ಕರ್ನಾಟಕ

karnataka

ETV Bharat / state

ಪಾನಮತ್ತ ಕಾರು ಚಾಲಕನ ಯಡವಟ್ಟಿಗೆ ಬೈಕ್ ಸವಾರ ಸಾವು ಪ್ರಕರಣ: ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ACCIDENT CCTV VIDEO - ACCIDENT CCTV VIDEO

ಮೇ 19ರಂದು ಸುಬ್ರಮಣ್ಯ ನಗರ ಮುಖ್ಯ ರಸ್ತೆಯಲ್ಲಿ ಸಂಭವಿಸಿದ್ದ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ (ETV Bharat)

By ETV Bharat Karnataka Team

Published : May 21, 2024, 2:32 PM IST

ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ (ETV Bharat)

ಬೆಂಗಳೂರು: ಮಲ್ಲೇಶ್ವರಂ ಸಂಚಾರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕಾರು ಡಿಕ್ಕಿಯಾಗಿ ಬೈಕ್​ ಸವಾರ ಸಾವನ್ನಪ್ಪಿದ್ದ ಘಟನೆಯ ಭೀಕರತೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಾನಮತ್ತ ಕಾರು ಚಾಲಕನ ನಿರ್ಲಕ್ಷ್ಯತನದಿಂದ ಸಂಭವಿಸಿದ್ದ ಅಪಘಾತದ ದೃಶ್ಯ ಘಟನಾ ಸ್ಥಳದಲ್ಲಿರುವ ಅಂಗಡಿಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ಮೇ 19ರಂದು ಸುಬ್ರಮಣ್ಯ ನಗರ ಮುಖ್ಯ ರಸ್ತೆಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಬೈಕ್ ಸವಾರ ವಿನಯ್ (32) ಹಾಗೂ ಆತನ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದರು. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ವಿನಯ್ ಸಾವನ್ನಪ್ಪಿದ್ದರು.

ಪಾನಮತ್ತನಾಗಿ ಕಾರು ಚಲಾಯಿಸಿಕೊಂಡು ಬಂದಿದ್ದ ಹರಿನಾಥ್, ಮೊದಲು ರಸ್ತೆ ಬದಿ ನಿಂತಿದ್ದ ಆಟೋಗೆ ಡಿಕ್ಕಿಯಾಗಿಸಿದ್ದ. ನಂತರ ಕಾರು ವಿನಯ್ ಹಾಗೂ ಆತನ ಸ್ನೇಹಿತ ತೆರಳುತ್ತಿದ್ದ ಬೈಕ್​ಗೆ ಡಿಕ್ಕಿಯಾಗಿ, ಆ ರಭಸಕ್ಕೆ ನೆಲಕ್ಕೆ ಬಿದ್ದ ವಿನಯ್‌ನನ್ನು ಸ್ವಲ್ಪದೂರ ಎಳೆದೊಯ್ದಿತ್ತು. ಅಪಘಾತವೆಸಗಿದ ಬಳಿಕ, ಸ್ಥಳೀಯರು ಬಂದು ಕಾರಿನಿಂದ ಇಳಿಯಲು ಸೂಚಿಸಿದರೂ ಸಹ ಚಾಲಕ ಹರಿನಾಥ್ ಕಾರಿನಿಂದ ಇಳಿದಿರಲಿಲ್ಲ. ಕೊನೆಗೆ ಪೊಲೀಸರೇ ಮನವೊಲಿಸಿ ಆತನನ್ನು ಕಾರಿನಿಂದ ಕೆಳಗಿಳಿಸಿ ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ:ಶಿರಾಡಿ ಘಾಟ್​ನಲ್ಲಿ ಕಾರು-ಕಂಟೇನರ್​ ಅಪಘಾತ: ತಾಯಿ, ಮಗ ಸ್ಥಳದಲ್ಲೇ ಸಾವು - Shirady Ghat accident

ABOUT THE AUTHOR

...view details