ಉಡುಪಿ:ಅಮೆರಿಕಾದ ಚಿಕಾಗೋದಲ್ಲಿ ಡೆಮಾಕ್ರೆಟಿಕ್ ಪಕ್ಷದ ಸಮಾವೇಶದಲ್ಲಿ ಕನ್ನಡಿಗನಿಂದ ವೇದ ಪಠಣ ನಡೆದಿದ್ದು, ಪೇಜಾವರ ಶ್ರೀಗಳು ಅಭಿನಂದಿಸಿದ್ದಾರೆ. ವೇದ ಪಠಣ ಮಾಡಿರುವ ಬೆಂಗಳೂರು ಮೂಲದ ರಾಕೇಶ್ ಭಟ್ ಅವರು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರ ಶಿಷ್ಯರಾಗಿದ್ದರು.
ಅಮೆರಿಕಾದ ಡೆಮಾಕ್ರೆಟಿಕ್ ಪಕ್ಷದ ಸಮಾವೇಶದಲ್ಲಿ ಕನ್ನಡಿಗನಿಂದ ವೇದ ಪಠಣ: ಪೇಜಾವರ ಶ್ರೀಗಳಿಂದ ಅಭಿನಂದನೆ - Kannadiga chanted Vedas in us - KANNADIGA CHANTED VEDAS IN US
ಚಿಕಾಗೋದಲ್ಲಿ ಡೆಮಾಕ್ರೆಟಿಕ್ ಪಕ್ಷದ ಸಮಾವೇಶದಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರ ಹಾಗೂ ಶ್ರೀ ವಿಶ್ವಪ್ರಸನ್ನ ತೀರ್ಥರ ಶಿಷ್ಯ, ನಮ್ಮ ಕನ್ನಡಿಗ ರಾಕೇಶ್ ಭಟ್ ಅವರು ವೇದ ಪಠಣ ಮಾಡಿದ್ದು ಎಲ್ಲರ ಗಮನ ಸೆಳೆದಿದ್ದಾರೆ.
Published : Aug 23, 2024, 7:10 AM IST
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೇಜಾವರ ಮಠಾದೀಶ ಶ್ರೀ ವಿಶ್ವಪ್ರಸನ್ನ ತೀರ್ಥರು, "ರಾಕೇಶ್ ಭಟ್ ನಮ್ಮ ಗುರುಗಳಾದ ಶ್ರೀ ವಿಶ್ವೇಶ ತೀರ್ಥರು ಮತ್ತು ನಮ್ಮ ಶಿಷ್ಯರಾಗಿದ್ದಾರೆ. ಇವರು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಕಲಿತಿದ್ದಾರೆ. ರಾಕೇಶ್ ಅವರು ಅಮೆರಿಕಾದ ಚಿಕಾಗೋದಲ್ಲಿ ಮಾಡಿದ ವೇದ ಪಠಣ ಎಲ್ಲರ ಗಮನ ಸೆಳೆದಿದೆ. ಇದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ರಾಕೇಶ್ ಭಟ್ ಅವರ ನಡೆಯನ್ನು ನಾನು ಅಭಿನಂದಿಸುತ್ತೇನೆ. ಆಧ್ಯಾತ್ಮ ನಮ್ಮ ದೇಶವನ್ನು ಪ್ರತಿನಿಧಿಸುತ್ತದೆ. ರಾಕೇಶ್ ಭಟ್ ಅವರ ವಿದ್ವತ್ತು ಸಾರ್ವಜನಿಕರ ಉಪಯೋಗಕ್ಕೆ ಮತ್ತಷ್ಟು ಬಳಕೆಯಾಗಬೇಕು. ಅವರ ಸಾಧನೆಗಳು ಮತ್ತಷ್ಟು ಬೆಳಗಲಿ ಎಂದು ಶ್ರೀಕೃಷನಲ್ಲಿ ಪ್ರಾರ್ಥಿಸುತೇನೆ ಎಂದು ಹೇಳಿದ್ದಾರೆ.