ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಆನ್​ಲೈನ್​​ ಟ್ರೇಡಿಂಗ್​ನಿಂದ ನಷ್ಟ; ವಾಟ್ಸ್‌ಆ್ಯಪ್‌ ಸ್ಟೇಟಸ್‌ ಹಾಕಿ ಯುವಕ ಆತ್ಮಹತ್ಯೆ - Young Man Suicide - YOUNG MAN SUICIDE

ಮೊಬೈಲ್​ನಲ್ಲಿ ಮೂರು ಪುಟದ ಮರಣಪತ್ರವನ್ನು ವಾಟ್ಸ್‌ಆ್ಯಪ್‌ ಸ್ಟೇಟಸ್‌ಗೆ ಅಪ್‌ಲೋಡ್‌ ಮಾಡಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ.

YOUNG MAN SUICIDE
ಯುವಕನ ಶವಕ್ಕಾಗಿ ತುಂಗಾ ನದಿಯಲ್ಲಿ ಅಗ್ನಿ ಶಾಮಕದಳ ಸಿಬ್ಬಂದಿಯಿಂದ ಶೋಧ (ETV Bharat)

By ETV Bharat Karnataka Team

Published : Sep 3, 2024, 8:13 AM IST

ಶಿವಮೊಗ್ಗ:ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಡೆತ್‌ನೋಟ್‌ ಬರೆದಿಟ್ಟು ನಾಪತ್ತೆಯಾಗಿದ್ದ ಯುವಕ ಸೋಮವಾರ ಶವವಾಗಿ ಪತ್ತೆಯಾಗಿದ್ದಾನೆ. ಕಳೆದ ಶನಿವಾರ ತೀರ್ಥಹಳ್ಳಿ ತಾಲೂಕು ಇಂದಾವರ ಗ್ರಾಮದ ಜಯದೀಪ್(24) ಎಂಬಾತ ತನ್ನ ಸ್ಟೇಟಸ್ ಹಾಕಿ ನಾಪತ್ತೆಯಾಗಿದ್ದನು. ಈತನ ಬೈಕ್ ತೀರ್ಥಹಳ್ಳಿಯ ತುಂಗಾ ನದಿಯ ಪಕ್ಕದಲ್ಲಿ ಪತ್ತೆಯಾಗಿತ್ತು. ಪೋಷಕರು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮಗ ನಾಪತ್ತೆಯಾದ ಕುರಿತು ದೂರು ದಾಖಲಿಸಿದ್ದರು‌.

ಇದರಿಂದ ಕಳೆದ ಎರಡು ದಿನಗಳಿಂದ ತೀರ್ಥಹಳ್ಳಿ ಪೊಲೀಸರು ಹಾಗೂ ಅಗ್ನಿ ಶಾಮಕದಳವರು ಜಯದೀಪ್ ಶವಕ್ಕಾಗಿ ತುಂಗಾ ನದಿಯಲ್ಲಿ ಹುಡುಕಾಟ ನಡೆಸಿದ್ದರು. ಸೋಮವಾರ ಸಂಜೆ ತೀರ್ಥಹಳ್ಳಿಯ ಸ್ಮಶಾನಕಟ್ಟೆ ಸಮೀಪ ನದಿಯಲ್ಲಿ ಮೃತದೇಹ ಸಿಕ್ಕಿದೆ.

ಆನ್​ಲೈನ್​​ ಟ್ರೇಡಿಂಗ್​ನಿಂದ ನಷ್ಟ: ಜಯದೀಪ್ ನಾಪತ್ತೆಯಾಗುವ ಮುನ್ನ ತನ್ನ ಮೊಬೈಲ್​ನಲ್ಲಿ ಮೂರು ಪುಟದ ಡೆತ್‌ನೋಟನ್ನು ವಾಟ್ಸ್‌ಆ್ಯಪ್‌ ಸ್ಟೇಟಸ್‌ಗೆ ಅಪ್‌ಲೋಡ್‌ ಮಾಡಿ ನಾಪತ್ತೆಯಾಗಿದ್ದ. ಇದರಲ್ಲಿ ಪ್ರೀತಿಸಲು ಹುಡುಗಿ ಸಿಕ್ಕಿಲ್ಲ ಎಂಬುದರ ಜೊತೆಗೆ ಆನ್​ಲೈನ್​​ ಟ್ರೇಡಿಂಗ್​ನಲ್ಲಿ ಹಣ ಕಳೆದುಕೊಂಡಿದ್ದೇನೆ ಎಂದು ಬರೆದಿದ್ದಾನೆ. ನಾನು ಬದುಕಲು ಬೇರೆ ದಾರಿ ಹುಡುಕಬಹುದಾಗಿತ್ತು‌. ಆದರೆ, ಸಾವಿನ ದಾರಿ ಕರೆಯುತ್ತಿದೆ. ತಂದೆ-ತಾಯಿ ನನ್ನನ್ನು ಕ್ಷಮಿಸಿ. ನಾನು ಸಾಲ ಮಾಡಿದ್ದನ್ನು ನಿಮ್ಮ ಮೇಲೆ ಬಿಟ್ಟು ಹೋಗುತ್ತಿದ್ದೇನೆ ಎಂದು ಬೇಸರ ಮಾಡಿಕೊಳ್ಳಬೇಡಿ. ನನ್ನ ಬೈಕ್ ಮಾರಿ ಅದರಲ್ಲಿ ಎಲ್ಲರಿಗೂ ಸ್ವಲ್ಪ ಸ್ವಲ್ಪ ಹಣ ಕೊಟ್ಟು ಸಾಲ ತೀರಿಸಿ ಎಂದು ಬರೆದಿದ್ದಾನೆ.

ಜಯದೀಪ್ ತುಂಗಾ ನದಿಗೆ ಹಾರಿ ಪ್ರಾಣ ಬಿಟ್ಟಿರಬಹುದೆಂದು ಅಂದಾಜಿಸಲಾಗಿದೆ. ಪೊಲೀಸರು ಶವವನ್ನು ಪೋಷಕರಿಗೆ ಹಸ್ತಾಂತರಿಸಿದ್ದಾರೆ.

ಇದನ್ನೂ ಓದಿ: ತೆಲಂಗಾಣ: ಮಕ್ಕಳ ಕೊಲೆ ಬಳಿಕ ಪೋಷಕರ ಆತ್ಮಹತ್ಯೆ: ಒಂದೇ ದಿನ 8 ಸಾವು! - SUICIDE CASE

ABOUT THE AUTHOR

...view details