ಬೆಂಗಳೂರು:ಜುಲೈ 1ರಿಂದ ದೇಶದಲ್ಲಿ ಅನುಷ್ಠಾನಗೊಂಡಿರುವ ಬಿಎನ್ಎಸ್, ಬಿಎನ್ಎಸ್ಎಸ್ ಹಾಗೂ ಸೇರಿದಂತೆ ಮೂರು ಹೊಸ ಕಾನೂನುಗಳ ಬಗ್ಗೆ ಅರಿಯಲು ಹಾಗೂ ಸಮಗ್ರ ಮಾಹಿತಿ ನೀಡಲು ರಾಜ್ಯ ಪೊಲೀಸ್ ಇಲಾಖೆಯಿಂದ 'ಸಂಚಯ' ಎಂಬ ಹೆಸರಿನ ಮೊಬೈಲ್ ಆ್ಯಪ್ ಸಿದ್ಧಪಡಿಲಾಗಿದೆ. ಈ ಆ್ಯಪ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸ್ವಾಗತಿಸಿದ ಡಾ. ಅಲೋಕ್ ಮೋಹನ್ (ETV Bharat) ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ 2024ರ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಹೊಸದಾಗಿ ಅಭಿವೃದ್ಧಿಪಡಿಸಲಾಗಿರುವ ಈ ಆ್ಯಪ್, ಮೂರು ಹೊಸ ಕಾನೂನುಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಲಿದೆ. ನ್ಯಾಯಾಂಗದ ಅಭಿಯೋಜಕರು, ವಕೀಲರು, ಪೊಲೀಸರು ಹಾಗೂ ವಿದ್ಯಾರ್ಥಿಗಳು ಒಳಗೊಂಡಂತೆ ಸಾರ್ವಜನಿಕರಿಗೆ ಇದರಿಂದ ಅನುಕೂಲವಾಗಲಿದೆ. ಕ್ರಿಮಿನಲ್ ಕಾನೂನುಗಳ ಮಾರ್ಪಾಡಿನ ಬಗ್ಗೆ ಮಾಹಿತಿ ನೀಡುವ ಮೂಲಕ ಅರಿವನ್ನು ಹೆಚ್ಚಿಸಲಿದೆ.
ಕಾನೂನು ಸಂಬಂಧಿತ ಪಾಲುದಾರರಾದ ನ್ಯಾಯಾಂಗ ಅಭಿಯೋಜಕರು, ವಕೀಲರು, ಕಾನೂನು ವಿದ್ಯಾರ್ಥಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಈ ಆ್ಯಪ್ ನೆರವಾಗಲಿದೆ. ಇತ್ತೀಚಿನ ಕ್ರಿಮಿನಲ್ ಕಾನೂನುಗಳ ಮಾರ್ಪಾಡಿನ ಬಗ್ಗೆ ಸಿದ್ಧ ಮಾರ್ಗದರ್ಶಿ ಇದಾಗಿದ್ದು, ಆಫ್ಲೈನ್ ಮತ್ತು ಆನ್ಲೈನ್ ಎರಡೂ ವಿಧದಲ್ಲಿ ಬಳಕೆ ಮಾಡಬಹುದಾಗಿದೆ. ಕಾನೂನುಗಳ ಮಾರ್ಪಾಡಿನ ಬಗ್ಗೆ ಹಳೆಯ ಹಾಗೂ ಹೊಸ ಕಾನೂನುಗಳ ತುಲನೆ ಮಾಡಬಹುದಾಗಿದೆ. ಕನ್ನಡ ಕೈಪಿಡಿಯನ್ನು ಆ್ಯಪ್ನಲ್ಲಿ ಅಳವಡಿಸಲಾಗಿದೆ.
ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (ETV Bharat) ಗೃಹ ಸಚಿವ ಜಿ. ಪರಮೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಡಿಜಿ- ಐಜಿ ಡಾ. ಅಲೋಕ್ ಮೋಹನ್, ಸರ್ಕಾರದ ಕಾರ್ಯದರ್ಶಿ ಕೆ.ವಿ. ತ್ರಿಲೋಕ್ ಚಂದ್ರ ಉಪಸ್ಥಿತರಿದ್ದರು.
ಇದನ್ನೂ ಓದಿ:ಭಾರತ್ ಅಕ್ಕಿಯನ್ನು ಚುನಾವಣೆಗಾಗಿ ಜಾರಿಗೊಳಿಸಿದ್ರು, ಈಗ ನಿಲ್ಲಿಸಿದ್ದಾರೆ: ಮೋದಿ ಸರ್ಕಾರದ ವಿರುದ್ಧ ಸಿಎಂ ಕಿಡಿ - cm siddramaiah