ಕರ್ನಾಟಕ

karnataka

ETV Bharat / state

ಚಾಮರಾಜನಗರ: ಪಾರ್ಕಿಂಗ್​ ಸ್ಥಳದಲ್ಲಿ ಆಟ ಆಡುತ್ತಿದ್ದ ಬಾಲಕಿಗೆ ಕಾರ್ ಡಿಕ್ಕಿ, ಕಂದಮ್ಮ ಸ್ಥಳದಲ್ಲೇ ಸಾವು - ಪಾರ್ಕಿಂಗ್

ಕಾರ್ ನಿಲುಗಡೆ ವೇಳೆ ಅಪಘಾತ ಸಂಭವಿಸಿ ಏಳು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಾದೇಶ್ವರ ಬೆಟ್ಟದಲ್ಲಿ ನಡೆದಿದೆ.

Collided with the next car in the parking lot
ಪಾರ್ಕಿಂಗ್​ನಲ್ಲಿ ಮುಂದಿನ ಕಾರಿಗೆ ಗುದ್ದಿರುವುದು

By ETV Bharat Karnataka Team

Published : Feb 25, 2024, 4:41 PM IST

ಚಾಮರಾಜನಗರ: ಕಾರ್ ಪಾರ್ಕಿಂಗ್​ ಮಾಡುತ್ತಿದ್ದಾಗ ಅಪಘಾತ ಸಂಭವಿಸಿ ಏಳು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಮಲೆಮಾದೇಶ್ವರ ಬೆಟ್ಟದಲ್ಲಿ ಸಂಭವಿಸಿದೆ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಉಳ್ಳಾಂಗ ಕೊಟ್ಟಾಯ ಗ್ರಾಮದ ಸುಶ್ಮಿತಾ (7) ಎಂಬ ಬಾಲಕಿ ಮೃತಪಟ್ಟಿದ್ದಾಳೆ. ತಾತ- ಅಜ್ಜಿ ಜೊತೆ ಬಂದಿದ್ದ ಬಾಲಕಿ ಪಾಲಾರ್ ರಸ್ತೆಯ ಪಾರ್ಕಿಂಗ್​​ ನಲ್ಲಿ ಆಟ ಆಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಕಾರ್ ಪಾರ್ಕಿಂಗ್​ನಲ್ಲಿ ಕಾರು ನಿಲ್ಲಿಸಿದ್ದ ಡೈಸಿ ಎಂಬ ಮಹಿಳಾ ಚಾಲಕಿ ಏಕಾಏಕಿ ಕಾರು ಚಾಲನೆ ಮಾಡಿದ್ದರಿಂದ ಅದು ಬಾಲಕಿಯ ಎದೆಯ ಮೇಲೆ ಹರಿದು ಮುಂದೆ ನಿಂತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಬಾಲಕಿ ಸಾವಿಗೀಡಾಗಿದ್ದು, ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ.

ಮಾಹಿತಿ ತಿಳಿದ ತಕ್ಷಣ ಮಲೆಮಹದೇಶ್ವರ ಬೆಟ್ಟದ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಪಘಾತದ ಸ್ಥಳವನ್ನು ಪರಿಶೀಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಇದನ್ನೂಓದಿ:ಕಾರವಾರ: ಅವ್ಯವಹಾರ ಪ್ರಶ್ನಿಸಿದ ಮಹಿಳೆ ಮೇಲೆ ಹಲ್ಲೆ ಆರೋಪ

ABOUT THE AUTHOR

...view details