ಬೆಂಗಳೂರು :ಈ ಬಾರಿಯ ಬೇಸಿಗೆಗೆ ಬಿಎಂಟಿಸಿ ಕಂಡಕ್ಟರ್, ಡ್ರೈವರ್ಗಳು ಕಂಗಲಾಗಿ ಹೋಗಿದ್ದಾರೆ. ದಾಹ ತೀರಿಸಿಕೊಳ್ಳಲು ಬಿಎಂಟಿಸಿ ಏನೂ ವ್ಯವಸ್ಥೆ ಮಾಡಿಲ್ಲ ಎಂದು ದೂರುತ್ತಿದ್ದಾರೆ.
ಪ್ರತಿದಿನ ನೂರಾರು ಕಿ.ಮೀ ಬಸ್ ಓಡಿಸಬೇಕು. ನಗರದ ಟ್ರಾಫಿಕ್, ಸಿಗ್ನಲ್ಗಳಲ್ಲಿ ನಿಂತು ಜೀವ ಹೈರಾಣಾಗಿದೆ. ಡೇ ಅಂಡ್ ನೈಟ್ ಡ್ಯೂಟಿ ಮಾಡಬೇಕು. ಪ್ರಯಾಣಿಕರನ್ನು ಸೇಫ್ ಆಗಿ ಮನೆಗೆ ತಲುಪಿಸುವ ಜವಾಬ್ದಾರಿ ತಲೆಯ ಮೇಲಿರುತ್ತದೆ. ಸುಡು ಬಿಸಿಲಿಗೆ ಡ್ಯೂಟಿ ಮಾಡಲು ಆಗುತ್ತಿಲ್ಲ. ದಾಹ ತೀರಿಸಿಕೊಳ್ಳಲು ಸಹ ಸರಿಯಾದ ನೀರಿನ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಬನಶಂಕರಿ, ಶಾಂತಿನಗರ, ಶಿವಾಜಿನಗರದಲ್ಲಿ ಕೆಟ್ಟು ನಿಂತಿವೆ ವಾಟರ್ ಫಿಲ್ಟರ್ಗಳು: ಈ ಬಾರಿಯ ಬೇಸಿಗೆಯ ಹೊಡೆತಕ್ಕೆ ಬಿಎಂಟಿಸಿಯ ಕಂಡಕ್ಟರ್, ಡ್ರೈವರ್ಗಳು ಕಂಗಾಲಾಗಿ ಹೋಗಿದ್ದಾರೆ. ಬಿಎಂಟಿಸಿಯ ಸಾಕಷ್ಟು ಟಿಟಿಎಂಸಿಗಳಲ್ಲಿ ಬೋರ್ವೆಲ್ಗಳು ಬತ್ತಿ ಹೋಗಿವೆ. ಕೆಲವೊಂದು ಟಿಟಿಎಂಸಿಗಳಲ್ಲಿ ಬೋರ್ವೆಲ್ಗಳು, ಸರಿ ಇದ್ದರೂ ತೀರಾ ಸಣ್ಣದಾಗಿ ನೀರು ಬರುತ್ತಿದೆ. ಇದರಿಂದ ಬಸ್ ಸ್ಟ್ಯಾಂಡ್ನಲ್ಲಿರುವ ಫಿಲ್ಟರ್ಗಳಿಗೆ ನೀರು ಸಪ್ಲೈ ಆಗುತ್ತಿಲ್ಲ. ಇದರಿಂದ ಕುಡಿಯಲು ನೀರಿಲ್ಲದೆ ಡ್ರೈವರ್ ಮತ್ತು ಕಂಡಕ್ಟರ್ಗಳು ಪರದಾಡುತ್ತಿದ್ದಾರೆ. ಪ್ರಮುಖವಾಗಿ ಶಾಂತಿನಗರ, ಶಿವಾಜಿನಗರ, ಬನಶಂಕರಿ ಹಾಗೂ ಕೆಂಗೇರಿ ಸೇರಿದಂತೆ ಎಲ್ಲ ಟಿಟಿಎಂಸಿ ಬಸ್ ಸ್ಟ್ಯಾಂಡ್ಗಳ ವಾಟರ್ ಫಿಲ್ಟರ್ಗಳಲ್ಲಿ ನೀರು ಬರುತ್ತಿಲ್ಲ ಎಂದು ದೂರಿದ್ದಾರೆ.
''ಪ್ರತಿದಿನ ಬಿಎಂಟಿಸಿ ಬಸ್ನಲ್ಲಿ ಸುಮಾರು 30 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ. ಎಸಿ, ಎಲೆಕ್ಟ್ರಿಕ್ ಬಸ್ ಸೇರಿದಂತೆ 6132 ಬಸ್ಗಳಿವೆ. ಡ್ರೈವರ್ ಕಂಡಕ್ಟರ್ಗಳು ಸೇರಿ 24 ಸಾವಿರ ನೌಕರರು ಡ್ಯೂಟಿ ಮಾಡುತ್ತಾರೆ. ಆದರೆ ರಾಜಧಾನಿಯ ಸಾಕಷ್ಟು ಡಿಪೋ, ಟಿಟಿಎಂಸಿಗಳಲ್ಲಿ ಕುಡಿಯಲು ನೀರಿನ ವ್ಯವಸ್ಥೆ ಸರಿಯಾಗಿ ಇಲ್ಲ. ಇದರಿಂದ ಪ್ರಯಾಣಿಕರು ಸಹ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ನೌಕರರು ಹಣ ಕೊಟ್ಟು ನೀರು ಖರೀದಿ ಮಾಡುವಂತಾಗಿದೆ. ನಾವು ಬೇಸಿಗೆ ಆರಂಭಕ್ಕೂ ಮುನ್ನವೇ ಬಿಎಂಟಿಸಿಯ ಎಂಡಿಗೆ ಈ ಬಗ್ಗೆ ಮನವಿ ಮಾಡಿದ್ದೆವು. ಡ್ರೈವರ್ ಕಂಡಕ್ಟರ್ಗಳಿಗೆ ಕುಡಿಯಲು ನೀರಿಲ್ಲ, ವ್ಯವಸ್ಥೆ ಮಾಡಿ ಎಂದು ಕೇಳಿ ಕೊಂಡಿದ್ದೆವು. ಆದರೆ ಈ ಬಗ್ಗೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ'' ಎಂದು ಸಾರಿಗೆ ನೌಕರರ ಮುಖಂಡ ಜಗದೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :ಬೆಂಗಳೂರು: ದೊಡ್ಡ ಪ್ರಮಾಣದಲ್ಲಿ ಬಳಸುವ ಗ್ರಾಹಕರಿಗೆ ನೀರು ಕಡಿತ - BwssB