ಶಿವಮೊಗ್ಗ:ಶಿಕಾರಿಪುರದ ರಾಷ್ಟ್ರಭಕ್ತ ಬಳಗದ ಕಚೇರಿ ಮುಂಭಾಗ ವಾಮಾಚಾರ ನಡೆಸಲಾಗಿದೆ. ರಾಷ್ಟ್ರಭಕ್ತ ಬಳಗದ ಕಚೇರಿ ಮುಂಭಾಗ ಎರಡು ಗೊಂಬೆ, ಹರಿಶಿಣ ಕುಂಕಮ, ನಿಂಬೆಹಣ್ಣು ಇಟ್ಟು ವಾಮಾಚಾರ ನಡೆಸಲಾಗಿದೆ. ಇಂದು ಬೆಳಗ್ಗೆ ರಾಷ್ಟ್ರ ಭಕ್ತರ ಬಳಗದ ಕಾರ್ಯಕರ್ತರು ಕಚೇರಿಗೆ ಹೋದಾಗ ವಾಮಾಚಾರ ಬಯಲಿಗೆ ಬಂದಿದೆ. ನಿನ್ನೆ ರಾತ್ರಿ ವಾಮಾಚಾರ ಮಾಡಿರುವ ಶಂಕೆ ವ್ಯಕ್ತವಾಗಿದೆ.
ರಾಷ್ಟ್ರಭಕ್ತ ಬಳಗದ ಕಚೇರಿ ಮುಂದೆ ವಾಮಾಚಾರ: ಬಿಜೆಪಿ ಸೋಲುತ್ತದೆ ಎಂಬ ಭಯದಿಂದ ಕೃತ್ಯ: ಕೆ ಎಸ್ ಈಶ್ವರಪ್ಪ - Black magic - BLACK MAGIC
ಶಿಕಾರಿಪುರದ ರಾಷ್ಟ್ರಭಕ್ತ ಬಳಗದ ಕಚೇರಿ ಮುಂಭಾಗ ವಾಮಾಚಾರ ನಡೆಸಲಾಗಿದ್ದು, ಬಿಜೆಪಿ ಸೋಲುತ್ತದೆ ಎಂಬ ಭಯದಿಂದ ರಾಷ್ಟ್ರಭಕ್ತ ಬಳಗ ಕಚೇರಿಯ ಮುಂದೆ ವಾಮಾಚಾರ ನಡೆಸಿದ್ದಾರೆಂದು ರಾಷ್ಟ್ರಭಕ್ತ ಬಳಗದ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.
Published : May 2, 2024, 11:24 AM IST
|Updated : May 2, 2024, 12:50 PM IST
ವಾಮಾಚಾರ ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರಭಕ್ತ ಬಳಗದ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ, "ಶಿವಮೊಗ್ಗ ಲೋಕಸಭ ಕ್ಷೇತ್ರದಲ್ಲಿ ಬಿಜೆಪಿ ಸೋಲುತ್ತದೆ ಎಂಬ ಭಯದಿಂದ ರಾಷ್ಟ್ರಭಕ್ತ ಬಳಗ ಕಚೇರಿಯ ಮುಂದೆ ವಾಮಾಚಾರ ನಡೆಸಿದ್ದಾರೆ. ಕಚೇರಿ ಮುಂದೆ ಅರಿಶಿಣ, ಕುಂಕುಮ ಹಾಕಿ ವಾಮಾಚಾರ ನಡೆಸಿದ್ದಾರೆ. ಆದರೆ, ಮತದಾರರು, ದೇವರು ನನ್ನ ಜೊತೆ ಇದ್ದಾರೆ. ಇದಕ್ಕೆ ನಾನು ಹೆದರುವುದಿಲ್ಲ. ದೊಡ್ಡ ಅಂತರದಲ್ಲಿ ನಾನು ಗೆಲ್ಲುತ್ತೇವೆ. ಶಿಕಾರಿಪುರದಲ್ಲಿ ಭಯದ ವಾತಾವರಣವಿದೆ. ಆದರೂ ಮತದಾರರು ನನಗೆ ಮತ ಹಾಕುತ್ತಾರೆ. ಶಿಕಾರಿಪುರದಲ್ಲಿ ನಾನು ಅತಿ ಹೆಚ್ಚಿನ ಅಂತರದಲ್ಲಿ ನಾನು ಗೆಲ್ಲುತ್ತೇನೆ" ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಈಶ್ವರಪ್ಪ ವಿರುದ್ಧ ರಾಘವೇಂದ್ರಗೆ 3 ಲಕ್ಷ ಮತಗಳ ಅಂತರದ ಗೆಲುವು ಖಂಡಿತ: ವಿಜಯೇಂದ್ರ - B Y Vijayendra