ಕರ್ನಾಟಕ

karnataka

ETV Bharat / state

ಶಿಕ್ಷಕಿಯ ವರ್ಗಾವಣೆಗೆ ಲಂಚ: ಡಿಡಿಪಿಐ, ಕಚೇರಿ ಅಧೀಕ್ಷಕ ಲೋಕಾಯುಕ್ತ ಬಲೆಗೆ - BRIBE FOR TEACHER TRANSFER

ಶಿಕ್ಷಕಿಯ ವರ್ಗಾವಣೆಗೆ ಲಂಚ ಪಡೆಯುತ್ತಿದ್ದಾಗ ಡಿಡಿಪಿಐ ಮತ್ತು ಕಚೇರಿ ಅಧೀಕ್ಷಕ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

HASSAN  LOKAYUKTA POLICE  LOKAYUKTA RAID  BRIBES
ಲೋಕಾಯುಕ್ತ ಪೊಲೀಸರಿಗೆ ರೆಡ್​ ಹ್ಯಾಂಡ್​​ ಆಗಿ ಸಿಕ್ಕಿ ಬಿದ್ದ ಅಧಿಕಾರಿಗಳು (ETV Bharat)

By ETV Bharat Karnataka Team

Published : Jan 5, 2025, 7:23 AM IST

ಹಾಸನ:ಲಂಚ ಸ್ವೀಕರಿಸುತ್ತಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮತ್ತು ಕಚೇರಿ ಅಧೀಕ್ಷಕನನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಡಿಡಿಪಿಐ ಹೆಚ್​​​.ಕೆ.ಪಾಂಡು ಮತ್ತು ಕಚೇರಿ ಅಧೀಕ್ಷಕ ಎ.ಎಸ್​​.ವೇಣುಗೋಪಾಲ್​​​ ರಾವ್​ ಸಿಕ್ಕಿಬಿದ್ದ ಅಧಿಕಾರಿಗಳು.​ ಇವರು ಖಾಸಗಿ ಶಾಲೆಯ ಶಿಕ್ಷಕಿಯ ವರ್ಗಾವಣೆಗೆ ಲಂಚದ ಬೇಡಿಕೆ ಇಟ್ಟಿದ್ದರು. ಈ ಕುರಿತು ಶಿಕ್ಷಕಿಯ ಪತಿ ಅಭಿಜಿತ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಮೊದಲ ಕಂತಿನಲ್ಲಿ 40 ಸಾವಿರ ರೂ. ಅನ್ನು ಶಿಕ್ಷಕಿ ಡಿಡಿಪಿಐಗೆ ನೀಡುತ್ತಿದ್ದಾಗ ಲೋಕಾಯುಕ್ತ ಇನ್ಸ್‌ಪೆಕ್ಟರ್​ ಬಾಲು ಮತ್ತು ಶಿಲ್ಪಾ ನೇತೃತ್ವದ ತಂಡ ದಾಳಿ ನಡೆಸಿ, ಹಣದ ಸಮೇತ ಡಿಡಿಪಿಐ ಮತ್ತು ಕಚೇರಿ ಅಧೀಕ್ಷಕರನ್ನು ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ:ಹೊಸ ವರ್ಷದಂದು ಲೋಕಾಯುಕ್ತ ದಾಳಿ: ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳು‌ ಬಲೆಗೆ

ABOUT THE AUTHOR

...view details