ಬಿ.ವೈ. ವಿಜಯೇಂದ್ರ (ETV Bharat) ಬೆಂಗಳೂರು: "ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನಿಶ್ಚಿತ, ನೂರಕ್ಕೆ ನೂರು ಅವರು ರಾಜೀನಾಮೆ ಕೊಟ್ಟೆ ಕೊಡುತ್ತಾರೆ. ಅವರು ಮಾಡಿದ ಕರ್ಮವನ್ನು ಅನುಭವಿಸಲೇಬೇಕು. ಅವರ ರಾಜೀನಾಮೆ ಬಗ್ಗೆ ಸಂದೇಹ ಬೇಡ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ರಾಜ್ಯ ಬಿಜೆಪಿ ಮಹಿಳಾ ಘಟಕದ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು "ಮುಡಾ ಹಗರಣದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್ ಜೊತಗೂಡಿ ನಾವು ಬೆಂಗಳೂರಿನಿಂದ ಮೈಸೂರುವರೆಗೂ ಪಾದಯಾತ್ರೆ ನಡೆಸಿದೆವು. ಪಾದಯಾತ್ರೆ ಯಶಸ್ವಿ ಆಗಿದೆ. ಆಟೋ ಡ್ರೈವರ್ಸ್ ಎಲ್ಲಾ ಬಂದು ನಮ್ಮ ವಿಜಿಯಣ್ಣ ಎಂದು ಮಾತಾನಾಡಿಸಿದರು. ಇಷ್ಟು ಯಶಸ್ವಿ ಆಗತ್ತದೆ ಎಂದು ನಾನು ಭಾವಿಸಿರಲಿಲ್ಲ. ಪಾದಯಾತ್ರೆ ಕೊನೆ ದಿನ 80 ಸಾವಿರ ಜನ ಸೇರಿದ್ದರು. ಕೇಂದ್ರ ನಾಯಕರು ಅಮಿತ್ ಶಾ, ನಡ್ಡಾ, ಸಂತೋಷ್ ಎಲ್ಲರೂ ಸಂತಸ ವ್ಯಕ್ತಪಡಿಸಿದರು. ಅತ್ಯಂತ ಯಶಸ್ವಿ ಪಾದಯಾತ್ರೆ ಎಂದು ಹೇಳಿದರು" ಎಂದು ಪಾದಯಾತ್ರೆಯ ಸಕ್ಸಸ್ಗೆ ಹರ್ಷ ವ್ಯಕ್ತಪಡಿಸಿದರು.
ಸಿಎಂ ರಾಜೀನಾಮೆ ಸಂದೇಹ ಬೇಡ-ವಿಜಯೇಂದ್ರ: "ಪಾದಯಾತ್ರೆಯಲ್ಲಿ ಮಹಿಳಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಪಾದಯಾತ್ರೆ ಎಂದರೆ ಯಡಿಯೂರಪ್ಪ ನೆನಪಾಗತ್ತದೆ. ಈ ಸರ್ಕಾರದ ವಿರುದ್ಧ ಪಾದಯಾತ್ರೆಗೆ ಇಳಿದಾಗ ಆತಂಕ ಇತ್ತು. ನಮ್ಮಲ್ಲೂ ಗೊಂದಲ ಇತ್ತು, ಸಮಯಾವಕಾಶ ಕೂಡ ಕಡಿಮೆ ಇತ್ತು. ಆದರೂ ಕೇಂದ್ರ ನಾಯಕರಿಗೆ ಭರವಸೆ ನೀಡಿದ್ದೆ. ಯಶಸ್ವಿ ಪಾದಯಾತ್ರೆ ಆಗಲಿದೆ ಎಂದು ಹೇಳಿದ್ದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ದಿನನಿತ್ಯ ಬಂದರು. ಸರ್ಕಾರ ಆತಂಕಕ್ಕೆ ಒಳಗಾಗಿ ಜನಾಂದೋಲನ ಮಾಡಿತ್ತು. ಆದರೂ ನಮ್ಮ ಪಾದಯಾತ್ರೆ ಯಶಸ್ವಿಯಾಗಿದೆ. ನೂರಕ್ಕೆ ನೂರು ಸಿದ್ದರಾಮಯ್ಯ ರಾಜೀನಾಮೆ ಕೊಟ್ಟೆ ಕೊಡುತ್ತಾರೆ. ಅವರ ರಾಜೀನಾಮೆ ಬಗ್ಗೆ ಸಂದೇಹ ಬೇಡ" ಎಂದರು.
"ರಾಜ್ಯದಲ್ಲಿ ದುಷ್ಟ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡಿಯುತ್ತಿದೆ. ಇದೆ ಬಿಜೆಪಿ ಸರ್ಕಾರ ಇದ್ದಾಗಲು ಮಹಿಳೆಯರ ಮೇಲೆ ದೌರ್ಜನ್ಯ ಆಗಿದೆ. ಆದರೆ, ದೌರ್ಜನ್ಯ ನಡೆದಾಗ ಸರ್ಕಾರ ನಡವಳಿಕೆ ಹೇಗಿದೆ ಅನ್ನೋದು ಮುಖ್ಯ. ಬೇಜವಾಬ್ದಾರಿ ನಡೆ ಕಾಂಗ್ರೆಸ್ ಸರ್ಕಾರದ್ದು. ಅಭಿವೃದ್ಧಿ ಕುಂಠಿತ ಅಲ್ಲ, ಅಭಿವೃದ್ದಿ ಆರಂಭವೇ ಆಗಿಲ್ಲ. ಲೋಕಸಭೆ ಚುನಾವಣೆಗೂ ಮುನ್ನ ಗೃಹಲಕ್ಷ್ಮಿ ಹಣ ಬಿಡುಗಡೆ
ಈಗ ಗ್ಯಾರಂಟಿ ಹಣೆಬರಹ ಏನಾಗಿದೆ. ಮತ್ತೆ ಸ್ಥಳೀಯ ಸಂಸ್ಥೆ ಚುನಾವಣೆ ಬಂದಾಗ ಹಣ ಹಾಕುತ್ತಾರೆ. ಮಹಿಳೆಯರ ಮೂಗಿಗೆ ತುಪ್ಪ ಹಚ್ಚಿದ್ದಾರೆ ಅಷ್ಟೆ. ಇಂತಹ ಸರ್ಕಾರ ಇದ್ದರೆಷ್ಟು, ಬಿದ್ದರೆಷ್ಟು ಎಂದು ಜನ ಹೇಳುತ್ತಿದ್ದಾರೆ".
"ಮಹಿಳಾ ಮೋರ್ಚಾ ಬಲಪಡಿಸಲು ಸಭೆ ಮಾಡುತ್ತೇನೆ. ಮೂರೂವರೆ ವರ್ಷ ಹೋರಾಟದ ಜೀವನ ಸಿಎಂ ರಾಜೀನಾಮೆ ಕೊಟ್ಟೇ ಕೊಡುತ್ತಾರೆ. ಅನುಮಾನ ಬೇಡ, ಮುಂದೆ ಬಿಜೆಪಿಯೆ ಅಧಿಕಾರಕ್ಕೆ ಬರತ್ತದೆ" ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಮಹಿಳಾ ಘಟಕದ ರಾಜ್ಯಾಧ್ಯಕ್ಷೆ .ಸಿ. ಮಂಜುಳಾ ಹೇಳಿಕೆ: "ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿರುವುದು ಖಂಡನೀಯ. ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಪಶ್ಚಿಮ ಬಂಗಾಳದಲ್ಲೂ ನಿರ್ಭಯಾ ರೀತಿ ಘಟನೆ ನಡೆದಿದೆ. ಅಲ್ಲಿ ಸಿಎಂ ಮಹಿಳೆಯಾಗಿ ಘಟನೆಯನ್ನು ಮುಚ್ಚಿಡುವ ಕೆಲಸ ಮಾಡಿದರು. 'ಮಮತಾ ದೀದಿಕಾ ಮನ್ ಮೇ ಮಮಕಾರ್ ನಹಿಹೇ'. ಸಿಬಿಐ ಬರದಿದ್ದರೆ ಸತ್ಯಾಸತ್ಯತೆ ಗೊತ್ತಾಗುತ್ತಿರಲಿಲ್ಲ. ಅದೇ ರೀತಿಯಲ್ಲೇ ಕರ್ನಾಟಕದಲ್ಲೂ ಆಗುತ್ತಿದೆ. ಕುಡಿಯುವ ನೀರಿನ್ನೂ ಕೊಡದೇ ಕರ್ನಾಟಕ ಸರ್ಕಾರ ಮಹಿಳೆಯರಿಗೆ ಕಣ್ಣೀರು ಹಾಕಿಸಿದೆ. ಡಿಸಿಎಂ, ಗೃಹ ಸಹಚಿವರು ಎಲ್ಲ ಘಟನೆಯನ್ನು ತೇಲಿಸಿ ಬಿಡುತ್ತಾರೆ ಎಂದು ಮಹಿಳಾ ಘಟಕದ ರಾಜ್ಯಾಧ್ಯಕ್ಷೆ .ಸಿ. ಮಂಜುಳಾ ಟೀಕಿಸಿದರು.
ಇದನ್ನೂ ಓದಿ:16ನೇ ಹಣಕಾಸು ಆಯೋಗದ ಅನುದಾನ ಹಂಚಿಕೆ ಸಮತೋಲಿತವಾಗಿರಲಿ: ರಾಜ್ಯಕ್ಕೆ ಶೇ 60 ತೆರಿಗೆ ಪಾಲು ನೀಡಿ: ಸಿಎಂ - 16th Finance Commission