ಕರ್ನಾಟಕ

karnataka

ETV Bharat / state

ಚಾಮರಾಜನಗರ: ಬೈಕ್ ನಿಲ್ಲಿಸಿದ್ದ ಸವಾರ ಕಾರು ಡಿಕ್ಕಿಯಾಗಿ ಸಾವು, ಮೂತ್ರ ವಿಸರ್ಜನೆಗೆ ತೆರಳಿದ್ದ ಸ್ನೇಹಿತ ಪಾರು - Bike Car Accident - BIKE CAR ACCIDENT

ಬೈಕ್ ನಿಲ್ಲಿಸಿ ಕುಳಿತುಕೊಂಡಿದ್ದ ಸವಾರ ಕಾರು ಡಿಕ್ಕಿಯಾಗಿ ಸಾನ್ನಪ್ಪಿದರೆ, ಮೂತ್ರ ವಿಸರ್ಜನೆಗೆ ತೆರಳಿದ್ದ ಸ್ನೇಹಿತ ಅಪಘಾತದಿಂದ ಪಾರಾಗಿದ್ದಾನೆ.

accident
ಅಪಘಾತಕ್ಕೀಡಾದ ವಾಹನಗಳು (ETV Bharat)

By ETV Bharat Karnataka Team

Published : Aug 14, 2024, 9:08 AM IST

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ‌ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಓರ್ವ ಮೃತಪಟ್ಟಿದ್ದಾನೆ. ಗುಂಡ್ಲುಪೇಟೆಯ ಹಂಗಳ ರಸ್ತೆಯಲ್ಲಿ ಘಟನೆ ನಡೆದಿದೆ.

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿ‌ನ ಗಣೇಶ್ (23) ಎಂಬಾತ ಮೃತಪಟ್ಟ ಬೈಕ್ ಸವಾರ. ಈತನ ಸ್ನೇಹಿತ ಅಪಘಾತದಿಂದ ಪಾರಾಗಿದ್ದಾನೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುತ್ತಿದ್ದಾಗ ಹಿಂಬದಿ ಸವಾರ ಮೂತ್ರ ವಿಸರ್ಜನೆಗೆಂದು ರಸ್ತೆ ಪಕ್ಕಕ್ಕೆ ತೆರಳಿದ್ದ. ಇದೇ ವೇಳೆ ಎದುರಿನಿಂದ ಬಂದ ಕೇರಳ ಮೂಲದ ಕಾರು ನಿಂತಿದ್ದ ಬೈಕ್​ಗೆ ಡಿಕ್ಕಿ ಹೊಡೆದಿದೆ‌.

ಅಪಘಾತಕ್ಕೀಡಾದ ಬೈಕ್​ (ETV Bharat)

ಇದನ್ನೂ ಓದಿ:ಉಪ್ಪಿನಂಗಡಿ ಬಳಿ ಕಂಟೈನ‌ರ್ ಲಾರಿ ಮಗುಚಿ ಬಿದ್ದು ಅಪ್ಪಚ್ಚಿಯಾದ ಕಾರು: ಐವರ ಜೀವ ಉಳಿಸಿದ 'ವಾಂತಿ'! - LORRY FALLS ON CAR

ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಬೈಕ್​ನಲ್ಲಿ ಕುಳಿತಿದ್ದ ಸವಾರ ಗಣೇಶ್​ ಸ್ಥಳದಲ್ಲೇ ಮೃತಪಟ್ಟಿದ್ದಾನೆ‌. ಮೂತ್ರ ವಿಸರ್ಜನೆಗೆ ತೆರಳಿದ್ದ ಈತನ ಸ್ನೇಹಿತ ಅವಘಡದಿಂದ ಪಾರಾಗಿದ್ದಾನೆ‌‌ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತವೆಸಗಿದ ಕಾರು​ (ETV Bharat)

ಅಪಘಾತ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಗುಂಡ್ಲುಪೇಟೆ ಠಾಣೆ ಪೊಲೀಸರು ಕಾರು, ಬೈಕ್ ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ. ಗುಂಡ್ಲುಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಅಪಘಾತ ಪ್ರಕರಣಗಳ ಸಾವಿನ ಸಂಖ್ಯೆಯಲ್ಲಿ ಶೇ.16ರಷ್ಟು ಇಳಿಕೆ: ನಿರ್ಲಕ್ಷ್ಯ, ವೇಗದ ಚಾಲನೆಗೆ ಸಂಚಾರ ಪೊಲೀಸರ ಬ್ರೇಕ್ - Accident Death Cases Decreased

ABOUT THE AUTHOR

...view details