ಕಾರವಾರ: ಜೋಯಿಡಾ ತಾಲೂಕಿನ ಹುಡಸಾ ಅರಣ್ಯ ಇಲಾಖೆಯ ಚೆಕ್ಪೋಸ್ಟ್ ಸಮೀಪ ನಾಡಬಾಂಬ್ ರೀತಿಯ ಬಾಂಬ್ ಕಾರಿನಡಿ ಸಿಲುಕಿ ಸ್ಪೋಟಗೊಂಡಿದೆ. ಮಂಗಳವಾರ ಬೆಳಿಗ್ಗೆ ಘಟನೆ ನಡೆಯಿತು.
ಪತ್ರಕರ್ತರಾದ ಸಂದೇಶ ದೇಸಾಯಿ ಹಾಗೂ ಹರೀಶ್ ಭಟ್ಟ, ಟಿ.ಕೆ.ದೇಸಾಯಿ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಕಾರಿನ ಟೈಯರ್ಗೆ ನಾಡಬಾಂಬ್ ಸಿಲುಕಿ ಸ್ಪೋಟಗೊಂಡಿದೆ.
ಕಾರ್ ಆಗಿದ್ದುದರಿಂದ ಯಾವುದೇ ಹಾನಿಯಾಗಿಲ್ಲ. ಆದರೆ ಬೈಕ್ ಅಥವಾ ನಡೆದುಕೊಂಡು ಹೋಗುವಾಗ ಸ್ಪೋಟಗೊಂಡಿದ್ದರೆ ಜೀವಕ್ಕೆ ಹಾನಿ ಉಂಟಾಗುವ ಸಂಭವ ಇತ್ತು ಎನ್ನಲಾಗಿದೆ.
ಜೋಯಿಡಾದಲ್ಲಿ ನಾಡಬಾಂಬ್ ಸ್ಫೋಟ: ಪೊಲೀಸರಿಂದ ತನಿಖೆ (ETV Bharat) ಈ ನಾಡಬಾಂಬ್ ಅನ್ನು ಪ್ರಾಣಿಗಳನ್ನು ಸಾಯಿಸಲು ಅದರಲ್ಲೂ ಮುಖ್ಯವಾಗಿ ಹಂದಿಗಾಗಿ ಬಳಸುತ್ತಾರೆ. ನಾಡಬಾಂಬ್ ತೆಗೆದುಕೊಂಡು ಹೋಗುವಾಗ ಬಿದ್ದಿದೆಯೇ ಅಥವಾ ಉದ್ದೇಶಪೂರಕವಾಗಿ ಇಡಲಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ.
ತಾಲೂಕಿನಲ್ಲಿ ನಾಡಬಾಂಬ್ ಬಳಕೆ ಹೆಚ್ಚಾಗುತ್ತಿದ್ದು ಈ ಬಗ್ಗೆ ಅರಣ್ಯ ಮತ್ತು ಪೋಲಿಸ್ ಇಲಾಖೆ ಹೆಚ್ಚಿನ ಕಾಳಜಿ ವಹಿಸಬೇಕು. ನಾಡಬಾಂಬ್ ತಯಾರಿಸುವವರು ಮತ್ತು ಬಳಕೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಂಡು ಅಮಾಯಕ ಪ್ರಾಣಿಗಳ ಮತ್ತು ಜನರ ಜೀವ ರಕ್ಷಣೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಚಾರಣಿಗರೇ ಗಮನಿಸಿ: ಒಂದೇ ವೆಬ್ ಸೈಟ್ನಲ್ಲಿ ರಾಜ್ಯದ ಎಲ್ಲ ಟ್ರೆಕ್ಕಿಂಗ್ ಟಿಕೆಟ್ ಬುಕ್ಕಿಂಗ್ - ಸಚಿವ ಈಶ್ವರ ಖಂಡ್ರೆ - Trekking Ticket Booking