ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ, ಎಲ್ಲೆಡೆ ನಿರೀಕ್ಷೆ ಮೀರಿ ಬೆಂಬಲ: ಯಡಿಯೂರಪ್ಪ - B S Yediyurappa - B S YEDIYURAPPA

ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರ ಇಂದು ಬಿ.ಎಸ್.ಯಡಿಯೂರಪ್ಪ ಮತಪ್ರಚಾರ ನಡೆಸಿದರು.

Former CM BS Yeddyurappa spoke to the media.
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮಾಧ್ಯಮದವರೊಂದಿಗೆ ಮಾತನಾಡಿದರು.

By ETV Bharat Karnataka Team

Published : Apr 24, 2024, 6:34 PM IST

ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮಾಧ್ಯಮದವರೊಂದಿಗೆ ಮಾತನಾಡಿದರು.

ತುಮಕೂರು:ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ತುಂಬಾ ಚೆನ್ನಾಗಿದೆ. ಎಲ್ಲೆಡೆ ನಿರೀಕ್ಷೆ ಮೀರಿ ಜನ ಬೆಂಬಲ ಸಿಗ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ತಿಪಟೂರಿನಲ್ಲಿ ಇಂದು ವಿ.ಸೋಮಣ್ಣ ಪರ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೋದಿ ಅಲೆ ಎಲ್ಲೆಡೆ ಬೀಸುತ್ತಿದೆ. ಇದೆಲ್ಲದರ ಆಧಾರದ ಮೇಲೆ‌ ಸೋಮಣ್ಣ ಬಹಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದರು.

ದೇವೇಗೌಡರು ಮತ್ತು ಪ್ರಧಾನಿ ಮೋದಿ ನಡುವಿನ ಸಂಬಂಧ ಹೇಗಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಆಗಿರೋದ್ರಿಂದ ಬಹಳ ದೊಡ್ಡ ಅಂತರದಿಂದ ಎಲ್ಲ 28 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ಕಾಂಗ್ರೆಸ್​​​ನವರು ತಮ್ಮ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು ಅಂತ ಹೆಸರು ಹೇಳಲಿ ಎಂದಿದ್ದೀನಿ. ಇವತ್ತಿನವರೆಗೂ ಅವರಿಗೆ ಹೇಳೋಕೆ ಆಗಿಲ್ಲ. ಅವರ ಸೋಲು ಖಚಿತ ಎಂದು ಹೇಳಿದರು.

ಸಂವಿಧಾನ ಬದಲಾವಣೆ ಮಾಡ್ತಾರೆ ಎಂದು ದಲಿತ ಕೇರಿಗಳಲ್ಲಿ ಪ್ರಚಾರ ಮಾಡುವುದು ಹುಚ್ಚುತನ. ಸಂವಿಧಾನವನ್ನು ಯಾರೂ ಟಚ್ ಮಾಡೋಕೆ ಆಗಲ್ಲ. ಅಂಬೇಡ್ಕರ್ ಮಾಡಿರುವುದು ಪವಿತ್ರವಾದ ಸಂವಿಧಾನ. ಅದನ್ನು ಉಳಿಸಿಕೊಂಡು ಹೋಗಬೇಕಾಗಿದೆ. ಇದೇ ಮಾತನ್ನು ಮೋದಿಯವರು ಹೇಳಿದ್ದಾರೆ. ಸುಳ್ಳು, ಅಪಪ್ರಚಾರ ಮಾಡಿದರೆ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ತಿಳಿಸಿದರು.

ಯಡಿಯೂರಪ್ಪ ಹೆಲಿಕಾಪ್ಟರ್ ಪರಿಶೀಲನೆ:ಯಡಿಯೂರಪ್ಪ ತಿಪಟೂರು ಪಟ್ಟಣಕ್ಕೆ ಆಗಮಿಸಿದ್ದ ವೇಳೆ ಅವರು ಬಂದಿದ್ದ ಹೆಲಿಕಾಪ್ಟರ್ ಅನ್ನು ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದರು. ಸುಮಾರು ಏಳು ಮಂದಿ ಚುನಾವಣಾಧಿಕಾರಿಗಳು ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲ ವಸ್ತುಗಳನ್ನು ಪರಿಶೀಲಿಸಿದರು. ಅಲ್ಲದೇ ಸೂಟ್ಕೇಸ್ ಕೂಡ ತೆರೆದು ನೋಡಿದರು.

ಇದನ್ನೂಓದಿ:ಬೆಂ.ಗ್ರಾಮಾಂತರ ಕ್ಷೇತ್ರದ ಮೇಲೆ ತೀವ್ರ ನಿಗಾ, ಹೆಚ್ಚುವರಿ ಅರೆಸೇನಾ ಪಡೆ ನಿಯೋಜನೆ: ಚುನಾವಣಾಧಿಕಾರಿ - Bengaluru Rural Constituency

ABOUT THE AUTHOR

...view details