ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ: ಬಿ ವೈ ವಿಜಯೇಂದ್ರ - ಯಾದಗಿರಿ

ಕಾಂಗ್ರೆಸ್​ ಸರ್ಕಾರ ಪೊಲೀಸರ ಮೂಲಕ ಗೂಂಡಾಗಿರಿ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆರೋಪಿಸಿದ್ದಾರೆ.

bjp-state-president-b-y-vijayendra-slams-state-congress-government
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಇಳಿದಿದೆ: ಬಿ ವೈ ವಿಜಯೇಂದ್ರ

By ETV Bharat Karnataka Team

Published : Jan 28, 2024, 10:58 PM IST

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ

ಯಾದಗಿರಿ: "ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದ ಅಮಲಿನಲ್ಲಿ ಪದೇ ಪದೆ ಅಹಿತಕರ ಘಟನೆಗಳನ್ನು ಮಾಡಿಸುವ ಮೂಲಕ ಕಾನೂನಿಗೆ ಧಕ್ಕೆ ತರುತ್ತಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆರೋಪಿಸಿದರು. ಶಹಾಪುರ ನಗರದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಇಳಿದಿದೆ" ಎಂದು ಕಿಡಿಕಾರಿದರು.

"ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದ ಪಂಚಾಯಿತಿಯಲ್ಲಿ ಎಲ್ಲಾ ಸದಸ್ಯರು ಒಟ್ಟಿಗೆ ಚರ್ಚಿಸಿ, ತೀರ್ಮಾನ ಮಾಡಿ 108 ಅಡಿ ಧ್ವಜಸ್ತಂಭ ನಿರ್ಮಿಸಿ, ಹನುಮಧ್ವಜ ಹಾರಿಸಬೇಕೆಂದುಕೊಂಡಿದ್ದರು. ಏಕಾಏಕಿ ಪೊಲೀಸರು ಗ್ರಾಮಕ್ಕೆ ನುಗ್ಗಿ ಲಾಠಿ ಚಾರ್ಚ್ ಮಾಡಿ, ಏರಿಸಿದ ಧ್ವಜವನ್ನು ಇಳಿಸಿರುವುದು ಖಂಡನೀಯ. ರಾಜ್ಯದಲ್ಲಿರುವ ಕಾಂಗ್ರೆಸ್​ ಸರ್ಕಾರ ಪೊಲೀಸರ ಮೂಲಕ ಗೂಂಡಾಗಿರಿ ಮಾಡುತ್ತಿದೆ. ಪೊಲೀಸರು ಗ್ರಾಮಸ್ಥರ ಮೇಲೆ ಲಾಠಿ ಚಾರ್ಚ್ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತು ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ ಅವರು ಭೇಟಿ ನೀಡಿದ್ದ ವೇಳೆ ಮತ್ತೊಮ್ಮೆ ಗ್ರಾಮಸ್ಥರ ಮೇಲೆ ಲಾಠಿ ಚಾರ್ಜ್​ ಮಾಡಿ ಅವರನ್ನು ಬಂಧಿಸಿರುವುದು ಸರಿಯಲ್ಲ" ಎಂದು ಹೇಳಿದರು.

ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ: "ಈ ಘಟನೆ ವಿರುದ್ಧ ಬಿಜೆಪಿ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಮುಂದಿನ ಹೋರಾಟಗಳನ್ನು ಯಾವ ರೀತಿ ಕೈಗೊಳ್ಳಬೇಕೆಂಬುದು ಚರ್ಚೆ ಮಾಡಲಾಗುತ್ತದೆ" ಎಂದರು. ಅಲ್ಲಿರುವ ತ್ರಿವರ್ಣ ಧ್ವಜ ಇಳಿಸಬೇಕಾ ಅಥವಾ ಬೇಡ ಎಂಬುದರ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, "ನಾವು ತ್ರಿವರ್ಣ ಧ್ವಜ ಇಳಿಸಬೇಕೆಂತ ಹೇಳುತ್ತಿಲ್ಲ. ಆದರೆ ಇವತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಇಳಿದಿದೆ" ಎಂದು ವಾಗ್ದಾಳಿ ನಡೆಸಿದರು.

"ಗ್ರಾಮ ಪಂಚಾಯಿತಿಯಿಂದ ನಿರ್ಣಯ ಮಾಡಿದ್ದನ್ನು, ಏಕಾಏಕಿ ಲಾಠಿ ಚಾರ್ಜ್ ಮಾಡಿ ಧ್ವಜವನ್ನು ಇಳಿಸುವ ಅವಶ್ಯಕತೆ ಏನಿತ್ತು?. ಲೋಕಸಭೆ ಚುನಾವಣೆಯಲ್ಲಿ ಬೇರೇನೂ ಬೇಳೆ ಬೇಯುವುದಿಲ್ಲ ಎಂದು ಆಡಳಿತ ಸರ್ಕಾರಕ್ಕೆ ಮನವರಿಕೆ ಆಗಿದೆ. ಹಾಗಾಗಿ ಹುಚ್ಚುಚ್ಚಾಗಿ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿದೆ. ಇದಕ್ಕೆ ತಕ್ಕ ಉತ್ತರವನ್ನು ನೀಡುತ್ತೇವೆ. ಶ್ರೀರಾಮಮಂದಿರ ಸ್ಥಾಪನೆಯಿಂದ ಇಡೀ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎನ್ನುವ ಭಯದಲ್ಲಿ ಅವರಿದ್ದಾರೆ. ರಾಜ್ಯ ಸರ್ಕಾರ ಹತಾಶವಾಗಿ ಮನಬಂದಂತೆ ನಡೆದುಕೊಳ್ಳುತ್ತಿದೆ" ಎಂದು ವಿಜಯೇಂದ್ರ ಆರೋಪಿಸಿದರು.

ಇದನ್ನೂ ಓದಿ:ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು: ಪರಿಸ್ಥಿತಿ ಉದ್ವಿಗ್ನ; ಬಿಜೆಪಿ ಜೆಡಿಎಸ್​ ನಾಯಕರು ವಶಕ್ಕೆ

ABOUT THE AUTHOR

...view details