ಕರ್ನಾಟಕ

karnataka

ETV Bharat / state

ಲಾರಿಗೆ ಬೈಕ್ ಡಿಕ್ಕಿ: ಇಬ್ಬರು ಸ್ಥಳದಲ್ಲಿಯೇ ಸಾವು, ಓರ್ವನಿಗೆ ಗಂಭೀರ ಗಾಯ - BIKE COLLIDES WITH LORRY

ರಾಂಗ್​ ಸೈಡ್​ನಲ್ಲಿ ಬಂದ ಬೈಕ್​ ಲಾರಿಗೆ ಡಿಕ್ಕಿ ಹೊಡೆದಿದ್ದು, ಬೈಕ್​ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಓರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

BIKE COLLIDES WITH LORRY
ಲಾರಿಗೆ ಬೈಕ್ ಡಿಕ್ಕಿ (ETV Bharat)

By ETV Bharat Karnataka Team

Published : Oct 25, 2024, 12:45 PM IST

ಶಿವಮೊಗ್ಗ: ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್​ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ತಡರಾತ್ರಿ ಶಿವಮೊಗ್ಗ ಹೊರವಲಯ ನಿದಿಗೆ ಬಳಿ ನಡೆದಿದೆ.

ಬೈಕ್ ರಾಂಗ್ ಸೈಡ್ ಹೋಗಿ ಲಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್​ನಲ್ಲಿದ್ದ ವಿದ್ಯಾನಗರದ ನಿವಾಸಿಗಳಾದ ರಾಹುಲ್(17) ಹಾಗೂ ಚೈತನ್ಯ(23) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ತೇಜಸ್ವಿ(24) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತವಾದ ಬೈಕ್ ಇದಕ್ಕೂ ಮೊದಲು ರಸ್ತೆಯಲ್ಲಿ ಇನ್ನೊಂದು ಬೈಕ್​ಗೆ ಡಿಕ್ಕಿ ಹೊಡೆದಿದೆ. ನಂತರ ಲಾರಿಗೆ ಡಿಕ್ಕಿ ಹೊಡೆದಿದೆ. ಬೈಕ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಜ್ಜುಗುಜ್ಜಾಗಿದೆ. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಧಾರವಾಡ: ಲಾರಿ-ಆಟೋ ಮುಖಾಮುಖಿ ಡಿಕ್ಕಿ, ಸ್ಥಳದಲ್ಲೇ ಇಬ್ಬರು ಸಾವು

ABOUT THE AUTHOR

...view details