ಬೆಂಗಳೂರು: ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆಯಾಗಿದೆ. ಆದರೆ, ಅದರಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಶೀಲ್ಡ್ ಆಗಿ ಕೊಟ್ಟಿದ್ದಾರೆ. ಸಚಿವ ಸಂಪುಟ ಸಭೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಅದರಂತೆ ಮುಂದುವರಿಯೋಣವೆಂದು ಮುಖ್ಯಮಂತ್ರಿಗಳು ಹೇಳಿದ್ದಾರೆ ಅಂತಾ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಡೇಟಾ ಹೊರಗೆ ಬರುವವರೆಗೂ ಏನೂ ಹೇಳಲಾಗದು. ವರದಿಯನ್ನು ತೆಗೆದು ನಂತರ ಚರ್ಚೆ ಮಾಡಿ ನೋಡೋಣ ಎಂದರು.
ಜಾತಿ ಗಣತಿ ವರದಿಗೆ ಲಿಂಗಾಯತ ನಾಯಕರ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅವರಿಗೆ ಅವರ ಸಮುದಾಯದ ನಂಬರ್ ಕಡಿಮೆ ಇರಬಹುದು ಎಂಬ ಆತಂಕ ಇರಬಹುದು. ಈಗ ನೀಡಿರುವ ವರದಿ ಕಮಿಷನ್ ರಿಪೋರ್ಟ್ ಅಂತ ಆಗುತ್ತದೆ. ಕಾಂತರಾಜ್ ವರದಿ, ಜಯಪ್ರಕಾಶ್ ಹೆಗ್ಡೆ ವರದಿ ಅಂತ ಬರಲ್ಲ ಎಂದು ಹೇಳಿದರು.