ಕರ್ನಾಟಕ

karnataka

ETV Bharat / state

ಬೆಂ.ವಿ.ವಿ ಕುಲಪತಿ ಡಾ. ಜಯಕರಗೆ ಗೌರವ ಕರ್ನಲ್ ಪದವಿ ಪ್ರದಾನ - DR JAYAKAR RECIVES COLONEL HONOR

ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ. ಜಯಕರ ಎಸ್.ಎಮ್ ಅವರಿಗೆ ಗೌರವ ಕರ್ನಲ್ ಪದವಿ ಪ್ರದಾನ ಮಾಡಲಾಯಿತು.

ಬೆಂ.ವಿ.ವಿ ಕುಲಪತಿ ಡಾ.ಜಯಕರಗೆ ಗೌರವ ಕರ್ನಲ್ ಪದವಿ ಪ್ರದಾನ
ಬೆಂ.ವಿ.ವಿ ಕುಲಪತಿ ಡಾ.ಜಯಕರಗೆ ಗೌರವ ಕರ್ನಲ್ ಪದವಿ ಪ್ರದಾನ (ETV Bharat)

By ETV Bharat Karnataka Team

Published : May 13, 2024, 6:24 PM IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಜಯಕರ ಎಸ್.ಎಮ್​ ಅವರಿಗೆ ನ್ಯಾಷನಲ್ ಕೆಡೆಟ್ ಕಾರ್ಪ್ಸ್‌ನ ಗೌರವ ಕರ್ನಲ್ ಪದವಿ ಪ್ರದಾನ ಮಾಡಲಾಯಿತು.

ಜ್ಞಾನಭಾರತಿ ಆವರಣದ ವಿ.ಬಿ. ಕುಟೀನೋ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‌ನ ಡೆಪ್ಯುಟಿ ಡೈರೆಕ್ಟರ್ ಜನರಲ್ ಎಸ್.ಬಿ.ಅರುಣ್ ಕುಮಾರ್‌ ಕುಲಪತಿ ಡಾ. ಜಯಕರ ಎಸ್.ಎಮ್​ರಿಗೆ ಗೌರವ ಕರ್ನಲ್ ಪದವಿ ಪ್ರದಾನ ಮಾಡಿದರು.

ಗೌರವ ಕರ್ನಲ್ ಪದವಿ ಸ್ವೀಕರಿಸಿದ ಬಳಿಕ ಕುಲಪತಿ ಡಾ. ಜಯಕರ ಎಸ್ ಎಂ ಮಾತನಾಡಿ, "ದೇಶದ ಅತಿದೊಡ್ಡ ರಾಷ್ಟ್ರೀಯ ಸಂಘಟನೆ ಎನ್‌ಸಿ‌ಸಿ ವತಿಯಿಂದ ಈ ಗೌರವ ಪಡೆದಿರುವುದು ಸಾಕಷ್ಟು ಹೆಮ್ಮೆ ತಂದಿದೆ. ಈ ಪದವಿ ಕೇವಲ ವೈಯಕ್ತಿಕವಾಗಿ ಸಿಕ್ಕಿರುವ ಗೌರವವಲ್ಲ, ಇದು ಇಡೀ ವಿಶ್ವವಿದ್ಯಾಲಯಕ್ಕೆ ದಕ್ಕಿರುವ ಗೌರವ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಏಕತೆ, ರಾಷ್ಟ್ರಪ್ರೇಮ, ಧೈರ್ಯ, ಶಕ್ತಿಯನ್ನು ತುಂಬಿ ದೇಶದ ಅತ್ಯುತ್ತಮ ಪ್ರಜೆಗಳನ್ನಾಗಿ ನಿರ್ಮಿಸುವಲ್ಲಿ ಎನ್‌ಸಿ‌ಸಿ ಪಾತ್ರ ದೊಡ್ಡದಾಗಿದೆ‌" ಎಂದರು.

"ಎನ್‌ಸಿ‌ಸಿ ಸಮವಸ್ತ್ರ ದೇಶದ ಸೈನ್ಯ ಮತ್ತು ರಕ್ಷಣೆಯನ್ನು ಪ್ರತಿನಿಧಿಸುತ್ತದೆ, ಆ ಸಮವಸ್ತ್ರದ ಹಿರಿಮೆ ಹೆಚ್ಚಿಸುವ ಕೆಲಸಗಳನ್ನು ಮಾಡುತ್ತೇನೆ. ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಅವಶ್ಯಕವಾದ ಸಂಪನ್ಮೂಲ ಮತ್ತು ಅವಕಾಶಗಳನ್ನು ಒದಗಿಸಿ ಎನ್‌ಸಿಸಿ ಬಲ ಹೆಚ್ಚಿಸಲು, ವಿಸ್ತರಿಸಲು ಪ್ರಯತ್ನಿಸುತ್ತೇನೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ವಾತಾವರಣ ನಿರ್ಮಿಸಲು ಶ್ರಮಿಸುತ್ತೇನೆ. ಈಗಾಗಲೇ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮೆರೆದಿರುವ ಬೆಂಗಳೂರು ವಿವಿ ಹೊಸ ಯೋಜನೆ ಮತ್ತು ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಮತ್ತಷ್ಟು ಕೊಡುಗೆ ನೀಡಲು ದುಡಿಯುತ್ತದೆ. ದೇಶದ ಜವಾಬ್ದಾರಿಯುತ ಪ್ರಜೆಗಳನ್ನು ನಿರ್ಮಿಸಲು, ಬಲಿಷ್ಠ ರಾಷ್ಟ್ರ ನಿರ್ಮಿಸಲು ವೈಯಕ್ತಿಕವಾಗಿ ಸಂಸ್ಥೆಯ ಪರವಾಗಿ ಶ್ರಮಿಸುತ್ತೇನೆ" ಎಂದು ಹೇಳಿದರು.

ಗೌರವ ಪದವಿ ಪ್ರದಾನ ಮಾಡಿ ಮಾತನಾಡಿದ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‌ನ ಡೆಪ್ಯುಟಿ ಡೈರೆಕ್ಟರ್ ಜನರಲ್ ಎಸ್.ಬಿ. ಅರುಣ್ ಕುಮಾರ್‌, ಎನ್‌ಸಿಸಿ ವತಿಯಿಂದ ಕುಲಪತಿ ಡಾ. ಜಯಕರ ಎಸ್ ಎಂ ಅವರ ಸಾಧನೆ ಮತ್ತು ಕೊಡುಗೆ ಗಮನಿಸಿ ಈ ಗೌರವ ಪದವಿಯನ್ನು ಪ್ರದಾನ ಮಾಡಲಾಗಿದೆ. ಅವರ ಜ್ಞಾನ, ಅನುಭವ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಮತ್ತು ಸಹಕಾರಿಯಾಗಲಿದೆ‌. ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಎನ್​ಸಿಸಿಗೆ ಬೇಕಾದ ಮೂಲಭೂತ ಸೌಕರ್ಯ ಮತ್ತು ವ್ಯವಸ್ಥೆಯನ್ನು ನಿರ್ಮಿಸುವುದಾಗಿ ತಿಳಿಸಿದ್ದಾರೆ. ಡಾ. ಜಯಕರ ಎಸ್ ಎಂ ಕುಲಪತಿ ಹುದ್ದೆ ಜೊತೆಗೆ ಗೌರವ ಕರ್ನಲ್ ಹೆಚ್ಚುವರಿ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕುಲಸಚಿವ ಶೇಕ್ ಲತೀಫ್, ಲೆಫ್ಟಿನೆಂಟ್ ಕರ್ನಲ್ ವಿನಯ್ ಅಹ್ಲುವಾಲಿಯ ಸೇರಿದಂತೆ ಹಿರಿಯ ಅಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಚಿರಂಜೀವಿ, ವೈಜಯಂತಿಮಾಲಾಗೆ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ - Padma Vibhushan

ABOUT THE AUTHOR

...view details