ಕರ್ನಾಟಕ

karnataka

ETV Bharat / state

ಸೊರಬದ ಮೂಡುಗೋಡು ಗ್ರಾಮದಲ್ಲಿ 7 ಲಕ್ಷ ಮೌಲ್ಯದ ಅಡಕೆ ಮತ್ತು ಗೇರು ಬೀಜ ಕಳವು - cashew and arecanut stolen

ಅಡಕೆ ಮತ್ತು ಗೇರು ಬೀಜವನ್ನು ಕಳ್ಳರು ದರೋಡೆ ನಡೆಸಿರುವ ಘಟನೆ ಸೊರಬದ ಮೂಡುಗೋಡು ಗ್ರಾಮದಲ್ಲಿ ನಡೆದಿದೆ.

cashew-and-arecanut
ಅಡಿಕೆ ಮತ್ತು ಗೇರು ಬೀಜ ಕಳವು (ETV Bharat)

By ETV Bharat Karnataka Team

Published : May 10, 2024, 10:55 PM IST

ಶಿವಮೊಗ್ಗ :ಸೊರಬ ತಾಲೂಕಿನ ಮೂಡುಗೋಡು ಗ್ರಾಮದ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 7 ಲಕ್ಷ ರೂ. ಮೌಲ್ಯದ ಅಡಕೆ ಮತ್ತು ಗೇರು ಬೀಜವನ್ನು ಕಳ್ಳರು ದರೋಡೆ ಮಾಡಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಮೂಡುಗೋಡು ಗ್ರಾಮದ ಜಯಕುಮಾರ್ ಎಂಬುವವರು ಮನೆ ಪಕ್ಕದಲ್ಲಿ ಅಡಕೆ ಗೋದಾಮಿನಲ್ಲಿ ತಾವು ಬೆಳೆದ ಸುಮಾರು 200 ಕ್ವಿಂಟಾಲ್ ಸಿಪ್ಪೆ ಅಡಕೆ, 10 ಕ್ವಿಂಟಾಲ್ ಕೆಂಪು ಅಡಕೆ ಹಾಗೂ 17 ಕ್ವಿಂಟಾಲ್ ಗೇರು ಬೀಜವನ್ನು ಸಂಗ್ರಹಿಸಿದ್ದರು.

ಇಂದು ಬೆಳಗ್ಗೆ ಗೋದಾಮಿಗೆ ತೆರಳಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಳ್ಳರು ಗೋದಾಮಿನ ಬೀಗ ಮುರಿದು ಗೋದಾಮಿನಲ್ಲಿದ್ದ 3 ಲಕ್ಷ ರೂ. ಮೌಲ್ಯದ 15 ಕ್ವಿಂಟಾಲ್ ಒಣ ಸಿಪ್ಪೆ ಗೋಡು ಅಡಕೆ, 2.4 ಲಕ್ಷ ರೂ ಮೌಲ್ಯದ 6 ಕ್ವಿಂಟಾಲ್ ಕೆಂಪು ಅಡಕೆ ಹಾಗೂ ಸುಮಾರು 1.2 ಲಕ್ಷ ರೂ. ಮೌಲ್ಯದ 10 ಕ್ವಿಂಟಾಲ್ ಗೇರು ಬೀಜವನ್ನು ಕಳ್ಳತನ ಮಾಡಲಾಗಿದೆ.

ಜಯಕುಮಾರ್ ನೀಡಿದ ದೂರಿನ ಅನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಶಿವಮೊಗ್ಗದ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದರು. ಕಳ್ಳರ ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ :ಶಿವಮೊಗ್ಗದಲ್ಲಿ ಅಡಿಕೆ ಕದಿಯೋ ಖದೀಮರು: 8 ಜನ ಅರೆಸ್ಟ್, 5 ಲಕ್ಷ ಮೌಲ್ಯದ ಅಡಿಕೆ ವಶ

ABOUT THE AUTHOR

...view details