ ಹಂತವಾಗಿ 1.71 ಲಕ್ಷ ರೂ ಹಣವನ್ನ ಆನ್‌ಲೈನ್‌ ಮೂಲಕ ಪಡೆದಿದ್ದ. ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟಾಗ ಅನುಮಾನಗೊಂಡು ಪರಿಶೀಲಿಸಿದಾಗ ವಂಚನೆಯಾಗಿರುವುದು ಗೊತ್ತಾಗಿದೆ ಎಂದು ಕೋಣನಕುಂಟೆ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ನಟಿ ಉಲ್ಲೇಖಿಸಿದ್ದಾರೆ.

ಕೋಣನಕುಂಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಬೆಂಗಳೂರಲ್ಲಿ ಪೊಲೀಸರಿಂದಲೇ ಹಣ ಸುಲಿಗೆ ಮಾಡುತ್ತಿದ್ದ ಆರೋಪಿ ಬಂಧನ - Extortion from Police

ABOUT THE AUTHOR

...view details